।। हरि: ॐ श्री गुरुभ्यो नमः ।।
।। रुग्मिणीश विजयः ।।
(Continued from Part 1)
असंख्य पापाचल कोटिभाजां
दिते: सुतानां वशमागतेयम् ।
असह्यभारार्दितसर्वगात्री
जगाम धात्री शरणं विरिंचम् ।। 11।।
(ಇಲ್ಲಿಂದ ರಾಜರು ಶ್ರೀಕೃಷ್ಣನ ಅವತಾರಕ್ಕೂ, ಉದ್ದೇಶಿಸಿದೆ ಚರಿತ್ರೆಯನ್ನು ವರ್ಣಿಸಲಿಕ್ಕೂ ಪ್ರಾರಂಭಿಸುತ್ತಾರೆ.)
ದಿತಿಯ ಮಕ್ಕಳಾದ ರಕ್ಕಸರ ಪಾಪರಾಶಿಗಳೆಂಬ ಅಸಂಖ್ಯಾತ ಗುಡ್ಡ ಬೆಟ್ಟಗಳ ಭಾರ ಹೊರಲಾಗದೇ ಮೈತುಂಬಿದ ನೋವಿನಿಂದ ಕಂಗಾಲಾಗಿ ಧರಣೀದೇವಿಯು ಬ್ರಹ್ಮದೇವರಿಗೆ ಶರಣು ಬಂದಳು. ।।11।।
(Now Sri Vadiraja swamin
starts to describe the glory of Lord Krishna in a wonderful poetic style)
Bhudevi, suffering pains
in every joint of the body from the unbearable weight of mountainous sins from
the evil progenies of Ditidevi, the haters of Lord Mukunda, approaches Four
faced Brahma. ।।11।।
मुकुंदविद्वेषिभराभिनुन्ना
बभूव सा क्षान्तियुता$पि खिन्ना ।
तथा हि लोके पतिनिन्दकेभ्यः
पतिव्रतानामपरः क्व भारः ।। 12।।
ಅತ್ಯಂತ ಸಹನಶೀಲಳಾದರೂ ಕೂಡ ಮುಕುಂದನ ದ್ವೇಷಿಗಳ ಭಾರದಿಂದ ಮನಸ್ಸಿನಲ್ಲಿ ಖೇದಪಟ್ಟು ಕುಗ್ಗಿದಳು. ಲೋಕದಲ್ಲೂ ಕೂಡ ಪತಿವ್ರತೆಯರು ತಮ್ಮ ಗಂಡನನ್ನು ತೆಗಳುವವರನ್ನು ಸಹಿಸುವದಿಲ್ಲ ತಾನೇ! ।।12।।
Even though Bhudevi is
known for Her endurance and forbearance, she couldn't tolerate these Evil
haters of Mukunda. It is natural that a devoted wife shuns the enemies of
husband! ।।12।।
निशम्य गोब्राह्माणमुख्यबंधुं
ध्रुवं मुकुंदं शरणं व्रजंती ।
बभूव गोरूपधरा धरा सा
तमार्तभारापहरं च दीना ।।13।।
ಕಷ್ಟಬಂದಾಗ ಎಂದೂ ಕೈಬಿಡದೇ ಕಾಯ್ವ, ಗೋಬ್ರಾಹ್ಮಣ ಸಜ್ಜನರ ನಿಜಬಂಧು ಮುಕುಂದನಿಗೆ ಶರಣು ಬಂದು ಧರಣೀದೇವಿಯು ಗೋರೂಪಧರಿಸಿ ದೀನಳಾಗಿ ಹೊರಟಳು.।।13।।
When the noble are in
trouble, Lord Mukunda is the unfailing protector. Knowing this, Bhudevi takes
on the form of a cow and starts, giving Herself up to SriHari.।।13।।
विरिंचिवैरिंचिमुखामारेशा:
स्वपारतंत्र्यं भुवि दर्शयन्तः ।
हरिं धराकार्यकृते गृणंतः
पुरान्निरीयुर्हृदि तं स्मरन्तः।।14।।
ತಾವೆಲ್ಲರೂ ಹರಿಗಧೀನರು ಎನ್ನುವದನ್ನು ತೋರಿಸುತ್ತ, ತಮ್ಮ ಪಾರತಂತ್ರ್ಯವನ್ನು ಜಗಕ್ಕೇ ಬಯಲುಪಡಿಸುತ್ತ, ಚತುರ್ಮುಖ ಬ್ರಹ್ಮ, ರುದ್ರ, ಇಂದ್ರಾದಿ ದೇವತಾ ವೃಂದವು ಭೂದೇವಿಯನ್ನು ಕಾಯುವವನೊಬ್ಬನೇ ಎನ್ನುತ್ತ ಹೃದಯದಲ್ಲಿ ಹರಿಯನ್ನು ನೆನೆಸುತ್ತ ತಮ್ಮ ತಮ್ಮ ಲೋಕಗಳಿಂದ ಹೊರಹೊರಟರು.।।14।।
Making it apparent to
the world that they are all dependent upon Sri Hari , remembering Him deeply in
their hearts, four faced Brahma, Rudra, Indra alongwith other Gods start from
their places ( towards the ocean of milk) ।।14।।
सुरावली सा श्रुतिवर्ण्यवेषा
नभस्थले नष्टतमिस्रजाले ।
ययौ यतींद्रैरपि यत्नगम्याम्
पयोब्धिवेलां पतदूर्मीमालाम् ।।15।।
ತಮಸ್ಸಿನ ಲವಲೇಶ ಸ್ಪರ್ಶವೂ ಇಲ್ಲದ ಶುಭ್ರವಾದ ನಭದಲ್ಲಿ , ಕೇವಲ ವೇದಗಳಿಂದ ಮಾತ್ರ ತಿಳಿದುಕೊಳ್ಳಲು ಶಕ್ಯವಿರುವ ರೂಪಸಿರಿಯುಳ್ಳ ಆ ಮಹಾನ್ ದೇವತಾವೃಂದವು, ಯತಿವರೇಣ್ಯರಿಂದಲೂ ಮಹತ್ಯತ್ನದಿಂದ ಮಾತ್ರ ಹೋಗಲು ಸಾಧ್ಯವಾದ, ರಮಣೀಯವಾಗಿ ಉಕ್ಕೇರಿಬರುವ ಅಲೆಗಳಿಂದ ಸುಂದರವಾಗಿ ಕಾಣುವ ಕ್ಷೀರಸಾಗರದ ತೀರವನ್ನು ತಲುಪಿತು.।।15।।
These Gods, whose very
nature and appearance can only be known though Veda, reach the shore of the
ocean of milk situated in the pure space untouched by the darkness of tamas.
This place is beautiful with the divine waves of the milky ocean and is
achievable only with difficult tapas by the great ascetics.।।15।।
ततो$ब्जभू: क्षीरपयोब्धितीरे
समाधिमास्थाय सुसंयताक्षः ।
स्थिरासनः प्राणगणान्नियम्य
प्रचक्रमे प्रांजलिरात्मदीक्षाम् ।।16।।
ಕ್ಷೀರಸಾಗರದ ಆ ತೀರದಲ್ಲಿ ಕಮಲಸಂಭವನಾದ ಬ್ರಹ್ಮದೇವರು ಮನಸ್ಸನ್ನು ಏಕಾಗ್ರಗೊಳಿಸಿ, ಸಕಲ ಇಂದ್ರಿಯಗಳನ್ನು ನಿಯಂತ್ರಿಸಿ ಸ್ಥಿರವಾದ ಪದ್ಮಾಸನದಲ್ಲಿ ಕುಳಿತು ತಮ್ಮೊಡೆಯನನ್ನು ಧ್ಯಾನರೂಪ ಪೂಜೆಮಾಡಲು ಪ್ರಾರಂಭಿಸಿದರು. ।।16।।
On reaching there, the
great God Chaturmukha born from Lotus sits there in padmaasana. He controls all
His senses and concentrates His mind on Lord worshipping Him. ।।16।।
यदा स पद्मासनसंस्थितो$लं
जजाप विद्यामितरैरवेद्याम् ।
तदा प्रभृत्येव जगत्सु नूनं
बभूव पद्मासन शब्दितो$सौ ।।1711
ಹೀಗೆ ಚತುರ್ಮುಖ ಬ್ರಹ್ಮದೇವರು ಪದ್ಮಾಸನದಲ್ಲಿ ಕುಳಿತು ಯಾರಿಗೂ ಅರ್ಥವಾಗಲು ಅಶಕ್ಯವಾದ ಅನೇಕಾರ್ಥಗಳನ್ನು ಅನುಸಂಧಾನ ಮಾಡುತ್ತಾ (ಪುರುಷ ಸೂಕ್ತದ ಪ್ರತಿ ಅಕ್ಷರಕ್ಕೂ ಶ್ರೀಹರಿಯ ಮಹಿಮೆಯ ಬಗ್ಗೆ ಸಾವಿರಾರು ಅರ್ಥಗಳನ್ನು ತಿಳಿಯುತ್ತ) ಯಾವಾಗ ಶ್ರೀಮನ್ನಾರಾಯಣನ ಬಗ್ಗೆ ತಪಸ್ಸನ್ನು ಮಾಡಲು ಪ್ರಾರಂಭಿಸಿದರೋ ಆ ಹೊತ್ತಿನಿಂದಲೇ ಚತುರ್ಮುಖ ಬ್ರಹ್ಮದೇವರಿಗೆ *ಪದ್ಮಾಸನ* ಎಂಬ ಹೆಸರು ಪ್ರಸಿದ್ಧಿ ಪಡೆಯಿತು ।।17।।
Sitting with folded feet
in the lotus position (known as padmAsana)
Four faced Brahma meditates with the deepest of meanings of Vedic Purusha
sukta, extolling Lord, which are secret and unknown to anyone else.
As Chaturmukha sits in
the lotus position and worships Lord through Purusha Sukta, He becomes famous
with the name Padmaasana from that time onwards. ।।17।।
तदा तदन्यान्यपहाय हेया-
न्यारक्तचित्तः स विरिंचिपुत्रः।
स्तुवन् गिरिशो$पि गिरा मुरारि
मनंगजिद्दिग्वसनो बभूव ।।18।।
ಚತುರ್ಮುಖ ಬ್ರಹ್ಮದೇವರ ಪುತ್ರನಾದ ರುದ್ರದೇವರು ಶ್ರೀಹರಿಯನ್ನು ಬಿಟ್ಟು ಬೇರೆ ಎಲ್ಲವೂ ಸಾರವಿಲ್ಲವೆಂದು ತಿಳಿದು, ಎಲ್ಲದ್ದರ ಕಾಮನೆಗಳನ್ನು ತ್ಯಜಿಸಿ, ವೇದವಾಕ್ಯಗಳಿಂದ ಹರಿಯನ್ನು ಏಕಾಗ್ರಮನಸ್ಸಿನಿಂದ ಕೊಂಡಾಡುತ್ತ ಉಟ್ಟಬಟ್ಟೆಯನ್ನೂ ಉಪೇಕ್ಷೆ ಮಾಡಿದುದರಿಂದ ಅಂದಿನಿಂದ ಕಾಮನನ್ನು ಜಯಿಸಿದವನು ಮತ್ತು ದಿಗಂಬರನು ಎಂದೇ ಪ್ರಸಿದ್ಧನಾದನು ।।18।।
Rudra, son of Four faced
Brahma, realizing that everything apart from Sri Hari is without any
importance, left attachment to all sense objects, started meditating on
Narayana with Vedic hymns with such a deep concentration that he neglected his
clothes. Since then he became famous as one who won the Lord of desires
(anangajit) and digambara।।18।।
तदैव शेषो$जनि वायुभक्षः
सहस्र नेत्रो$पि तदैव नूनम् ।
शतक्रतुः सुप्तिविदूरभावा
बभूवुरस्वप्नपदाश्च देवाः ।।19।।
ಕೇವಲ ಗಾಳಿಯನ್ನು ಮಾತ್ರ ಸ್ವೀಕರಿಸಿ ಶ್ರೀಹರಿಯನ್ನು ಕುರಿತು ಶೇಷದೇವರು ತಪಸ್ಸು ಮಾಡಿದ ಕಾರಣದಿಂದ ವಾಯುಭಕ್ಷ ಎಂದೆನಿಸಿದನು. ಇಂದ್ರನು ತನ್ನ ಸಾವಿರಕಣ್ಣುಗಳನ್ನು ಶ್ರೀಹರಿಯ ಮೇಲೆಯೇ ಕೇಂದ್ರೀಕೃತ ಮಾಡಿ ತಪಸ್ಸುಗೈದನು. ಅದರಿಂದ ಶತಕೃತು ಎಂದೆನಿಸಿದನು. ನಿದ್ರಾಲಸ್ಯಗಳಿಲ್ಲದೇ ಜಾಗೃತರಾಗಿ ಶ್ರೀಹರಿಯನ್ನು ಭಜಿಸಿದುದರಿಂದ ದೇವತೆಗಳೆಲ್ಲರೂ ಅಸ್ವಪ್ನರೆಂದು ಖ್ಯಾತಿಪಡೆದರು ।।19।।
Sustaining only on air
Shesha performed austerity towards Sri Hari and came to be known as Vayu bhaksha Indra concentrated his
thousand eyes on SriHari and performed austerity and came to be known as shatakratu All other Gods meditated on
Vishnu without sleep and with care. So Gods came to be known as aswapna (one without dreams) ।।19।।
रसा पिपासोग्रभराशानाया
विषह्य विष्णुम् मनसा$चलेन ।
तदा$नुधावंत्यचलेति सर्वं
सहेति नूनं जगदे जगत्याम् ।।20।।
.
ಧರಣೀದೇವಿ ಕೂಡ ತನ್ನ ಮೇಲಿರುವ ಭಾರವನ್ನೂ, ಅಸಹ್ಯ ಹಸಿವು ನೀರಡಿಕೆಗಳನ್ನೂ ಲೆಕ್ಕಿಸದೇ ಎಲ್ಲವನ್ನೂ ಧೃಡಮನಸ್ಸಿನಿಂದ ಸಹಿಸುತ್ತ ಏಕಾಗ್ರವಾಗಿ ಶ್ರೀಹರಿಯನ್ನು ನೆನೆಯುತ್ತಲಿದ್ದಳು. ಅದರಿಂದಲೇ ಮುಂದೆ ಅವಳು ಅಚಲಾ, ಸರ್ವಂಸಹಾ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದಳು. ।।20।।
Bhudevi, tolerating the
extreme weight, hunger and thirst, kept her mind steady on Lord Vishnu without
wavering. Thus she came to be known as achalaa
and sarvam sahaa ।।20।।
सहस्रकार्येषु भवान् समर्थः
सहस्रनेत्राननपाणिपादः ।
इतीव विज्ञापयितुं विरिंचः
स्तुतिं स पुंसूक्तगतां ततान ।।21।।
ಶ್ರೀಹರಿಯೇ ಅನಂತ ಕಣ್ಣು,ಮುಖ, ಕೈಕಾಲುಗಳುಳ್ಳವನಾಗಿ ಅನಂತಾನಂತ ಕಾರ್ಯಗಳನ್ನು ಮಾಡಲು ಸಮರ್ಥನೆಂದು ತೋರಿಸಲೇ ಚತುರ್ಮುಖ ಬ್ರಹ್ಮದೇವರು ಪುರುಷಸೂಕ್ತದಲ್ಲಿರುವ ಗುಣಗಣಗಳಿಂದಲೇ ಶ್ರೀಹರಿಯನ್ನು ಸ್ತುತಿಸಿದರು. ।।21।।
To show that Sri Hari alone
is capable of the innumerable actions, Four faced Brahma eulogised through
Purusha Sukta which says Sri Hari is endowed with countless eyes, faces, hands
and legs. ।।21।।
तच्चित्ते$oकुरित: सुभक्तिलतया श्लिष्टः प्रमोदाश्रुभिः
सिक्तः सत्पुलकालिमूलविततः कायप्रभापल्लवः ।
इशन्मीलितनेत्र कुडमलयुतः शाखासहस्रोर्जितः
प्राप्तः श्रीरमणद्विजेन फलितस्तद्ध्यान कल्पद्रुमः ।।22।।
.
(ಈ ಶ್ಲೋಕವು ಅತ್ಯದ್ಭುತ ಉಪಮಾಲಂಕಾರದಿಂದ ಕೂಡಿದ್ದು ಸರಳಾನುವಾದದಿಂದ ಅರ್ಥವಾಗುವದಿಲ್ಲ. ಆದುದರಿಂದ ಬಿಡಿಸಿ ಬಿಡಿಸಿ ಬರೆಯಲಾಗಿದೆ. ಈ ಗ್ರಂಥದಲ್ಲಿ ಇದೇ ತರಹದ ಹಲವಾರು ಶ್ಲೋಕಗಳಿರುವದರಿಂದ ಈ ಶ್ಲೋಕಾರ್ಥ ಬರೆದ ಪದ್ಧತಿಯನ್ನೇ ಅನುಸರಿಸಲಾಗುವದು)
ಇಲ್ಲಿ ಹಿಂದೆ ವರ್ಣಿಸಿದ ಚತುರ್ಮುಖಾದಿ ದೇವತಾಗಣಗಳ ಧ್ಯಾನವನ್ನು ಕಲ್ಪವೃಕ್ಷಕ್ಕೆ ಹೋಲಿಸಲಾಗಿದೆ. ಅಂತಹ ಕಲ್ಪವೃಕ್ಷವು ಆ ದೇವತೆಗಳ ಚಿತ್ತವೆಂಬ ಭೂಮಿಯಲ್ಲಿ ಹುಟ್ಟಿ, ಅವರು ಆನಂದದಿಂದ ಸುರಿದ ಕಣ್ಣೀರಿನಿಂದ ಬೆಳೆಯಿತು. ನಾರಾಯಣನ ಗುಣಗಳ ಸ್ಮರಣೆಯಿಂದ ನಿಮಿರಿನಿಂತ (ರೋಮಾಂಚನಗೊಂಡ) ದೇಹದ ರೋಮಗಳೇ ಅದರ ಬೇರುಗಳು. ದೇವತೆಗಳಿಂದ ಉಕ್ಕಿಹರಿವ ಭಕ್ತಿರಸವೇ ಆ ಧ್ಯಾನಕಲ್ಪವೃಕ್ಷವನ್ನು ಸುತ್ತಿ ನಿಂತ ಲತೆ. ಧ್ಯಾನದ ಸಮಾಧಿಕಾಲದಲ್ಲಿ ಹೊಳೆಯುವ ಅವರ ದೇಹದ ಕಾಂತಿಯೇ ಆ ವೃಕ್ಷದ ಚಿಗುರೆಲೆಗಳೂ, ಅರೆತೆರೆದ ಕಣ್ಣುಗಳೇ ಹೂವಿನ ಮೊಗ್ಗೆಗಳು. ಸಮಸ್ತವೇದದ ಸಹಸ್ರಾರು ಶಾಖೋಪಶಾಖೆ ಗಳಿಂದ ಎತ್ತರವಾಗಿ ಕಾಣುವ, ಆ ಸುರಶ್ರೇಷ್ಠರ ಧ್ಯಾನದ ಪಕ್ವತೆಯೇ ಕಲ್ಪವೃಕ್ಷದ ಮಾಗಿದ ರಸಭರಿತ ಹಣ್ಣುಗಳು.
ದೇವಶ್ರೇಷ್ಠರ ಶ್ರೀಹರಿಯ ಧ್ಯಾನವೆಂಬ ಇಂತಹ ಕಲ್ಪವೃಕ್ಷದ ತುದಿಯಲ್ಲಿ ಲಕ್ಶ್ಮೀರಮಣನೆಂಬ ಪಕ್ಷಿ ಬಂದು ಕುಳಿತನು.
(ದೇವತೆಗಳ ಉತ್ಕೃಷ್ಟಭಕ್ತಿಗೆ ವಶನಾಗಿ ಅವರ ಧ್ಯಾನದಲ್ಲಿ ದರ್ಶನವಿತ್ತನು ಎಂದು ರಾಜರು ಸುಂದರವಾದ ವರ್ಣನೆಯಿಂದ ಹೇಳುತ್ತಾರೆ.) ।।22।।
(This verse contains
numerous similes and a simple word to word translation will not be able to
carry the intent. Therefore a longer description is given. As this composition
has many verses of the same type, this method will be followed in such verses
in future also.)
The meditation on Sri
Hari by the Highest echelons of Godheads described in earlier verses is
compared to the divine tree, kalpavriksha, which gives everything you wish for.
That divine tree was planted on the fertile soil of the mind of the Gods. It
was watered with the tears of joy from remembering the greatness of Sri Hari by
the Gods. And the hairs of the bodies of Gods risen with goosebumps are the
roots of the tree. The vine encircling the tree was the flow of devotion from
the Gods. The shining aura of the bodies of the devoted Gods during the deep
meditation were the tender leaves. The half-closed eyes of Gods in deep
contemplation were the flower buds. The tree was looking full and tall with
thousands of branches of vedic hymns. The sweet richness of the maturity of the
meditation by the Gods were the tasty fruits.
AND THEN...
The Bird called Sri Hari
came and rested on top of that tree.
( With these
breathtakingly beautiful similes Sri Vadiraja teertha swamiji describes that
Sri Hari appears in the mind of the Gods, pleased with their devotion and
austerities) ।।22।।
ततः प्रसन्न: करुणाम्बुराशिः
सुरान् समास्वास्य विरिंचपूर्वान्।
धरां गतक्लेशभरां विधाय
स्वकीयमायां हरिरित्य वोचत् ।।23।।
ಕರುಣಾಸಮುದ್ರನಾದ ಶ್ರೀಹರಿ (ಚತುರ್ಮುಖನ ಮನೋಗೋಚರನಾಗಿಯೇ) ಭೂದೇವಿಯ ಕಷ್ಟವನ್ನು ಪರಿಹರಿಸುವ ಆಶ್ವಾಸನೆಯಿತ್ತು ತನ್ನವಳೇ ಆದ ಪ್ರಕೃತ್ಯಭಿಮಾನಿ ಮಾಯಾದೇವಿ ಶ್ರೀಲಕ್ಷ್ಮೀದೇವಿಗೆ ಹೀಗೆ ಹೇಳಿದನು. ।।23।।
Sri Hari, the kindest of
all, ( in the mind of) Four faced Brahma promised to get Bhudevi rid of
her sufferings told Sri Lakshmidevi, governed by His wish and controller of the
insentient prakRiti thus.. ।।23।।
देवेषु धाता प्रभुरस्य लक्ष्मी:
तस्याः प्रभु: सो$हमितीव शंसन्।
आज्ञामजस्यैव ददावदृश्यों
विज्ञेयमूर्ति: स्फुटमिन्दिरायाः।।24।।
(ಈ ಮೇಲಿನ ಪ್ರಸಂಗ ತಾರತಮ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ)
"ದೇವತೆಗಳಿಗೆ ಒಡೆಯ ಚತುರ್ಮುಖ, ಲಕ್ಷ್ಮೀದೇವಿ ಚತುರ್ಮುಖನಿಗೆ ಮತ್ತು ಅವರೆಲ್ಲವರಿಗೆ ನಾನೇ ಪ್ರಭು" ಹೀಗೆಂದು ತಿಳಿಸಲೋಸುಗವೋ ಎಂಬಂತೆ ಶ್ರೀಹರಿ ಚತುರ್ಮುಖನಿಗೆ ಅದೃಶ್ಯನಾಗಿ ಮತ್ತು ಲಕ್ಷ್ಮೀದೇವಿಗೆ ಸಾಕ್ಷಾತ್ ಆಜ್ಞಾಪಿಸಿದನು.।।24।।
As if declaring that
"Four faced Brahma is Lord of all devatas, Lakshmidevi rules Him and I am
the Lord of all" Sri Hari gives order to Chaturmukha in his mind and
orders Lakshmidevi, being visible to Her.।।24।।
त्वमेत्य देवक्युदरस्थगर्भम्
निधेहि रोहिन्युदरे स्वशक्त्या ।
इतीरिता तं रमणं रमा सा
प्रदक्षिणीकृत्य तथा$करोत्तत् ।।25।।
(ಲಕ್ಷ್ಮೀದೇವಿಗೆ ಏನೆಂದು ಆಜ್ಞೆ ಮಾಡುತ್ತಾನೆ ಎಂದರೆ ಹೇಳುತ್ತಾರೆ)
“ಈಗ ಭೂಮಿಗೆ ಹೋಗಿ ದೇವಕಿಯ ಗರ್ಭದಲ್ಲಿ ಬೆಳೆಯುತ್ತಿರುವವನನ್ನು ನಿನ್ನ ಶಕ್ತಿಯಿಂದ ಸೆಳೆದುಕೊಂಡು ಹೋಗಿ ರೋಹಿಣೀದೇವಿಯ ಉದಾರದಲ್ಲಿಡು" ಅವಳಾಗ ತನ್ನ ಪತಿಯ ಆಜ್ಞೆಯಂತೆ ಹಾಗೆಯೇ ಮಾಡಿದಳು. ।।25।।
(Shri Hari orders
Lakshmidevi)
“Go to earth and with
your power carry the foetus growing in Devaki's womb and place it in Rohini
devi's womb" She quickly carries out Her Lord's wish. ।।25।।
आज्ञापयामास पूरा स शेषं
जज्ञे स रोहिण्युदरोदयाद्रे:।
संप्रेषयन्ति स्म नरैर्नरेंद्रा:
शय्यां स्वकीयां पुरतः प्रयाणे ।।26।।
ಶ್ರೀಹರಿಯು ತಾನು ಅವತರಿಸುವ ಮೊದಲೇ ಅವತರಿಸುವಂತೆ ಶೇಷದೇವರಿಗೆ ಆಜ್ಞೆಯನ್ನಿತ್ತಿದ್ದ. ಅದರಂತೆ ಶೇಷದೇವರು ರೋಹಿಣಿದೇವಿಯ ಉದರವೆಂಬ ಉದಯಾಚಲದಿಂದ ಭೂಮಿಯ ಮೇಲೆ ಉದಯಿಸಿದರು. ಚಕ್ರವರ್ತಿಗಳು ತಾವು ಪಯಣಿಸುವ ಮುಂಚೆಯೇ ತಮ್ಮ ಮಂಚವನ್ನು ಕಳುಹಿಸುತ್ತಾರೆ ತಾನೇ! ।।26।।
Sri Hari had ordered
Shesha to descend to earth before He Himself came down. So Shesha took birth
from Rohini devi as the sun rises from the mountain udayachala. It is but
natural for a King to send his seat and bed before he sets on journey ।।26।।
केशात्मना सन्निहितः स तस्मिन्
श्रीशो$ग्रजत्वं स्वयमेव नूनम् ।
धत्ते विधत्ते बलभद्र मातु-
र्नित्यं स्वमातृत्वसुखं सुखात्मा ।।27।।
ಶೇಷಾವತಾರಿ ಬಲರಾಮನಲ್ಲಿ ತನ್ನ ಶುಕ್ಲಕೇಶ ರೂಪದಿಂದ ಇದ್ದು ತನಗೆ ತಾನೇ ಅಣ್ಣನೆನೆಸಿಕೊಂಡನು. ಮತ್ತು ರೋಹಿಣೀದೇವಿಗೆ ತನ್ನ ಮಾತೆಯಿಂದೆನಿಸಿಕೊಳ್ಳುವ ಸುಖಪ್ರದ ಸನ್ನಿವೇಶವನ್ನು ನೀಡಿದನು. ।।27।।
Sri Hari resides in
Balarama with His white hair form and therefore is both as an elder brother to
Himself. And blesses Rohini devi to enjoy the fortune of being His mother ।।27।।
बलात् प्रगृह्य स्वकवाटपालौ
निशाचरौ भूतलमेत्य दृप्तौ ।
नृतस्करौ तौ विनिहत्य विष्णु
र्निजौ निनीषन्निन गां गतो$भूत् ।।28।।
ಇಬ್ಬರು ದೈತ್ಯರು ಬಲಾತ್ಕಾರದಿಂದ ತನ್ನ ದ್ವಾರಪಾಲಕರಿಬ್ಬರನ್ನು ಭೂಮಿಗೆ ಎಳೆದೊಯ್ದು ಗರ್ವಿತರಾಗಿದ್ದಾರೆ. ಆ ನರಚೋರರನ್ನು ಕೊಂದು ತನ್ನವರಾದ ದ್ವಾರಪಾಲಕರನ್ನು ತಿರುಗಿ ಒಯ್ಯುವ ಇಚ್ಛೆಯುಳ್ಳವನೋ ಎಂಬಂತೆ ಶ್ರೀಹರಿಯು ಭೂಮಿಗೆ ಬಂದನು. ।।28।।
Two Demons have abducted
two of my door keepers and have taken them to earth. Sri Hari came down to earth,
looking as if to kill those two arrogant devils and take back His servants. ।।28।।
न गर्भवासो मम निर्मलस्ये-
त्यदो बुधान् बोधयितुं हृदेव ।
फणीश्वरं गर्भगतं विधाय
पुनः स्वयं सन्निहितो बभूव ।। 29 ।।
ಗರ್ಭವಾಸಾದಿ ದುಃಖಗಳು ದೋಷದೂರನಾದ ತನಗಿಲ್ಲ ಎನ್ನುವದನ್ನು ಸಜ್ಜನರಿಗೆ ತಿಳಿಸುವದಕ್ಕೋಸ್ಕರವೇ ಮೊದಲು ಫಣಿರಾಜನಾದ ಶೇಷನನ್ನು ಗರ್ಭದಲ್ಲಿರಿಸಿ ಅವನನ್ನು ಸೆಳೆದೊಯ್ದು ಬೇರೆಡೆ ಇಟ್ಟು ಆನಂತರ ತಾನು ಬಂದು ಅಲ್ಲಿ ಸನ್ನಿಹಿತನಾದನು. ।।29।।
As if to demonstrate
that He is untouched by any kind of suffering like growing in the womb, Sri
Hari compelled Shesha to enter the womb first. Then He replaced Shesha
with Himself. ।।29।।
गर्भे$प्यादभ्रात्मसुखैकमूर्ति-
मभ्येत्य पद्मासनमुख्यदेवाः ।
गीर्भिर्भवद्गर्भनिवासजार्ति-
निर्भङ्गसिद्ध्यर्थमिवास्तुवंस्तम् ।।30।।
ಗರ್ಭದಲ್ಲಿದ್ದರೂ ಕೂಡ ಯಾವುದೇ ತರದ ದುಃಖಲೇಪಗಳಿಲ್ಲದೇ ಸದಾ ಆನಂದದ ಮೂರ್ತಿಯೇ ಆದ ಶ್ರೀಹರಿಯನ್ನು ಚತುರ್ಮುಖ ಬ್ರಹ್ಮಾದಿ ದೇವತಾ ಶ್ರೇಷ್ಠರು ಸ್ತುತಿಸುತ್ತಾರೆ. ಇದರಿಂದ ತಮಗೂ ಕೂಡ ಗರ್ಭವಾಸಾದಿ ದುಃಖಗಳಿಂದ ಶ್ರೀಹರಿಯು ಮುಕ್ತಿಯನ್ನೀಯಲಿ ಎಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ।।30।।
The great Gods
Chaturmukha and others pray to Sri Hari in the womb, knowing that He is
untouched by any kind of such sufferings and remains blissful.They pray Sri
Hari as if to get released from the suffering of being born by the Grace of
Lord. ।।30।।
.
अथो जयंत्यामुदभून्निशीथे
शशीव देवक्युदरोदयाद्रे:।
दिगष्टके रात्रिचरान् जिगीषो-
स्तिथिर्निशा सा च गुणोचितैव ।।31।।
(ಮಂಗಲಮಯವಾದ ಚರಿತ್ರೆಯ ಪ್ರಾರಂಭವೆಂದು ಸೂಚಿಸಲು ರಾಜರು *ಅಥ* ಶಬ್ದದಿಂದ ಪ್ರಾರಂಭಿಸುತ್ತಾರೆ) ಆನಂತರ ಶ್ರೀಹರಿಯು ಜಯಂತೀ ಮುಹೂರ್ತದಲ್ಲಿ (ಸಿಂಹಮಾಸ ಶ್ರಾವಣ ಕೃಷ್ಣಪಕ್ಷ ಅಷ್ಟಮಿಯಂದು ರೋಹಿಣೀ ನಕ್ಷತ್ರವಿರಲು) ಅರ್ಧರಾತ್ರಿಯಲ್ಲಿ ದೇವಕೀದೇವಿಯ ಉದರವೆಂಬ ಉದಯಪರ್ವತದಿಂದ ಚಂದ್ರನಂತೆ ಉದಯಿಸಿದನು. ಎಂಟೂ ದಿಕ್ಕುಗಳಲ್ಲಿರುವ ನಿಶಾಚರರಾದ ರಕ್ಕಸರನ್ನು ಜಯಿಸಲು ಅವತರಿಸಿದ ಶ್ರೀಹರಿಗೆ ಆ ಅಷ್ಟಮಿಯೂ, ರಾತ್ರಿಯೂ, ಮುಹೂರ್ತವೂ ಇದನ್ನೇ ಘೋಷಿಸುವಂತಿತ್ತು.
(ಅಷ್ಟಮಿಯು ಎಂಟು ದಿಕ್ಕುಗಳನ್ನು ಸೂಚಿಸಿದರೆ, ರಾತ್ರಿ ನಿಶಾಚರರಾದ ರಾಕ್ಷಸರನ್ನೂ, ಜಯಂತೀ ಮುಹೂರ್ತವು ಶ್ರೀಹರಿಯು ಅಜೆಯನೆಂದೂ ಸೂಚಿಸುತ್ತದೆ) ।।31।।
(Indicating that the
avatara of SriHari is start of the auspicious period, Sri Vadiraja teertha begins
the verse with the word atha).
So, therefore Sri Hari
appears on the eighth day of dark half of Shravan masa when Sun was in Leo at
midnight from the womb of Devaki devi, as if the moon appears from the mountain
udayachala. This combination is famous as jayanti.
The time of His appearance does indeed signify the purpose for His avatara. The
night and eighth day signifying, the demons in all eight directions who are
active in the night time the jayanti muhurta signifies that Lord always wins. ।।31।।
प्रथां यशोदासुत इत्युदारां
करिष्यमाणो जननीमिवान्याम् ।
स देवकीगर्भभवो$नुगृह्णन्
ततान रोहिण्युदयप्रसिद्धिम् ।।32।।
ದೇವಕೀದೇವಿಯಲ್ಲಿ ಜನಿಸಿದರೂ ಯಶೋದೆಯ ಮಗನೆಂದು ಹೆಸರುವಾಸಿಯಾದನು. ಆದರೆ ರೋಹಿಣೀ ನಕ್ಷತ್ರದಲ್ಲಿ ಅವತರಿಸಿ ಬಲರಾಮನ ತಾಯಿ ರೋಹಿಣೀದೇವಿಯನ್ನೂ ಅನುಗ್ರಹಿಸಿದನು.( ಇಲ್ಲಿ ರಾಜರು ಶ್ರೀಹರಿಯ ಜನ್ಮ ನಕ್ಷತ್ರ ರೋಹಿಣಿಯಾದುದರಿಂದ ಬಲರಾಮನ ತಾಯಿ ರೋಹಿಣಿಯೂ ಅನುಗ್ರಹಿಸಲ್ಪಟ್ಟಳು ಎನ್ನುತ್ತಾರೆ) ।।32।।
Though born in Devaki,
He becomes known as son of Yashoda devi. And being born in the star Rohini
He graces Rohini, mother of Balarama. (Sri Vadiraja teertha poetically
describes that as the name of the star and mother of Balarama is same, it
is as if Lord has graced her) ।।32।।
यदा हरि: प्रादुरभूत्कलाभिः
तदा समायव्ययवांश्च चंद्रः ।
प्रियाप्रियाप्त्येव निजान्वयोत्थ
मुकुंद वक्त्रेन्दुकलावलोकात् ।।33।।
(ಈ ಶ್ಲೋಕವು ರಾಜರ ಬಹುಸುಂದರವಾದ ಕಲ್ಪನೆಯನ್ನು ತೋರಿಸುತ್ತದೆ)
ಶ್ರೀಹರಿ ಅವತರಿಸಿದ್ದು ಚಂದ್ರವಂಶದಲ್ಲಿ. ತನ್ನ ಕುಲದಲ್ಲಿ ಅವತರಿಸಿ ತನ್ನ ಕೀರ್ತಿಯನ್ನು ಹರಡಿದನೆಂದು ಚಂದ್ರನು ಅರ್ಧ ಹಾರುಷಗೊಂಡನಂತೆ! ಆದರೆ ಶ್ರೀಕೃಷ್ಣನ ಮುಖಚಂದ್ರದ ಅಪ್ರತಿಮಕಲೆಯಿಂದ ತನ್ನ ಕಲೆಯು ಹಿಂದುಬಿತ್ತೆಂದು ಅರ್ಧ ದುಃಖವಾಯಿತಂತೆ. ಅದಕ್ಕಾಗಿ ಚಂದ್ರನು (ಅಷ್ಟಮಿ ತಿಥಿಯಲ್ಲಿ) ಅರ್ಧಕಲೆ ಉಳ್ಳವನಾದನಂತೆ! ( ಅಷ್ಟಮಿ ತಿಥಿಯಲ್ಲಿ ಚಂದ್ರನು ಅರ್ಧಪ್ರಕಾಶವುಳ್ಳವನು) ।।33।।
(In this verse Sri
Vadiraja teertha gives a run for His imagination.)
Moon is half pleased as
Lord has taken birth in hi kula. At the same time he is half sad that his
pleasantness is overridden by the most pleasing countenance of Sri Krishna's
face! (The reason for Moon being half bright on the eighth day of the dark
half of the month is because he is pleased as well as sad!) ।।33।।
तदैव गन्धर्व गणा जगुस्तं
तिलोत्तमाद्या ननृतुस्तदैव ।
स्वगीतनाट्येन विजेष्यमाणं
तमात्मसात्कर्तुमिवाशु बाल्ये ।।34।।
ಮುಂದೆ ತನ್ನ ಮೋಹಕಸಂಗೀತ ಮತ್ತು ನರ್ತನಕಲೆಯಿಂದ ಜಗದ ಜನರನ್ನೆಲ್ಲ ವಶಪಡಿಸಿಕೊಳ್ಳುವವನನ್ನು ಈಗಲೇ ತಾವು ವಶಪಡಿಸಿಕೊಳ್ಳೋಣ ಎಂಬಂತೆ ಗಂಧರ್ವರು ಶ್ರೀಕೃಷ್ಣನು ಹುಟ್ಟುತ್ತಲೇ ಹಾಡಿದರು. ತಿಲೋತ್ತಮೆಯೇ ಮುಂತಾದ ಅಪ್ಸರೆಯರು ಕುಣಿದಾಡಿದರು. ।।34।।
Knowing that Lord will
win the hearts of people with His singing and dancing prowess, the divine
singers, Gandharvas sing melodiously and the divine beautiful dancers like
Tilottama dance at the birth of Sri Krishna as if to win Him over now only. ।।34।।
दिशो यशोभिः परिपूरयिष्य-
त्युदग्रचेष्टः स इति प्रहृष्टा: ।
रसा प्रसन्ना किल रंजितां मां
करिष्यति स्वांघ्रितलश्रियेति ।।35।।
.
ತನ್ನ ಯಶೋಗಾಥೆಗಳಿಂದ ದಿಕ್ಕುಗಳೆಲ್ಲವನ್ನು ತುಂಬಿ ಬಿಡುತ್ತಾನೆ ಎಂದು ದಿಕ್ಕುಗಳು ಆನಂದಪಡುತ್ತವೆ. ತನ್ನ ಕಾಲಿನ ಕಾಂತಿಯಿಂದ ತನ್ನನ್ನು ರಂಜಿಸುತ್ತಾನೆ ಎಂದು ಭೂದೇವಿಯ ಮನಸ್ಸು ಪ್ರಸನ್ನವಾಗುತ್ತದೆ. ।।35।।
The Directions were full
of happiness knowing that Lord will fill them with His fame. Bhudevi feels very
pleasant knowing that she will be decorated with His footmarks. ।।35।।
तदैव देवा ववृषु प्रसूनैः
हृदि स्मरन्तो वचसा स्तुवन्तः ।
नगेंद्रमैन्द्रम् भुवि नेश्यतो$स्य
मनः समुद्बोधयितुं पुरैव ।।36।।
ಇಂದ್ರನ ನಗರಿಯಲ್ಲಿರುವ ಪಾರಿಜಾತ ವೃಕ್ಷವನ್ನು ಭೂಮಿಗೆ ನೀನು ಮುಂದೆ ಒಯ್ಯಬೇಕೆಂದು ಈಗಲೇ ನೆನಪಿಸಬೇಕೆಂಬಂತೆ ದೇವತಾವೃಂದವು ಹೃದಯದಲ್ಲಿ ಶ್ರೀಕೃಷ್ಣನನ್ನು ನೆನೆಸುತ್ತ, ಬಾಯಿಯಿಂದ ಕೊಂಡಾಡುತ್ತ ಅವನು ಹುಟ್ಟುತ್ತಲೇ ಹೂಮಳೆ ಗೈದಿತು.।।36।।
As if to remind Sri
Krishna that He has to carry the divine parijata flower tree from the Heavens,
Kingdom of Indra to earth the Gods rain flowers on little Krishna, remembering
His virtues and praying His greatness.।।36।।