श्रीमद्धनुमभीममध्वान्तर्गत रामकृष्णवॆदव्यासात्मक श्रीलक्ष्मीहयग्रीवाभिन्न
श्रीसीतारामचन्द्रवीरविठ्ठलाः प्रसीदन्तु
श्रीमद् वासुदेव थिर्थ श्रीपाद वडॆर् स्वामीजी
2nd पीठाधिपति श्रीसंस्थान गॊकर्ण पर्तगाळी जीवॊत्तम मठ
***
Vasudevagurum vande raagadosha vivarjitam |
Puutagaatram mahaayaatram
Naaraayana karodbhavam ||
***
Sri Vasudeva teertha swamiji ruled the peetha after Adya Guru Sriman Narayan teertha attained Lord's feet on Srisaka 1439 Ishwar samvatsara chaitra shukla amavasya. Sri Swamiji was on gurupeetha fora very short time. When HH was in Pandharpur He attained mukti on Srisaka 1440 bahudhanya samvatsara vaishakha shukla tritiya. (Akshaya tritiya) ( May 1517 to April 1518) HH was shishya of Adya Guru Sriman Narayana teertha for a long time. It is a miracle whereby Sri Swamiji discovered the Vatu who later became very famous in the parampara. So much so that the name was added to the title of Sri matha. This incident has been published in a book from the Math based on records found. We will see it next.
**
The political and social environment of Goa was highly inflammatory and it was very difficult for the Hindus in general and (Brahmanas) GSBs in particular.
Portuguese stepped in this small state in 1510. Soon afterwards the forcible conversion started . The Gowda Saraswat Brahman society could not face the cruelty of the invaders. Migration started in small batches to the nearby Karnataka, Kerala and Maharashtra along with the Pratimas of the family deities mostly in small boats. One such batch had 30 boats with many families. And 3 to 4 boats reached Kundapura in Dakshina Kannada. But the local people resisted them and did not let them in the village/town.
It was a very strange and new environment for the new arrivals who did not even know Kannada language thereby it was tough to communicate.
To the east of the place where the boats reached was the cremating ground and a thick forest beyond . Even in day time wild carnivorous, fierce animals were seen wandering there . But these people had no alternative but to build small huts near the forest and live there with the kids and aged.
To procure the daily food they sold whatever valuables were with them and whatever they had which fetched value. Many became targets for the wild animals and succumbed to the injuries. When future seemed very bleak they remembered Guru. Elderly able persons left for Bhatkal (at the time the headquarters were in Bhatkal known as Wader math) with a vinanti patra narrating the plight of the people of the community in Basroor. Reading the letter and hearing the pitiful situation HH Srimad Vasudeva Teertha swamiji left for Basroor at the earliest possible moment.
Reaching Basroor, Swamiji called the local leaders and narrated the reason for the migration of the GSB people. Swamiji explained the basic decency of the GSB community people present there and the cruel forceful conversion by Portuguese. The physical and social hardship imposed by the invaders on Hindus was also narrated.
HH Sri Swamiji convinced the local leaders about the high morals, hardworking attitude and socially responsible behaviour of the GSBs. These people will not be a burden on the local community. Rather they will work honestly with their endowed skills and will contribute gainfully. HH Sri Swamiji asked the local people to allow the migrant GSBs to live among them. HH assured that they will contribute to the overall up-liftment of Basroor with their hard work.
Listening to HH Sri Swamiji and impressed by the Divine personality, the local leaders decided to allow the GSB families to live in the town and work for their daily earnings.
HH Sri Swamiji then selected a place in town and built a Dharmashala for shifting the families from the huts in the forest on an emergency basis.
Also HH Sri Swamiji advised the GSB families to work honestly and gain a footing in the local society which has given them a livelihood. HH Sri Swamiji blessed them and said He was sure that they will come up in Basroor and will be important and gainful members and that the future is bright for all of them with their hardworking background .
The people followed HH Sri Swamiji's advise and over time earned name and fame in Basroor.
When Srimad Vasudeva teerth swamiji was in contact with the families He observed a young bright person in the archaka family among them.
Prodded by Divine impulse HH asked the parents for permission to take the boy along with Him. With the parent's permission the boy was brought to the math and Sanyasa deeksha was given on Srisaka 1439 Magha shukla chaturthi.
He was named Sri Jeevottama teertha.
Soon afterwards HH Sri Swamiji left for teertha yaatra and when in Pandharpura kshetra attained mukti which is famous for the Vitthal temple.
Sri Swamiji's reign as peethadhipati was about a year as majority of the life was spent as shishya under the founder Guru Sriman Narayana teertha. The incident narrated above which is recorded in the math history lays the love and concern Swamiji had for the GSB society before us.
May we be blessed by the greatness of Guru and Lord's blessings and protect us in our life. Also may it speed us on our way to earn their grace doing our saadhana.
*****
ಶ್ರೀ ವಾಸುದೇವ ತೀರ್ಥರು ತಮ್ಮ ಗುರು ಶ್ರೀಮನ್ನಾರಾಯಣ ತೀರ್ಥರ ವೃಂದಾವನ ಪ್ರವೇಶ (ಶ್ರೀ ಶಕ ೧೪೩೯ ಈಶ್ವರನಾಮ ಸಂವತ್ಸರ ಚೈತ್ರ ಅಮಾವಾಸ್ಯಾ)
ನಂತರ ಗುರುಪೀಠಾರೋಹಣ ಮಾಡಿದ ನಂತರ ಅಲ್ಪಕಾಲವೇ ಇದ್ದು ಪಂಡರಪುರ ಭೀಮಾನದೀ ತೀರದಲ್ಲಿ ಶ್ರೀ ಶಕ ೧೪೪೦ ಬಹುಧಾನ್ಯ ಸಂವತ್ಸರದ ವೈಶಾಖ ಶುಕ್ಲ ತೃತೀಯಾಗೆ ( ಅಕ್ಷಯ ತದಿಗೆ) ವೃಂದಾವನಸ್ಥರಾದರು. ಅಂದರೆ ಗುರುಪೀಠದಲ್ಲಿ ಕೇವಲ ಒಂದು ವರ್ಷಮಾತ್ರ ಇದ್ದರು. ( ಮೇ ತಿಂಗಳು
೧೫೧೭ ರಿಂದ ಅಪ್ರಿಲ್ ತಿಂಗಳು ೧೫೧೮). ಆದ್ಯ ಗುರುಗಳಾದ ಶ್ರೀಮನ್ನಾರಾಯಣ ತೀರ್ಥರ ಜತೆಯಲ್ಲೇ ದೀರ್ಘಕಾಲ ಶಿಷ್ಯರಾಗಿದ್ದರು. ಇವರೇ ಶ್ರೀಮಠದ
ಶಕಪುರುಷರಾದ ಜೀವೋತ್ತಮ ತೀರ್ಥರನ್ನು ಜಗತ್ತಿಗೆ ನೀಡಿದ್ದು. ಅದೂ ಕೂಡ ಅತ್ಯಂತ ಚಮತ್ಕಾರಿಕ ದೈವೀ ಘಟನೆ. ಇದರ ಮೊದಲು ಗೋಮಾಂತಕದ ರಾಜಕೀಯ ಸ್ಥಿತಿ ಮತ್ತು ಅಲ್ಲಿ ಅದರಿಂದಾದ ಸಾಮಾಜಿಕ ತುಮುಲತೆಯನ್ನು ಶ್ರೀಮಠವು ೧೯೯೯ ರಲ್ಲಿ ಪ್ರಕಾಶಿಸಿದ ಯುಗಪ್ರವರ್ತಕ ಶ್ರೀ ಜೀವೊತ್ತಮ ತೀರ್ಥರು ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಅದರ ಆಧಾರದಲ್ಲಿ ಚಿಕ್ಕದಾಗಿ ಸ್ವಲ್ಪ ನೋಡೋಣ.
೧೫೧೦ನೇ ಇಸವಿಯಲ್ಲಿ ಪೋರ್ಚುಗೀಸರು ಗೋಮಾಂತಕದಲ್ಲಿ ಕಾಲಿಟ್ಟರು. ಶೀಘ್ರದಲ್ಲೇ ಬಲಾತ್ಕಾರಿಕವಾಗಿ ಮತಾಂತರ ಪ್ರಾರಂಭವಾಯಿತು. ಸಾರಸ್ವತ ಸಮಾಜವು ದಿಕ್ಕೆಟ್ಟು ತಮ್ಮ ಕುಲದೇವತಾ ಪ್ರತಿಮೆಗಳ ಸಂಗಡ ದೋಣಿಗಳಲ್ಲಿ ಕರ್ಣಾಟಕ, ಕೇರಳ ಹಾಗೂ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ವಲಸೆ
ಹೋಗತೊಡಗಿದರು. ಇದರಲ್ಲಿ ವರೇಣ್ಯಪುರದ ಒಂದು ಪರಿವಾರದಲ್ಲಿ ಒಂದು ಅರ್ಚಕ ಕುಟುಂಬವು ಜತೆಗೆ ಒಟ್ಟೂ ಮುವತ್ತು ದೋಣಿಗಳಲ್ಲಿ ಸಾಗುತ್ತ ದಕ್ಷಿಣಕ್ಕೆ ಹೊರಟಾಗ ಅವುಗಳಲ್ಲಿ ೩-೪ ದೋಣಿಗಳಲ್ಲಿದ್ದ ಜನರು ಕುಂದಾಪುರದ ಹತ್ತಿರ ದಡ ಸೇರಿದರು. ಅನ್ನ ನೀರಿಲ್ಲದೇ ಕಂಗೆಟ್ಟ ಅವರು ಸೇರಿದ ಪ್ರದೇಶದ ಸ್ಥಾನಿಕ ಜನರು ಅವರನ್ನು ಹತ್ತಿರ ಬರಲು ವಿರೋಧಿಸಿದರು. ಭಾಷೆಯೂ ಬರದೇ ಅವರೆಡೆ ಸಂಭಾಷಣೆಯೂ ಕಷ್ಟವಾಗಿತ್ತು. ದೋಣಿಗಳು ಬಂದು ಸೇರಿದ ಪೂರ್ವಕ್ಕೆ ಸ್ಮಶಾನ ಅದರಾಚೆ ಘೋರ ಅರಣ್ಯ. ಹಗಲಲ್ಲೂ ಹಿಂಸ್ರ ಪಶುಗಳ ಗರ್ಜನೆ ಕೇಳಿಸುತ್ತಿತ್ತು. ಕೊನೆಗೂ ದಾರಿಕಾಣದೇ ಆ ಮೂರು ನಾಲ್ಕು ದೋಣಿಗಳಲ್ಲಿದ್ದ ಶಿಶುಗಳಿಂದ ಮುದುಕರ ಸಂಗಡ ಅವರು ಅಲ್ಲೇ ಅರಣ್ಯದಲ್ಲೇ ಗೂಡುಕಟ್ಟಿ ಇರಲಾರಂಭಿಸಿದರು.
ಹೊಟ್ಟೆಯ ಹಸಿವಿಂಗಿಸಲು ಅನ್ನ, ದಿನಕಳೆಯುವದಕ್ಕೆ ಆವಶ್ಯ ವಸ್ತುಗಳನ್ನು ತರಲು ಮೈಮೇಲಿದ್ದ ಬಂಗಾರದ ಒಡವೆಗಳನ್ನೂ , ಪಾತ್ರಪರಿಕರಗಳನ್ನೂ ಮಾರಿ ಕೆಲಸಮಯ ಕಳೆಯಲಾಯಿತು. ಇತ್ತ ಬಂದವರಲ್ಲಿ ಕೆಲವರು ಹಿಂಸ್ರ ಪಶುಗಳಿಗೆ ಬಲಿಯಾದರು. ಅಂತೂ ಮುಂದೇನು ಎನ್ನುವ ಪ್ರಶ್ನೆ ಭೂತಾಕರವಾಗಿ ಎದುರು ಬಂದು ನಿಂತಾಗ ಗುರುಗಳ ಸ್ಮರಣೆಯಾಯಿತು. ಕೂಡಲೇ ಕೆಲವರು ವಿಜ್ಞಾಪನಾ ಪತ್ರವನ್ನು ಬರೆದು ಭಟಕಳಕ್ಕೆ ಓಡಿಬಂದು ಬಸರೂರಿನ ಹತ್ತಿರ
ಅರಣ್ಯದಲ್ಲಿದ್ದ ಗೌಡಸಾರಸ್ವತ ಕುಟುಂಬಗಳ ದೀನಪರಿಸ್ಥಿತಿಯನ್ನು ನಿವೇದಿಸಲಾಯಿತು. ತತ್ಕ್ಷಣ ಶ್ರೀ ವಾಸುದೇವ ತೀರ್ಥರು ಬಂದವರಿಗೆ ಅಭಯವನ್ನುನೀಡಿ ಬಸರೂರಿಗೆ ಹೊರಟರು.
ಬಸರೂರು ಮುಟ್ಟಿದ ಶ್ರೀ ವಾಸುದೇವ ತೀರ್ಥರು ಅಲ್ಲಿಯ ಸ್ಥಾನಿಕ ಜನರನ್ನು ಒಟ್ಟುಗೂಡಿಸಿ ಗೋಮಾಂತಕ ಪ್ರದೇಶದಲ್ಲಿ ವಿದೇಶೀಯರಿಂದ ನಮ್ಮ
ಸಮಾಜದ ಮೇಲಾಗುತ್ತಿರುವ ಆಕ್ರಮಣ, ಬಲಾತ್ಕಾರದ ಧರ್ಮಾಂತರ ಇತ್ಯಾದಿಗಳನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು. ಮತ್ತು ಅಲ್ಲಿ ಬಂದು ಸೇರಿದ ನಿರಾಶ್ರಿತರ ಬಗ್ಗೆ ತಿಳಿಸುತ್ತಾ ಈ ಗೌಡಸಾರಸ್ವತ ಸಮಾಜದ ಜನ ನಿರುಪದ್ರವಿಗಳು ಅಷ್ಟೇ ಅಲ್ಲ ನೈತಿಕ ಮತ್ತು ಸಾಮಾಜಿಕ ಪ್ರಜ್ಞೆಯಲ್ಲಿ ಉನ್ನತ ಸ್ಥಾನವಿದ್ದವರಾಗಿ ಅವರನ್ನು ಬಸರೂರಿನಲ್ಲಿರುವ ಸ್ಥಾನಿಕರು ತಮ್ಮ ಜನರ ಸಂಗಡ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು.
ಈ ಸಮಾಜದ ಜನರು ಸಮಾಜಕ್ಕೆ ಯಾವುದೇ ತರದ ಹೊರೆಯಾಗದೇ ತಮ್ಮ ಅತ್ಯಂತ ಕಷ್ಟಸಹಿಷ್ಣುತೆ ಮತ್ತು ಕಾರ್ಯಕ್ಷಮತೆಯಿಂದ ಇಡೀ ಊರಿನ ಅಭಿವೃದ್ಧಿಗಾಗಿ ದುಡಿದು ಬಸರೂರಿನ ವೈಭವವನ್ನೇ ಮೆರೆಸುತ್ತಾರೆ ಎಂದು ಆಶ್ವಾಸನೆ ಕೊಟ್ಟರು. ಶ್ರೀ ವಾಸುದೇವ ತೀರ್ಥರ ವರ್ಚಸ್ಸಿಗೆ ಒಳಗಾಗಿ, ಅಲ್ಲಿ ಬಂದು ಸೇರಿದ ಗೌಡಸಾರಸ್ವತ ಕುಟುಂಬಗಳ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸ್ಥಾನಿಕಜನರು
ಸಾರಸ್ವತ ಜನರಿಗೆ ಪುನರ್ವಸತಿಯನ್ನೂ ಜೀವನೋಪಾಯಕ್ಕೆ ಅವಕಾಶವನ್ನೂ ಕಲ್ಪಿಸಿ ಕೊಡುವದಕ್ಕಾಗಿ ಆಶ್ವಾಸನೆಯಿತ್ತರು. ಶ್ರೀ ವಾಸುದೇವ ತೀರ್ಥರು ಒಂದು ತುರ್ತು ಧರ್ಮಶಾಲೆಯನ್ನು ಕಟ್ಟಿಸಿ ಅರಣ್ಯದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಇರಲು ಅವಕಾಶ ಕೊಟ್ಟು ಗೌಡಸಾರಸ್ವತ ಸಮಾಜದ
ಜನರಿಗೆ ಆಶೀರ್ವಚವನ್ನಿತ್ತರು. ನೀವು ಈಗಿದ್ದ ಸ್ಥಳದಲ್ಲಿರುವ ಜನರೊಡನೆ ಹಾಲು ಸಕ್ಕರೆಯಂತೆ ಬೆರೆತು ಕಷ್ಟಪಟ್ಟು ದುಡಿದು ಭೂಮಾತೆಯ ಸೇವೆಯನ್ನು ಮಾಡಿ. ಮುಂದಿನ ದಿನಗಳಲ್ಲಿ ನಿಮಗೆಲ್ಲ ಉಜ್ವಲ ಭವಿಷ್ಯವಿದೆ ಎಂದು ಭವಿಷ್ಯವಾಣಿಯನ್ನು ನುಡಿದರು. ಕಾಲಕ್ರಮೇಣ ಅದುನಿಜವೂ ಆಯಿತು.
ಆಗ ಅಲ್ಲಿರುವ ಅರ್ಚಕ ಕುಟುಂಬದ ಒಬ್ಬ ತೇಜಸ್ವೀ ವಟುವಿನತ್ತ ಶ್ರೀ ವಾಸುದೇವ ತೀರ್ಥರು ಆಕರ್ಷಿತರಾಗಿ ಅವನನ್ನು ಪರೀಕ್ಷಿಸಿದರು. ತಂದೆ ತಾಯಿಗಳ ಸಮ್ಮತಿಯನ್ನು ಪಡೆದು ದೈವೀ ಪ್ರೇರಣೆಯಂತೆ ಅವನನ್ನು ತಮ್ಮ ಸಂಗಡ ಕರೆದುಕೊಂಡು ಬಂದು ಶ್ರೀ ಶಕ ೧೪೩೯ ಮಾಘ ಶುದ್ಧ ಚತುರ್ಥಿಯ ದಿನ ಸುಮುಹೂರ್ತದಲ್ಲಿ ಸಂನ್ಯಾಸದೀಕ್ಷೆಯಿತ್ತು ಶ್ರೀ ಜೀವೋತ್ತಮ ತೀರ್ಥರೆಂದು ನಾಮಕರಣ ಮಾಡಿದರು. ಹಾಗೆಯೇ ಮತ್ತೆ ಪುನಃ ತೀರ್ಥಯಾತ್ರೆಗೆ ಹೊರಟು ಪಂಢರಪುರದಲ್ಲಿ ಶ್ರೀ ವಿಠ್ಠಲನ ಪದದಲ್ಲಿ ವೃಂದಾವನಸ್ಥರಾದರು
ಕೇವಲ ಒಂದು ವರುಷಕ್ಕಿಂತಲೂ ಕಡಿಮೆ ಪೀಠಾಧಿಪತಿಗಳಾಗಿದ್ದರೂ ಈ ಮೇಲಿನ ಒಂದೇ ಒಂದು ಸನ್ನಿವೇಶವು ಶ್ರೀ ವಾಸುದೇವ ತೀರ್ಥರು ತಮ್ಮ ಸಮಾಜದ ಬಗ್ಗೆ ಹೊಂದಿದ ಕಾಳಜಿಯನ್ನೂ , ಅವರ ಕರ್ತವ್ಯ ನಿಷ್ಟೆಯನ್ನೂ, ವರ್ಚಸ್ವೀ
ಪ್ರಭಾವವನ್ನೂ ನಮ್ಮೆದುರು ತೆರೆದಿಡುತ್ತದೆ.
ಈ ಶ್ರೀ ವಾಸುದೇವ ತೀರ್ಥರ ಜೀವನ ಚರಿತ್ರೆಯ ಕಿಂಚಿದ್ದರ್ಶನವು ನಮ್ಮೆಲ್ಲರ ಶ್ರೆಯೋಭಿವೃದ್ಧಿಗೆ ಕಾರಣವಾಗಲಿ
ಇಂತೀ ಗುರುಚರಣಾಂಬುಜದಾಸ- ವಿಷ್ಣು ವೇಂಕಟದಾಸ್ ಶ್ಯಾನಭಾಗ. ಕಲಬಾಗಕಾರ, ಕುಮಟಾ
✍ हरिगुरुचरणांबुज दास Vishnu Venkatdas Shanbhag, Kalbagkar, Kumta.
No comments:
Post a Comment