।। हरि: ॐ श्री गुरुभ्यो नमः ।।
।। रुग्मिणीश विजयः ।।
(Continued from Part 2)
पुत्रत्वादिह वासुदेवपदवी यद्यस्य शौरेस्तदा
नः पुत्रत्वकृता$स्तु सेति वसवो देवाश्च हॄष्टा ध्रुवम् ।
यद्यस्यानकदुन्दुभीष्टशिशुता सो$स्माकमेवं शिशु:
तर्हीत्यानाकदुंदुभिध्वनिरभूत्व्यो म्नि स्वयंभूदये ।।37।।
ಶ್ರೀಕೃಷ್ಣನು ವಸುದೇವನ ಪುತ್ರನೆಂಬ ಸಂಬಂಧದಿಂದ ವಾಸುದೇವ ಎಂದು ಕರೆಸಿಕೊಂಡಲ್ಲಿ ನಮಗೂ ಸಂಬಂಧವಿರುವದರಿಂದ ವಾಸುದೇವನೆನಿಸುತ್ತಾನೆ ಎಂದು ಅಷ್ಟವಸುಗಣದೇವತೆಗಳೂ ಮತ್ತುಳಿದ ದೇವತೆಗಳೂ ಸಂತೋಷಪಟ್ಟರು. ಆನಕದುಂದುಭಿಯ (ವಸುದೇವನ) ಪುತ್ರನಾದರೆ ತಮಗೂ ಪುತ್ರನೆನಿಸಿದನೆಂದು ಸ್ವಯಂಭೂ ಕೃಷ್ಣನ ಉದಯವಾಗಲು ದೇವಲೋಕದ ಆನಕದುಂದುಭಿಗಳೂ ಮೊಳಗಿದವು. (ಆನಕದುಂದುಭಿಗಳೆಂದರೆ ಒಂದೇ ಕಡೆಯಲ್ಲಿ ಬಾರಿಸುವ ತಬಲಾ ತರದ ವಾದ್ಯಗಳು. ವಸುದೇವನು ಜನ್ಮಕ್ಕೆ ಬಂದಾಗ ಇವನಲ್ಲಿ ಶ್ರೀಹರಿ ಉದಯಿಸುತ್ತಾನೆ ಎಂದು ಸೂಚಿಸಲು ಸ್ವರ್ಗಲೋಕದ ಆನಕದುಂದುಭಿಗಳು ಮೊಳಗಿದ್ದುವಂತೆ. ಅದರಿಂದ ವಸುದೇವನಿಗೆ ಆನಕದುಂದುಭಿ ಎಂಬ ಹೆಸರು ಬಂದಿತ್ತು) ।।37।।
If Shri Krishna is
named as Vaasudeva, being son of Vasudeva, He is also related to us as our
names are Vasus. So thought the eight Vasu devatas and were pleased. The
aanaka-dundubhis of heavens started drumming themselves in joy because Sri
Krishna, the Self manifested, was born to Vasudeva who was also named
aanaka-dundubhi.
(aanaka-dundubhi is a
kind of drum which is beaten on only one side, like a tabla. When Vasudeva was
born the aanaka-dundubhis of Heavens were drummed as an indication that Lord
will be born to him. So Vasudeva was also called aanaka-dundubhi) ।।37।।
शरीरकांत्या जलदः स्वजैत्रं
निरीक्ष्य कृष्णम् जलराशितीरे ।
जगर्ज शक्तया रहितस्य पुम्सो
जलांतिकेष्वेव हि गर्जितानि ।।38।।
ನೀರು ತುಂಬಿ ತುಳುಕುವ
ದಟ್ಟನೀಲಬಣ್ಣದ ಮೋಡಗಳು ಸಿರಿಕೃಷ್ಣನು ತನ್ನ ದೇಹದ ನೀಲಕಾಂತಿಯಿಂದ ತಮ್ಮನ್ನು
ಸೋಲಿಸಿಬಿಟ್ಟನಲ್ಲಾ ಎಂದು ಶಕ್ತಿಗುಂದಿ ನದೀತೀರದಲ್ಲೇ ಗುಡುಗಲಾರಂಭಿಸಿದವು! ಬಲಹೀನರ ಮಾತನ್ನು
ಕೇವಲ ಮೂರ್ಖರು ಮಾತ್ರ ಕೇಳುವಂತೆ! ।।38।।
The dark clouds lost
their strength as their beauty dimmed in comparison to the color of Sri
Krishna's appearance. So they thundered only near the waters. The talk of weak
men is heard only by fools! ।।38।।
सर: प्रसन्नं निशिसार सौघै:
स कामिनीभिः सह संप्रविश्य ।
करिष्यतिशो मुखपद्म पुंजै
रलंकृतं मामिति शंसतीव ।।39।।
ರಾತ್ರೆ ಹೊತ್ತು ಕಾಮಿನಿಯರ ಸಂಗಡ ಶ್ರೀಕೃಷ್ಣನು
ಕುತ್ತಿಗೆಯ ತನಕ ತನ್ನಲ್ಲಿ ಮುಳುಗಿ ಆ ಸುರಸುಂದರರಿಯರ ಮುಖಗಳೆಲ್ಲ ಅರಳಿದ ಕಮಲಗಳಂತೆ ತನ್ನನ್ನು
ಅಲಂಕರಿಸುತ್ತಾನೆ ಎಂದುಕೊಂಡು ಸರೋವರಗಳೂ ಕೂಡ ಸಂತಸಪಟ್ಟವು ।।39।।
The lakes were happy
that at night, Sri Krishna will be playing water sports in them and the faces
of those belles will beautify them like full blown lotuses. ।।39।।
.
नभः प्रसन्नोडुगणं तदासी-
द्विभुत्वधर्मेण तमद्वितीयम् ।
विलोक्य बालं भुवि तारहार
विभूषित स्वांगमिव प्रहर्षात् ।।40।।
.
ಎಲ್ಲೆಡೆಯೂ ವ್ಯಾಪಿಸಿರುವ
ಆಕಾಶವು " ಅಂತ್ಯವಿಲ್ಲದೇ ವ್ಯಾಪ್ತನಾಗಿ ನನ್ನನ್ನೂ ಮೀರಿಸಿ ಇರುವವನು ಈಗ
ಭೂಮಿಯಲ್ಲಿ ಚಿಕ್ಕವನಾಗಿ ಪರಿಮಿತಪ್ರದೇಶದಲ್ಲಿ ಇದ್ದಾನಲ್ಲ!" ಎಂದು ಸಂತಸಗೊಂಡು
ನಕ್ಶತ್ರಗಳನ್ನೇ ಮಾಲೆಯಾಗಿ ಧರಿಸಿತು. ।।40।।
.
The Sky thought “One,
whose pervasion is infinitely more than me, is now seen as a little kid on
earth in a limited space “Pleased thus, Sky decorates itself by wearing the
garland of stars! ।।40।।
.
शिशुं वशीकर्तुमयं हि काल
इतीव बुद्धया तुतुषु स्मवृद्धा:।
उपेक्षयिष्यन्ति न चेत्कृतार्था
इति स्वयं प्राज्वलदग्नि रेषाम् ।।41।।
.
ವಯಸ್ಸಿನಲ್ಲೂ,
ತಪಸ್ಸಿನಲ್ಲೂ ಮತ್ತು ಜ್ಞಾನದಲ್ಲೂ ವಯೋವೃದ್ಧರು ಅಗ್ನಿಹೋತ್ರಾದಿ ಕರ್ಮಗಳನ್ನು ಬಿಟ್ಟು
ಪರಮಾತ್ಮನನ್ನು ವಶಪಡಿಸಿಕೊಂಡು ಕೃತಾರ್ಥರಾಗಲು ಅವನು ಶಿಶುರೂಪದಲ್ಲಿ ಅವತರಿಸಿದ್ದಾಗ ಸುಲಭವೆಂದು
ತನ್ನನ್ನು ಬಿಟ್ಟು ಹೋಗುವರು ಎಂದು ಅಗ್ನಿಯು ಹೆದರಿ ತನ್ನಷ್ಟಕ್ಕೇ ಹೊತ್ತಿ ಉರಿಯಲಾರಂಭಿಸಿತು. ।।41।।
.
The divinely mature
people, who are aged in years, full of austerities and advanced in knowledge will
now run to the Lord who has appeared as a kid. They will worship Him to get all
that they ever wanted. Agni, the Fire God thus gets worried that he will be
neglected (as the people will not perform their daily worship through
agnihotra). So to entice them agni flares up and burns bright by himself ।।41।।
.
प्रसूनवृंदानि विकंपयंस्त
द्ग्रहं स्पृशन् सारसवारिसंगः।
ववौ मरुन्मामसुराद्वियुक्तम्
करिष्यतीत्यर्च्यनधीरिवास्य ।।42।।
.
ಗಾಳಿಯು ರಭಸದಿಂದ
ಹೂಗೊಂಚಲುಗಳನ್ನು ಕಂಪಿಸುತ್ತ , ಸರೋವರದ ನೀರಿನ ಮೇಲೂ ಬೀಸುತ್ತ ಶ್ರೀಕೃಷ್ಣನಿರುವ
ಮನೆಯೊಳಗೂ ಹೊಕ್ಕಿ "ಅಸುರರ ಸ್ಪರ್ಶದಿಂದ ತನ್ನನ್ನು ಇನ್ನು ಮುಕ್ತಗೊಳಿಸುತ್ತಾನೆ"
ಎಂದು ಶ್ರೀಕೃಷ್ಣನ ಪೂಜೆಯಲ್ಲಿ ತನ್ನ ಬುದ್ಧಿತೊಡಗಿದೆಯೋ ಎಂಬಂತೆ ಕಾಣಿಸಿತು. ( ಸಜ್ಜನನಾದ
ಬೀಸುವ ಗಾಳಿಗೂ ಕೂಡ ದುರ್ಜನರಾದ ಅಸುರರನ್ನು ಮುಟ್ಟುವದು ಹೇಸಿಗೆಯಂತಿತ್ತು ) ।।42 ।।
.
The blowing Wind
shakes the bunch of flowers and flows over the lakes touching its waters. Then
it enters the home where Lord Krishna is born. “He will decimate the Demons and
save me from touching them" Thinking thus, the Wind appears to worship Sri
Krishna. (The moral here is that even the contact of an evil person is painful
for a good person) ।। 42 ।।
.
जाते हरौ स्वर्पित पुष्पवर्षै
र्गीर्भिः स्तुवद्भिः सुरसिद्धसंघै:।
दूरे विधूता इव विघ्नभीत्या
मेघा दिगंतं युयु रम्बरान्तात् ।। 43।।
.
ಶ್ರೀಹರಿಯು ಅವತರಿಸಿದಾಗ
ದೇವಋಷಿವೃಂದಗಳು ವೇದೋಕ್ತಸ್ತೋತ್ರಗಳಿಂದ ಹೂಗಳನ್ನು ಮಳೆಗರೆಯುತ್ತಿರಲು , ಮೋಡಗಳು ತಾವು ನೀರಿನ
ಮಳೆಗರೆದರೆ ಹೂಮಳೆಗೆ ಎಲ್ಲಾದರೂ ವಿಘ್ನ ತಂದು ಬಿಟ್ಟೆವೋ ಎಂದು ಹೆದರಿ ದಿಕ್ಕುಪಾಲಾಗಿ
ದೂರ ಓಡಿಹೋದವು ! ।।43।।
.
When Sri Hari was born
Gods and Rishis were raining flowers on Him, praying with Vedic Riks. Looking
at this, the dark clouds went far away thinking that their rain of water
droplets may obstruct the rain of flowers! ।।43।।
.
आजन्मनस्तस्य हि जन्मकाले
चराचरं तुष्टमभूत्किलेदम् ।
तथा हि तुष्टिर्भुवि कस्य न स्या-
ददृष्टपूर्वस्य निरीक्षणेन ।।44।।
.
.ಜನ್ಮವೆನ್ನುವದೇ
ಇಲ್ಲದವನು ಈಗ ಭೂಮಿಯಲ್ಲಿ ಜನ್ಮ ತಾಳಿದಂತಿದ್ದಾನೆ ಎಂದಾಗ ಸೃಷ್ಟಿಯಲ್ಲಿಯ ಸಕಲ ಚರಾಚರ ವಸ್ತುಗಳೂ
ಬಹಳ ಸಂತಸಪಟ್ಟವು. ಹಿಂದೆ ಎಂದೆಂದೂ ಕಂಡಿರದ ಅತ್ಯಪೂರ್ವ ವಸ್ತುವನ್ನು ಕಂಡಾಗ ಯಾರಿಗೆ ತಾನೇ
ಸಂತೋಷವಾಗದು?! ।।44।।
.
All sentients and
insentients were happy when the unborn was seen as born on earth. Who will not
be wondrously pleased with the sight of rarest of the rare? ।। 44 ।।
.
शरीरिणां स्थावर जंगमानां
निरीक्षणेनैव विमोक्षदो$हम् ।
इतीव विज्ञापयितुं स दृष्टो
जहार पित्रोर्निगडस्य बंधम् ।।45।।
.
ಸ್ಥಾವರದೇಹಿಗಳಾಗಲೀ
ಜಂಗಮದೇಹಿಗಳಾಗಲೀ ನನ್ನ ದರ್ಶನಮಾತ್ರದಿಂದಲೇ (ಜ್ಞಾನದರ್ಶನ) ಮುಕ್ತಿ ಎನ್ನುವದನ್ನು
ಸಾಕ್ಷಾತ್ತಾಗಿ ತೋರಿಸಿಕೊಡುವದಕ್ಕೆ ಕುರುಹಾಗಿ ತನ್ನ ದರ್ಶನಮಾತ್ರದಿಂದ ತಂದೆ ತಾಯಿಗಳಿಗೆ
(ಕಂಸನು ಹಾಕಿದ) ಸಂಕಲೆಗಳಿಂದ ಬಿಡಿಸಿದನು.।।45।।
.
The vision of Lord
cuts the bonds which result in repeated births. To illustrate this, the chains
binding Vasudeva and Devaki get themselves untied of their own accord when the
parents see Sri Krishna ।।45।।
.
एतत्पितृत्वप्रथया भयंस्यात्
पापादितीढ्यं पितरौ गुणाढ्यम्।
ज्ञानात्मकस्त्वं प्रकृतेर्विदूर
स्तावस्तुतां तात इतीशमस्य ।।46।।
.
ವಸುದೇವ ದೇವಕೀಯರು ತಂದೆ
ತಾಯಿಗಳೆಂದು ಕರೆಯಿಸಿಕೊಂಡರೂ (ಶ್ರೀಕೃಷ್ಣನು ಜನ್ಮರಹಿತನಾಗಿದ್ದುದರಿಂದ ಅಂತಹ ಶುದ್ಧನಾದ
ಪರಮಾತ್ಮನ ಪಿತೃಗಳನಿಸುವ ಮೂಲಕ ಎಲ್ಲಾದರೂ ಅಪಾರ್ಥವಾದೀತು ಎಂಬ) ಭಯಪಟ್ಟರು. ಅದರಿಂದ ಈ
ಗುಣಪೂರ್ಣನಾದ ಶ್ರೀಕೃಷ್ಣನನ್ನು " ನೀನು ಸದಾ ಜ್ಞಾನಾನಂದ ಸ್ವರೂಪಿಯೂ, ಪ್ರಾಕೃತ
ಗುಣರಹಿತನೂ ಮತ್ತು ಜಗತ್ತಿಗೇ ಪಿತನಾಗಿದ್ದೀಯೇ" ಎಂದು ಸ್ತೋತ್ರಮಾಡಿದರು. ।।46।।
.
Now onwards Vasudeva
and Devaki will be known to the world as Sri Krishna's PARENTS. But they get
afraid of this ( because people may misunderstand that Sri Hari is also
afflicted with the sufferings of birth) and pray to Sri Krishna , who is full
of infinite auspiciousness ," You are always of the form of bliss and
knowledge, you are untouched by the gunas of Prakriti and you are the Father of
this universe" ।।46।।
.
य एष पुत्संज्ञित नारकस्थान्
जनान् स्वनाम स्मरणेन पाति ।
स दृष्टिगः सन्वसुदेव पत्न्या :
कथं न पुत्रः शतपत्रनेत्रः ।। 47।।
.
(ಹಾಗಿದ್ದರೆ ಶ್ರೀಕೃಷ್ಣನು
ವಸುದೇವ ದೇವಕಿಯರ ಪುತ್ರನೆಂದು ಕರೆಸುವದಾದರೂ ಹೇಗೆ? ಹೀಗೆ ಅವರ ಪುತ್ರಭಾವವಿದ್ದು ತಂದೆತಾಯಿ
ಎನಿಸಿಕೊಂಡವರಿಗೆ ಯಾವ ಪ್ರಯೋಜನವೂ ಇಲ್ಲವಾಯಿತೇ? ಅದರಲ್ಲೂ ಸಾಕ್ಷಾತ್ ಶ್ರೀ ಹರಿಯೇ ಅವರನ್ನು
ನಿಮಿತ್ತವಾಗಿರಿಸಿ ಅವತಾರ ಮಾಡಿದ್ದಾನಲ್ಲವೇ? ಇದಕ್ಕೆ ರಾಜರು ಸುಂದರವಾಗಿ ಸಮಾಧಾನ
ಕೊಡುತ್ತಾರೆ)
ಪುತ್ ಎಂಬ ನರಕದಲ್ಲಿ
ನರಳುವವರನ್ನು ಕೇವಲ ತನ್ನನ್ನು ನೆನಪಿಸಿದಾಕ್ಷಣ ಅಲ್ಲಿಂದ ಪಾರಗಾಣಿಸುವ, ಕಮಲಾಕ್ಷನಾದ
ಶ್ರೀಹರಿಯು ವಸುದೇವ ದೇವಕಿಯವರಿಗೆ ಪ್ರತ್ಯಕ್ಷನಾಗಿ ಕಣ್ಣಿಗೆ ಕಾಣಿಸಿದುದರಿಂದ ಅವರನ್ನು
ಪುನ್ನಾಮ ನರಕದಿಂದ ಕಾಯ್ದುದರಿಂದ ಪುತ್ರನೆನಿಸುತ್ತಾನೆ. ।।47।।
.
(If Sri Krishna can
never be called as son, putra, of anyone, how can that explain the name of
Vaasudeva as son of Vasudeva? Vasudeva and Devaki were just instrumental cause
for Krishna to take avatara. If so, is their parenthood in vain? Sri Vadiraja
teertha explains why Sri Krishna is putra for them)
Even those who suffer
in the hell called "put" get released by just remembering Sri Krishna
and it is an undoubted fact that Vasudeva and Devaki will never suffer in the
hell named "put" because they actually saw Him. In this way Sri
Krishna is called *putra* of Vasudeva and Devaki. ।।47।।
.
यदीयरूपं प्रकटीकरोति
पिता स तस्येति हि वेदवादः ।
तथा विधस्यानकदुन्दुभेस्त -
पितृत्वमप्यस्तु न तेन हानिः ।।48।।
.
"ಯಾರು ಯಾವನ
ಸ್ವರೂಪವನ್ನು ಪ್ರಕಟಿಸುತ್ತಾನೋ ಅವನು ಕೂಡ ತಂದೆ ಎಣಿಸುತ್ತಾನೆ" ಎನ್ನುವದು ವೇದವಾಕ್ಯ. ಈ
ವಾಕ್ಯದಂತೆ ಶ್ರೀಕೃಷ್ಣನು ಆನಕದೊಂದುಭಿಯನ್ನು ( ವಸುದೇವನನ್ನು) ನಿಮಿತ್ತೀಕರಿಸಿ
ಪ್ರಕಟಗೊಂಡಿರುವದರಿಂದ , ವಸುದೇವನು ತಂದೆಯೆನಿಸಲಿ. ಅದರಿಂದ ಏನೂ ಹಾನಿಯಿಲ್ಲ ! ।।48।।
.
There is a Vedic
saying. “One who enlightens and makes another familiar and known, is also a
Father ". As Sri Krishna was known to the world through Vasudeva, there is
no harm in calling him Father of Sri Krishna. ।।48।।
.
एतेनेव पुरात्मनाहमभवं त्वद्दृष्टि मार्गो$धुना
तेनैवासमितीरयन् जनिमसौ मेने न सूनु: स्वकाम् ।
माता तं किल मानयंत्याभिनवं विश्वं यदित्यादिना
प्राज्ञो$सौ विनतः पिता च विदितो$सीत्यादिभिस्तं गॄणन् ।।49।।
.
ಶ್ರೀಕೃಷ್ಣನು "ನಾನು
ಹಿಂದಿನ ಅವತಾರದಲ್ಲಿ ಯಾವ ಶರೀರದಿಂದ ಕಾಣಿಸಿಕೊಂಡಿದ್ದೇನೋ ಅದೇ ಶರೀರದಿಂದ ಈಗಲೂ ನಿನಗೆ
ತೋರಿಸಿಕೊಂಡಿದ್ದೇನೆ' ಎನ್ನುತ್ತ ತನ್ನ ಜನ್ಮವನ್ನು ಒಪ್ಪಲಿಲ್ಲ. ದೇವಕೀದೇವಿ ಕೂಡ
ಶ್ರೀಕೃಷ್ಣನನ್ನು "ವಿಶ್ವಮ್ ಯದೇತತ್.." ಇತ್ಯಾದಿಗಳಿಂದ ಸ್ತುತಿಸಿ ತಾನು
ತಾಯಿಯೆಂದೆನಿಸಿಕೊಳ್ಳಲು ಒಪ್ಪಲಿಲ್ಲ. ಜ್ಞಾನಿಯಾದ ವಸುದೇವನೂ ಕೂಡ "ವಿದಿತೋ$ಸಿ ಭವಾನ್
ಸಾಕ್ಷಾತ್ " ಇತ್ಯಾದಿಗಳಿಂದ ಸ್ತುತಿಸಿ ಶ್ರೀಕೃಷ್ಣನು ತನ್ನಿಂದ ಹುಟ್ಟಿಲ್ಲ ಎಂದು
ತೋರಿಸಿದ (ಇವೆರಡೂ ಸ್ತೋತ್ರಗಳು ಭಾಗವತದಲ್ಲಿವೆ. ಹುಟ್ಟಿದಾಕ್ಷಣ ಶ್ರೀ ಕೃಷ್ಣನು ಸಾಕ್ಷಾತ್
ಪರಮಾತ್ಮನೇ ಅವತರಿಸಿದ್ದಾನೆ ಎಂದು ತಿಳಿದು ಇಬ್ಬರೂ ಭಕ್ತಿಯಿಂದ ಸ್ತೋತ್ರಮಾಡಿ ಜನ್ಮಾದಿ
ದೋಷದೂರನು ತಮ್ಮನ್ನು ನಿಮಿತ್ತೀಕರಿಸಿ ಪ್ರಕಟಗೊಂಡಿದ್ದಾನೆಂದು ಜಗತ್ತಿಗೆ ಸಾರಿದ್ದಾರೆ) ।।49।।
.
“I am here with the same
body that I appeared to you in my last incarnation" So saying Sri Krishna
proved He is not born. Devaki devi prayed with verses “vishvam yadetat...” and
agreed that she did not physically deliver Sri Krishna. Vasudeva, the great jnAni
also made it known to the world that he was not a Father by praying with the
verses "viditosi bhavaan saakshat" (These prayers are in Bhagavata
purana. By extolling Sri Krishna with these praises, the parents themselves
disagree that Sri Krishna is their son in the usual sense of the term ) ।।49।।
.
जानाति माता परमात्म जातं
नूनं पिता$पि क्वचिदेव लोके ।
ताभ्यामनंगीकृत कृष्ण जन्म
को वा पुमान् साधायितुं समर्थः ।।50।।
ತಾಯಿ ಯಾವಾಗಲೂ
ನಿ:ಸಂಶಯವಾಗಿ ತನ್ನಿಂದ ಹುಟ್ಟಿದವನನ್ನು ತಿಳಿಯುತ್ತಾಳೆ. ತಂದೆ ಕ್ವಚಿತ್ತಾಗಿ
ತಿಳಿಯುತ್ತಾನೆ. ತಂದೆ ತಾಯಿಗಳಾದ ದೇವಕೀವಸುದೇವರೇ ಶ್ರೀಕೃಷ್ಣನು ತಮ್ಮಿಂದ ಹುಟ್ಟಿದವನಲ್ಲವೆಂದು
ತಿಳಿದುಕೊಂಡಿದ್ದಾರೆ ಅಂದ ಮೇಲೆ ಅದ್ಯಾರು ತಾನೇ ಶ್ರೀಕೃಷ್ಣನಿಗೆ ಜನ್ಮವಿದೆ ಎನ್ನುವದನ್ನು
ಸಿದ್ಧ ಮಾಡಿಯಾರು? ।।50।।
Mother knows without
the least doubt that the child is born from her. Many times father knows. When
the parents, Vasudeva and Devaki have known that Sri Krishna was not a born
child to them, who else in the world can prove so? ।।50।।
स्तुतिं स्वपित्रोरवधार्य यो$सौ
बभूव पश्चात् शिशुवेषधारी ।
असूत तं का नु तदा मृगाक्षी
पूरा पुराणाकृतिमप्रमेयम् ।।51।।
(ಚತುರ್ಭುಜಾಕೃತಿ
ದಿವ್ಯರೂಪಧಾರಿಯಾಗಿ ಜನನ ಸಮಯದಲ್ಲಿ ಕಾಣುತ್ತಿರುವವನನ್ನು) "ಉಪಸಂಹರ ವಿಶ್ವಾತ್ಮನ್"
ಇತ್ಯಾದಿಯಾಗಿ ತಂದೆ ತಾಯಿಗಳ ವಿನಮ್ರ ಪ್ರಾರ್ಥನೆಯನ್ನು ಕೇಳಿ ಆಮೇಲೆ ಶಿಶುವೇಷ ತಳೆದು ಮಲಗಿದ
ಅನಾದಿಯಿಂದ ಯಾವುದೇ ವಿಕೃತಿಯಿಲ್ಲದ, ಸಂಪೂರ್ಣ ತಿಳಿಯಲೂ ಅಸಾಧ್ಯವಾದ ಶ್ರೀಕೃಷ್ಣನನ್ನು ಯಾವ
ಹರಿಣದಂತೆ ಕಣ್ಣುಳ್ಳವಳು (ಸ್ತ್ರೀ) ಪ್ರಸವಿಸಲು ಸಾಧ್ಯ?
(Born with four hands
and with a divine form) listening to the prayers of parents, Sri Krishna took
the form of a newborn baby and slept by their side. Which woman can be said to
have delivered such a Paramatman, who is uniform since time immemorial and who cannot
be known completely? (Harinakshi in the verse means one who has beautiful eyes
like a black buck = a woman) ।।51।।
यदीह जातो वसुदेववीर्यात्
तदा कुतस्तस्य विभूषणानि।
वराम्बरं कौस्तुभरत्नमुद्य
त्सुदर्शनं शंखगदादिजातम् ।।52।।
ವಸುದೇವನ ವೀರ್ಯದಿಂದ
ದೇವಕಿಯ ಗರ್ಭವಾಸದಿಂದ ಹುಟ್ಟಿದ್ದರೆ, ಶ್ರೀಕೃಷ್ಣನಿಗೆ ಹುಟ್ಟಿದಾಕ್ಷಣ ದಿವ್ಯಪೀತಾಂಬರವೂ,
ಆಭರಣಾದಿಗಳೂ, ಕೌಸ್ತುಭರತ್ನವೂ, ಸುದರ್ಶನಚಕ್ರ, ಶಂಖ, ಗದಾದಿಗಳೂ ಎಲ್ಲಿಂದ ಬಂದವು?
If Sri Krishna was
born by insemination from Vasudeva in Devaki's womb, from where did the
Pitambara, jewelry, Kaustubha Ratna, Sudarshana Chakra, Shankha, Gada etc come
which were seen on Him at the time of His birth? ।।52 ।।
अहो! पिशाचा अपि देहिदेहे
गतागतं शक्तियुता लभन्ते ।
अनंतशक्ते: परमस्य न स्या-
त्कुतो बहिर्निर्गम एव तर्हि ।।53।।
.
(ಕಣ್ಣಿಗೂ ಕೂಡ
ಕಾಣಿಸದಿರುವ ಕ್ಷುದ್ರಶಕ್ತಿಯುಳ್ಳ) ಪಿಶಾಚಾದಿಗಳೂ ಕೂಡ ಮಾನವನ ದೇಹವನ್ನು ಸುಲಭವಾಗಿ ಪ್ರವೇಶಿಸಿ
ಹೊರಹೋಗುವ ಶಕ್ತಿಯನ್ನು ಪಡೆದಿವೆ.
ಅನಂತಶಕ್ತಿಯುತನಾದ
ಶ್ರೀಕೃಷ್ಣನು ಕೇವಲ ಲೀಲೆಯಿಂದ ದೇವಕೀದೇವಿಯಿಂದ ಹೊರಬಂದು ಪ್ರಕಟನಾದನು ಎನ್ನುವದು
ಅಸಂಭವನೀಯವೇನು? ।।53।।
.
The pishachas (who are
of low cadre are invisible and ) have the power and can enter and leave a human
body at their will.
Is it strange that the
Sri Krishna, the All Powerful appeared from Devaki devi without having to grow
in her womb? ।।53।।
यदा नृसिंहाकृतिराविरासीत्
पदाहस्तंभवराद्धि पूर्वम् ।
तदानु का स्त्री सुषुवे मुकुंदम्
स कस्य वीर्यादजनिष्ट कायः ।। ।।54।।
(ಹಿಂದೆ ಹಿರಣ್ಯಕಶಿಪುವಿನ
) ಕಾಲಿನ ಒದೆತಕ್ಕೆ ಒಡೆದ ಕಂಬದಿಂದ ಆವಿರ್ಭವಿಸಿದ ನರಸಿಂಹನನ್ನು ಯಾವ ಸ್ತ್ರೀ ತಾನೇ ಹಡೆದಿದ್ದಳು?
ಮುಕುತಿದಾಯಕನಾದ ಅವನ ಶರೀರಕ್ಕೆ ಯಾರ ವೀರ್ಯವು ಕಾರಣವಾಗಿತ್ತು? ।।54।।
Nrisimha, the half man
half lion, appeared when the pillar was split by the the kick (from the foot of
the Demon Hiranyakashipu). Which woman delivered Him from her womb? Which
man's insemination formed His body? ।।54 ।।
No comments:
Post a Comment