Total Pageviews

Sunday, February 11, 2024

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the event of Navaratri Vahana Pooja during Chaturmasa Vrita to Lord Vedavyasa in Banglore Sri Kashimath. His ankita is ModaVithala. 

Lyrics are provided in both Kannada and Devanagiri script. 

Airavata Vahana

ಐರಾವತ ಏರಿದ ಪ್ರಭು ವೇದವ್ಯಾಸ |
ಸುರಗುರು ವಂದ್ಯ ಸದಾನಂದ ಶ್ರೀಶ || ಪ ||

ನಿಖಿಲಾಧಿಪ ಜಗದಂಬಾ-ರಮಣ |
ಅಖಿಲವ-ಭರಿಸಿದ ಬಾದರಾಯಣ ||
ಸಂಕರುಷಣ ಮೂಲ-ನಾರಾಯಣ |
ಶುಕನುತ ವಿಷ್ಣು ವರ-ಕರಿವಾಹನ || ೧ ||

ವೇದೋದ್ಧರ ಹರಿ ಮಧುಸೂದನ |
ವೇದೇಶ ಪಾಲಿಸು ವೈಕುಂಠ-ಸದನ ||
ವೇದಾಂತ-ವೇದ್ಯ ಮುನಿವಂದಿತ-ಚರಣ |
ಮೇದಿನಿ-ಶ್ರೀ-ಪತಿ ಹಸ್ತಿ-ವಾಹನ || ೨ ||

ವಾಸವೀಸುತ ಪೊರೆ ಸಂಕಟ-ಹರಣ |
ದೋಷವಿದೂರ ಗೋವಿಂದ ಸುನಯನ ||
ಈಶ ಮೋದವಿಠಲ ನೀಡು ಸುಜ್ಞಾನ |
ಕೇಶವ-ಅಜಪಿತ ಗಜೇಂದ್ರವಾಹನ || ೩ ||


ऐरावत एरिद प्रभु वेदव्यास |

सुरगुरु वंद्य सदानंद श्रीश || ||


निखिलाधिप जगदंबा-रमण |

अखिलव-भरिसिद बादरायण ||

संकरुषण मूल-नारायण |

शुकनुत विष्णु वर-करिवाहन || ||


वेदोद्धर हरि मधुसूदन |

वेदेश पालिसु वैकुंठ-सदन ||

वेदांत-वेद्य मुनिवंदित-चरण |

मेदिनि-श्री-पति हस्ति-वाहन || ||


वासवीसुत पॊरॆ संकट-हरण |

दोषविदूर गोविंद सुनयन ||

ईश मोदविठल नीडु सुज्ञान |

केशव-अजपित गजेंद्रवाहन || ||


Hamsa Vahana


ನೋಡುವ ಬನ್ನಿರೈ ವೇದವ್ಯಾಸನ |
ಪಾಡಿರೈ ಹಂಸವನೇರಿದ ದೋಷ-ದೂರನ || ಪ ||

ಪರಮ-ಮಂಗಲನ ಪರಮ-ಪುರುಷನಾ
ಪರಮ-ದಯಾಳು ಪರಮೇಶ್ವರನಾ |
ಪರಮಾತ್ಮ ನಿಜ-ಪರಮಾನಂದನಾ
ಪರಮಹಂಸ-ನುತ ಹಂಸ-ವಾಹನನ || ೧

ಸರ್ವೋತ್ತಮನಾ ದ್ವೈಪಾಯನನಾ
ಸರ್ವ-ವ್ಯಾಪ್ತನಾ ಬದರೀವಾಸನಾ |
ಸರ್ವ-ಶಕ್ತನಾ ಪಾರಾಶರನಾ
ಸರ್ವರೊಳಿಹ ಹರಿ ಹಂಸ-ವಾಹನನ || ೨

ಶೇಷ-ಶಯನನಾ ಶುಕಮುನಿ-ಜನಕನಾ
ವಾಸವ-ಪ್ರಿಯನಾ ಜ್ಞಾನಪೂರ್ಣನಾ |
ದಾಸರ-ಸಲಹುವ ಮೋದವಿಟಲನಾ
ಕ್ಲೇಶ-ಕಳೆವ ಋಜು ಹಂಸ-ವಾಹನನ || ೩

ಕೊನೆಯಲ್ಲಿ..

|| ನೋಡುವ ಬನ್ನಿರೈ (ವೇದ)ವ್ಯಾಸನ ||
ವ್ಯಾಸನಾ ರಘುರಾಮನಾ
ಕೃಪಾಪಾಂಗನಾ ನಾರಸಿಂಗನಾ
ಶ್ರೀನಿವಾಸನಾ, ಹೃಷೀಕೇಶನಾ
ಪದುಮನಾಭನ ಜ್ಞಾನದಾತನಾ
ಶಾಂತರೂಪನಾ ವೇದವೇದ್ಯನಾ.....
|| ನೋಡುವ ಬನ್ನಿರೈ (ವೇದ)ವ್ಯಾಸನ ||
ಹಸ್ತಿವಾಹನಾ ಶೇಷವಾಹನ
ಗರುಡವಾಹನ ವಾಯುವಾಹನ
.....ಹಂಸವಾಹನ
|| ನೋಡುವ ಬನ್ನಿರೈ (ವೇದ)ವ್ಯಾಸನ ||


नोडुव बन्निरै वेदव्यासन |

पाडिरै हंसवनेरिद दोष-दूरन || ||

परम-मंगलन परम-पुरुषना

परम-दयाळु परमेश्वरना |

परमात्म निज-परमानंदना

परमहंस-नुत हंस-वाहनन ||

सर्वोत्तमना द्वैपायनना

सर्व-व्याप्तना बदरीवासना |

सर्व-शक्तना पाराशरना

सर्वरॊळिह हरि हंस-वाहनन ||

शेष-शयनना शुकमुनि-जनकना

वासव-प्रियना ज्ञानपूर्णना |

दासर-सलहुव मोदविटलना

क्लेश-कळॆव ऋजु हंस-वाहनन ||


ಹಂಸವಾಹನ ಬಾದರಾಯಣ |
ಪೂರ್ಣ-ಗುಣಗಣ ದ್ವೈಪಾಯನ || ಪ

ವೇದವ ತಂದಿಹ ಚಂದದ ಮೀನನೇ
ಮೇದಿನಿ ಪೊತ್ತಿಹ ವರ-ಕಚ್ಛಪನೆ |
ಮದಿಸಿದವನ ಅರಿ ನರಹರಿ ರೂಪನೆ
ಮದನಮೋಹನ (ಸಿರಿ)ಹಂಸ-ವಾಹನನೇ || ೧

ಗಂಗಾ-ಜನಕನೇ ಬಲಿಯ ಗೆಲಿದನೆ
ತುಂಗ-ಮಹಿಮೆಯ ಭಾರ್ಗವ-ರಾಮನೆ |
ಭಂಗ-ಬಿಡಿಸಿ ಪೊರೆ ದಶರಥ-ಕುವರನೆ
ಹಿಂಗಿಸು ಪಾಪವ ಹಂಸ-ವಾಹನನೇ || ೨

ದಾನವಾಂತಕ ನಮ್ಮ ರುಕ್ಮಿಣಿಯೊಡಯನೇ
ಮಾನದಿ ಕಾಯ್ವ ವಿಶುದ್ಧ-ಬುದ್ಧನೇ  |
ಮುನಿಜನ ಸಲಹುವ ಕಲ್ಕಿ-ಸ್ವರೂಪನೆ
 ಘನ-ಮೋದವಿಟಲ ಹಂಸ-ವಾಹನನೇ || ೩


हंसवाहन बादरायण पूर्ण-गुणगण द्वैपायन ||


वेदव तंदिह चंदद मीनने  

मेदिनि पॊत्तिह वर-कच्छपनॆ |

मदिसिदवन अरि नरहरि रूपनॆ

मदनमोहन (सिरि)हंस-वाहनने ||


गंगा-जनकने बलिय गॆलिदनॆ

तुंग-महिमॆय भार्गव-रामनॆ |

भंग-बिडिसि पॊरॆ दशरथ-कुवरनॆ

हिंगिसु पापव हंस-वाहनने ||


दानवांतक नम्म रुक्मिणियॊडयने

मानदि काय्व विशुद्ध-बुद्धने |

मुनिजन सलहुव कल्कि-स्वरूपनॆ

घन-मोदविटल हंस-वाहनने ||

Ratha Vahana

ರಥವನೇರಿದ (ವೇದ) ವ್ಯಾಸನ ಕಂಡೆ |
ವಿತತಮಹಿಮನ ಶ್ರೀಶನ ಕಂಡೆ || ಪ

ರವಿಶಶಿ-ಕೋಟಿ ಸುತೇಜನ ಕಂಡೆ
ಅವಿರತ ಸಲಹುವ ಗುರುವನು ಕಂಡೆ |
ವಿವಿಧಾಲಂಕಾರ ಪ್ರಿಯನನು ಕಂಡೆ
ನವ-ದಿನದಲಿ ಶುಕಪಿತನನು ಕಂಡೆ || ೧

ಭಾರತ ಬರೆದ ರಮೇಶನ ಕಂಡೆ
ಮರುತನ ದೊರೆ ರಘುರಾಮನ ಕಂಡೆ |
ತರಳನ ಪೊರೆದ ಸಿಂಹನ ಕಂಡೆ
ನರನ-ಸಾರಥಿ ಶ್ರೀರಂಗನ ಕಂಡೆ || ೨

ವೇದವೇದ್ಯ ಮುನಿ-ವಂದ್ಯನ ಕಂಡೆ
ಮದನ-ಮೋಹನ ವಾಸಿಷ್ಠನ ಕಂಡೆ |
ಬಾದರಾಯಣ ಮಾಧವನನು ಕಂಡೆ 
ಮೋದ-ವಿಠಲನ (ಶ್ರೀ)-ರಥದಲಿ ಕಂಡೆ || ೩


रथवनेरिद (वेद) व्यासन कंडॆ |

विततमहिमन श्रीशन कंडॆ ||

रविशशि-कोटि सुतेजन कंडॆ

अविरत सलहुव गुरुवनु कंडॆ |

विविधालंकार प्रियननु कंडॆ

नव-दिनदलि शुकपितननु कंडॆ ||

भारत बरॆद रमेशन कंडॆ

मरुतन दॊरॆ रघुरामन कंडॆ |

तरळन पॊरॆद सिंहन कंडॆ

नरन-सारथि श्रीरंगन कंडॆ ||

वेदवेद्य मुनि-वंद्यन कंडॆ

मदन-मोहन वासिष्ठन कंडॆ |

बादरायण माधवननु कंडॆ

मोद-विठलन (श्री)-रथदलि कंडॆ ||

Pallakki Vahana

ಪಲ್ಲಕ್ಕಿಯಲಿ ವೇದವ್ಯಾಸ ಬರುತಿರುವೆ |
ಚೆಲುವ ಕೃಷ್ಣನೆ ಸತತ ಶೋಭಿಸುತ್ತಿರುವೆ  || ಪ 

ಜೀವ-ಜಾಲದ ಕಾರ್ಯ ಮಾಡಿ ಮಾಡಿಸುವೆ
ಜೀವೋತ್ತಮೋತ್ತಮ ನಿ ಎಂದವರ ಪೊರೆವೆ |
ಜೀವಕೋಟಿಯ ದಯದಿ ಪೊತ್ತು ಪಾಲಿಸುವೆ  ಸ-
ಜ್ಜೀವರಿಗೆ ಮೆಚ್ಚಿ (ನೀ) ಮುಕುತಿಯನೆ ಕೊಡುವೆ || ೧

ಸಜ್ಜನರಿಗೆ ಸುಜ್ಞಾನ ನೀಡಿ ರಕ್ಷಿಸುವೆ
ದುರ್ಜನರ ಸದೆಬಡಿದು ಶಿಕ್ಷಿಸುತ್ತಿರುವೆ |
ಹೆಜ್ಜೆ-ಹೆಜ್ಜೆಗೆ ನಿನ್ನ ನಾಮ ನಾ ನುಡಿವೆ    ವ-
ನಜ-ಸಂಭವನೆ ನಿನ್ನ ನಾ ಪಾಡಿ ನಲಿವೆ || ೨

ಪದುಮಭವ-ಮುಖ-ಸುರರ ಯಾಚನೆಯ ಫಲವೇ
ಬಾದರಾಯಣ ನೀನು ವಾಸವಿಯ ಶಿಶುವೇ? |
ಪಾದಕೆರಗುವ ಜನರ ಸಿರಿ ಕಲ್ಪತರುವೆ
ಮೋದವಿಟಲನೆ ಸಲಹು ದಯಮಾಡಿ ಪ್ರಭುವೇ  || ೩


पल्लक्कियलि वेदव्यास बरुतिरुवॆ |

चॆलुव कृष्णनॆ सतत शोभिसुत्तिरुवॆ ||

जीव-जालद कार्य माडि माडिसुवॆ

जीवोत्तमोत्तम नि ऎंदवर पॊरॆवॆ |

जीवकोटिय दयदि पॊत्तु पालिसुवॆ स-

ज्जीवरिगॆ मॆच्चि (नी) मुकुतियनॆ कॊडुवॆ ||


सज्जनरिगॆ सुज्ञान नीडि रक्षिसुवॆ

दुर्जनर सदॆबडिदु शिक्षिसुत्तिरुवॆ |

हॆज्जॆ-हॆज्जॆगॆ निन्न नाम ना नुडिवॆ व-

नज-संभवनॆ निन्न ना पाडि नलिवॆ ||


पदुमभव-मुख-सुरर याचनॆय फ़लवे

बादरायण नीनु वासविय शिशुवे? |

पादकॆरगुव जनर सिरि कल्पतरुवॆ

मोदविटलनॆ सलहु दयमाडि प्रभुवे ||


Surya Vahana

ವ್ಯಾಸನ್ನ ಬದರಿವಾಸನ್ನ
ಸೂರ್ಯ-ಯಾನನ್ನ ನೋಡಿ(ರಿ) ಕೃಷ್ಣನ್ನ || ಪ ||

ಭಾರತ ರಚಿಸಿದ ಮುನಿವೇಷನ್ನ ಸಕಲ
ಧರಣಿ ಬೆಳಗೊ ಸ್ವ-ಪ್ರಕಾಶನ್ನ |
ಸುರರ ಪಾಲಿಪ ಭಕ್ತ-ಪೋಷನ್ನ ದುರುಳ ಅ-
-ಸುರರ ಬಡಿಯುವ ನಿರ್ದೋಷನ್ನ || ೧

ಕ್ರಿಮಿಗೆ ಮುಕ್ತಿಯನಿತ್ತ ಆರ್ಯನ್ನ ನಿತ್ಯ
ಕುಮತಿ ಕಳೆವ ಯೋಗಿವರ್ಯನ್ನ |
ತಮವ ತರಿವ ಕೋಟಿ-ಸೂರ್ಯನ್ನ ನಿರುತ
ಅಮರ-ವಂದ್ಯ ಧರ್ಮ-ಚರ್ಯನ್ನ || ೨

ಬಾದರಾಯಣ ಶುಕತಾತನ್ನ ಮಾಧವ
ಪದುಮನಾಭ ಜ್ಞಾನದಾತನ್ನ |
ವೇದೋದ್ಧರನೆಂದು ವಿಖ್ಯಾತನ್ನ ಹರಿ
ಮೋದವಿಟಲ (ತ್ರಿ)ಜಗನ್ನಾಥನ್ನ || ೩

व्यासन्न बदरिवासन्न

सूर्य-यानन्न नोडि(रि) कृष्णन्न || ||



भारत रचिसिद मुनिवेषन्न सकल

धरणि बॆळगॊ स्व-प्रकाशन्न |

सुरर पालिप भक्त-पोषन्न दुरुळ अ-

-सुरर बडियुव निर्दोषन्न ||



क्रिमिगॆ मुक्तियनित्त आर्यन्न नित्य

कुमति कळॆव योगिवर्यन्न |

तमव तरिव कोटि-सूर्यन्न निरुत

अमर-वंद्य धर्म-चर्यन्न ||



बादरायण शुकतातन्न माधव

पदुमनाभ ज्ञानदातन्न |

वेदोद्धरनॆंदु विख्यातन्न हरि

मोदविटल (त्रि)जगन्नाथन्न ||

-----
ವೇದವ್ಯಾಸನೇ ಸೂರ್ಯವಾಹನನೇ (ನಿನಗೆ) ನಮೋ ನಮೋ |
ಭೂದೇವ-ವಂದ್ಯನೆ ಶ್ರೀನಿವಾಸನೆ (ನಿನಗೆ) ನಮೋ ನಮೋ || ಪ


ಮುಕ್ತಿ-ಮಾರ್ಗದಿ ಸದಾ ನಡೆಸು ನೀ ಕೇಶವನೆ
ನಕ್ತಚರರ ಸದೆಬಡಿಯುವ ನರ-ನಾರಾಯಣನೆ | (ನಮೋ ನಮೋ)
ಭಕ್ತಜನರ ಮೊರೆಯಾಲಿಸಿ ಪೊರೆವ ಮಾಧವನೆ
ಶಕ್ತಿ-ವಸಿಷ್ಠ ವಂಶಜ ವರ-ಗೋವಿಂದನೆ || ೧ (ನಮೋ ನಮೋ)

ಮಾಯೆಯ ಕಳೆ ಮಧುಸೂದನ ವಿಷ್ಣು ವಿಕ್ರಮನೆ
ದಯಾಸಿಂಧು ವಾಮನ ಇಂದ್ರಿಯಪತಿ ಶ್ರೀಧರನೇ | (ನಮೋ ನಮೋ)
ಹಯಾಸ್ಯ-ವಾರಿಜನಾಭನೇ ಸಿರಿ-ದಾಮೋದರನೆ
ಜಯಾ-ಪತಿ ಪ್ರದ್ಯುಮ್ನನೇ ಪೋಷಿಸು ವಸು-ಸುತನೆ || ೨ (ನಮೋ ನಮೋ)


ಸಾಗಿ-ಬಾರೋ ಅನಿರುದ್ಧನೆ ಪುರುಷೋತ್ತಮನೆ
ಬೇಗನೆ ಒಲಿಯೋ ಅಧೋಕ್ಷಜ ನರ-ಸಿಂಹನೇ | (ನಮೋ ನಮೋ)
ನಿಗಮವೇದ್ಯ ಚ್ಯುತಿರಹಿತ ಜನಾರ್ದನ ಭೂಧರನೇ
ಭೋಗಿಸುಶಯನ ಉಪೇಂದ್ರ ಹರಿ ಶ್ರೀ ಕಷ್ಣನೆ || ೩ (ನಮೋ ನಮೋ)

ಖಗಪತಿಯಾನ ಮಂದರಧರ ವಾಸವಿಸುತನೆ
ಜಗಜ್ಜನಕ ವೇದೋದ್ಧರ ಬದರಿಲಿ-ನಿಂದವನೆ | (ನಮೋ ನಮೋ)
ಯೋಗಿವರ್ಯನೆ ಜ್ಞಾನದಾತನೆ ಶುಕಪಿತನೆ
ನಗಧರ ರವಿಯಾನನೇ ಮೋದವಿಟ್ಠಲನೇ || ೪ (ನಮೋ ನಮೋ)


वेदव्यासने सूर्यवाहनने (निनगॆ) नमो नमो |

भूदेव-वंद्यनॆ श्रीनिवासनॆ (निनगॆ) नमो नमो ||



मुक्ति-मार्गदि सदा नडॆसु नी केशवनॆ

नक्तचरर सदॆबडियुव नर-नारायणनॆ | (नमो नमो)

भक्तजनर मॊरॆयालिसि पॊरॆव माधवनॆ

शक्ति-वसिष्ठ वंशज वर-गोविंदनॆ || १ (नमो नमो)


मायॆय कळॆ मधुसूदन विष्णु विक्रमनॆ

दयासिंधु वामन इंद्रियपति श्रीधरने | (नमो नमो)

हयास्य-वारिजनाभने सिरि-दामोदरनॆ

जया-पति प्रद्युम्नने पोषिसु वसु-सुतनॆ || २ (नमो नमो)



सागि-बारो अनिरुद्धनॆ पुरुषोत्तमनॆ

बेगनॆ ऒलियो अधोक्षज नर-सिंहने | (नमो नमो)

निगमवेद्य च्युतिरहित जनार्दन भूधरने

भोगिसुशयन उपेंद्र हरि श्री कष्णनॆ || ३ (नमो नमो)


खगपतियान मंदरधर वासविसुतनॆ

जगज्जनक वेदोद्धर बदरिलि-निंदवनॆ | (नमो नमो)

योगिवर्यनॆ ज्ञानदातनॆ शुकपितनॆ

नगधर रवियानने मोदविट्ठलने || ४ (नमो नमो)


Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...