Total Pageviews

Friday, May 26, 2017

Gurucharitra - Shri Purnaprajna Thirtha Sripad Vader Swamiji


Today is Punyatithi of Srimad Purnaprajna Theerth Shripad Vader Swamiji, who was the 18th Mathadipathi of Gokarna Parthagali Jeevotham Matha.


ब्रह्मांता गुरवः साक्षादिष्टम् दैवं श्रियःपतिः।
आचार्या श्रीमदाचार्या संतु में जन्मजन्मनि ।।
पीत्वा सम्यक्सुधासारं चरित्वा वसुधातलम्।
वादिवाराजिता येन पूर्णप्रज्ञगुरुं भजे ।

Birth : Srisaka 1731, Bhadrapad shukla chaturthi. Sunday.
Birth place : Mudageri, near Karwar.
Janma naam: Ganesh.
Sanyasa deeksha : Tarana samvatsara 1746 (1824 A.D.) Chaitra purnima at Partagali
Guru peetharohana : Sarvadhari samvatsara 1750 , shravan krishna shashthi.(1828 A.D.)
Moksha: Pramathi samvatsara 1809, jyeshtha shukla dviteeya.at Partagali. (1879A.D.) 
Shishya : Srimad Padmanabh teerth shripad vader swamiji.


श्रीमत पूर्णप्रज्ञ तीर्थ श्रीपाद वडेर स्वामीजी

18 पीठाधिपति संस्थान गोकर्ण पर्तगाळी जीवोत्तम मठ

ಆನಂದ ತೀರ್ಥಾರ್ಯ ಪದಾಬ್ಜ ಭಕ್ತ:
ಸ್ವಾನಂದಮಗ್ನೋ ವಿಷಯೇಸ್ವಸಕ್ತ: ।
‌‌ಜ್ಞಾನಂ ದದದ್ಯೋಗ್ಯಜನೇಷು ಪೂರ್ಣ-
ಪ್ರಜ್ಞಾಭಿಧಃ ಶ್ರೀ ಯತಿರಾಟ್ ವಿಭಾತಿ ।।1।।
आनंद तीर्थार्य पदाब्ज भक्तः
स्वानंदमग्नो विषयेस्वसक्त:।  
ज्ञानं ददद्योग्य जनेषु 
पूर्णप्रज्ञाभिदः श्री यतिराट विभाति।।1।।

ಶ್ರೀಮದಾನಂದ ತೀರ್ಥಗುರುಗಳ ಪದಗಳಲ್ಲಿ ಅನನ್ಯ ಭಕ್ತರೂ , ತಮ್ಮ ಸ್ವರೂಪಾನಂದದಲ್ಲಿ ಮಗ್ನರೂ (ಸ್ವ ಅಂದರೆ ನಾರಾಯಣನೂ ಆದುದರಿಂದ , ನಾರಾಯಣನು ಆನಂದ ಪೂರ್ಣನು ಎಂಬ ಜ್ಞಾನದಲ್ಲಿ ಮಗ್ನರೂ), ಬಾಹ್ಯ ಇಂದ್ರಿಯವಿಷಯವಸ್ತುಗಳಲ್ಲಿ ಸಂಪೂರ್ಣ ವಿರಕ್ತರೂ, ಯೋಗ್ಯಜನರಿಗೆ ಯಥಾರ್ಥ ಜ್ಞಾನವನ್ನು ಉಪದೇಶಿಸುತ್ತಲೂ ಶ್ರೀ ಪೂರ್ಣಪ್ರಜ್ಞ ತೀರ್ಥರು ಪ್ರಖರ ಸೂರ್ಯನಂತೆ ಪ್ರಕಾಶಮಾನರಾಗಿ (ನನ್ನ ಹೃದಯದಲ್ಲಿ) ವಿರಾಜಮಾನರಾಗಿದ್ದಾರೆ.
(ಇಲ್ಲಿ ಆನಂದ ತೀರ್ಥರೆಂದರೆ ಮೂಲಗುರು ಮುಖ್ಯಪ್ರಾಣಾವತಾರರಾದ ಮಧ್ವಾಚಾರ್ಯರೂ ಹೌದು. ಮತ್ತು ತಮಗೆ ಸಂನ್ಯಾಸ ದೀಕ್ಷೆಯಿತ್ತ 17ನೇ ಪೀಠಾಧಿಪತಿಗಳಾದ ಆನಂದ ತೀರ್ಥ ಗುರುಗಳೂ ಹೌದು)

Completely engrossed with devotion in the lotus feet of Sri Ananda teertha (mula guru, pranaavataara shri Madhwacharya. And 17th guru Ananda teertha who gave sanyasa deeksha and is guru) , immersed in enjoying the svarupananda. Or as sva=Narayana, worshipping Narayana as Ananda purna) , withdrawn from the attractions of the sense organs, teaching the right knowledge only to the fit satvika people , the sun named Purnaprajna is shining with all the glory (in my heart)

 स्वछात्र संस्थापित शंखचक्र: सत् शास्त्र संतोषित लोकचक्र:।
स्वछेन्दुवक्त्र:प्रतिभाति पूर्णप्रज्ञाह्वयो भूमितले यतीन्द्र:।।2।।

ಸ್ವಛಾತ್ರ ಸಂಸ್ಥಾಪಿತ ಶಂಖಚಕ್ರ: ಸಚ್ಚಾಸ್ತ್ರ ಸಂತೋಷಿತ ಲೋಕಚಕ್ರ:।
ಸ್ವಚ್ಚೇoದುವಕ್ತ್ರ: ಪ್ರತಿಭಾತಿ ಪೂರ್ಣಪ್ರಜ್ಞಾಹ್ವಯೋ ಭೂಮಿತಲೇ ಯತೀಂದ್ರ:।।2।।

To His disciples He gave tapta chakra shankha mudras (so that His disciples received vaishnava deeksha and were blessed by prANa and Lord to make their learning of shastra effective) He narrated the divine vaishnava shastra wherever He went. Such a king among the sanyasis, Sri Purnaprajna teerth spreads joy and peace like a clear full moon on the earth.

ತಮ್ಮ ಶಿಷ್ಯರಿಗೆ ತಪ್ತ ಚಕ್ರ ಶಂಖ ಮುದ್ರೆಗಳ ನ್ನೀಯುತ್ತ   (ಅವರಿಗೆ ವೈಷ್ಣವ ದೀಕ್ಷೆಯಿತ್ತು ಪಾಲಿಸುತ್ತ , ಪ್ರಾಣದೇವರು ಮತ್ತು ಚಕ್ರಿಯ ಅನುಗ್ರಹದಿಂದ ತಾವು ಕಲಿತ ವೇದವಿದ್ಯೆ ಫಲಿಸುವಂತೆ ಮಾಡುತ್ತಿದ್ದರು. ಆಯಾ ಕಾಲದಲ್ಲಿ ಗುರುಗಳಿಂದ ತಪ್ತಮುದ್ರಾಧಾರಣವನ್ನು ಮಾಡಿಕೊಳ್ಳದಿದ್ದಲ್ಲಿ ಕಲಿತ ವೇದವಿದ್ಯೆ, ವರ್ಷವಿಡೀ ಮಾಡಿದ ಜಪತಪಾನುಷ್ಠಾನಗಳು ಫಲದಾಯಕವಾಗುವದಿಲ್ಲ. ಉಟ್ಟ ಜನಿವಾರದ ಪವಿತ್ರತೆಯೂ ಇರುವದಿಲ್ಲ. ಆದುದರಿಂದ ಆಯಾ ಕಾಲದಲ್ಲಿ ,ತಪ್ಪಿದರೆ ಗುರುಗಳು ಲಭ್ಯವಿದ್ದಾಗ ತಪ್ತಮುದ್ರೆಗಳನ್ನು ಸ್ವೀಕರಿಸುತ್ತಿರಬೇಕು)
ತಾವು ಸಂಚಾರಮಾಡುತ್ತಿರುವೆಡೆಯಲ್ಲಿ ಸಚ್ಚಾಸ್ತ್ರಗಳನ್ನು ಪ್ರವಚನ ಮಾಡುತ್ತ, ಹುಣ್ಣಿಮೆಯ ಚಂದ್ರನಂತೆ ಲೋಕದ ಜನರಲ್ಲಿ ವಿಷ್ಣುಸರ್ವೋತ್ತಮತ್ತ್ವದ ಆಹ್ಲಾದಕರ ಬೆಳದಿಂಗಳನ್ನು ಬೀರುತ್ತ, ಶ್ರೀ ಪೂರ್ಣಪ್ರಜ್ಞ ತೀರ್ಥರು ಪ್ರತಿಭಾಯುತರಾಗಿದ್ದಾರೆ.।।2।।
.
 अद्वैतवादप्रशमैकनिष्ठ: सद्वैष्णवानां प्रियकृद्वरिष्ट:।
सद्वैभवः साधुसभासु पूर्णप्रज्ञाख्ययोगी भुवने विभाति।।3।।

ಅದ್ವೈತವಾದಪ್ರಶಮೈಕನಿಷ್ಠ: ಸದ್ವೈಷ್ಣವಾನಾಂ ಪ್ರಿಯಕೃದ್ವರಿಷ್ಠ:।
ಸದ್ವೈಭವ: ಸಾಧುಸಭಾಸು ಪೂರ್ಣಪ್ರಜ್ಞಾಖ್ಯಯೋಗೀ ಭುವನೇ ವಿಭಾತಿ।।3।।

ಜೀವಬ್ರಹ್ಮಐಕ್ಯವಾದವನ್ನು ಸಪ್ರಮಾಣವಾಗಿ ಹತ್ತಿಕ್ಕಿ ತಮ್ಮ ಶಿಷ್ಟರ ಮನದಿಂದ ದೂರ ಒಗೆಯಲು ಸದಾ ನಿಷ್ಠರಾಗಿದ್ದು ವಿಷ್ಣು ಸರ್ವೋತ್ತಮತ್ತ್ವ ವಾಯುಜೀವೋತ್ತಮತ್ತ್ವವನ್ನು ಬೋಧಿಸಿ ಶಿಷ್ಯರನ್ನು ವೈಷ್ಣವಸನ್ಮಾರ್ಗದಲ್ಲಿ ನಡೆಸಿ ವೈಭವಪೂರ್ಣವಾದ ಸಜ್ಜನರ ಸಭೆಯಲ್ಲಿ ಶ್ರೀ ಪೂರ್ಣಪ್ರಜ್ಞ ಯೋಗಿಗಳು ಶೋಭಾಯಮಾನರಾಗಿದ್ದಾರೆ।।3।।

Sri Purnaprajna teerth was very serious and expert in showing the defects in advaita philosophy and in teaching the right vedic principles of vaishnava shastra , thereby leading the good devotees in the highest path of securing Lord's grace. Swamiji was thus striking in His ways in the congregation of jnanis and foremost among them.
.
वेदान्तशास्त्रार्थ्विचारदक्षः मॊदप्रदॊ वारितदुष्टपक्षः ।
देदीप्यतॆ॓॓$सौ भुवनेषु पूर्णप्रज्ञाभिदः श्री यतिराजवर्यः॥ ४॥

ವೇದಾಂತಶಾಸ್ತ್ರಾರ್ಥವಿಚಾರ ದಕ್ಷಃ ಮೋದಪ್ರದೋ ವಾರಿತದುಷ್ಟಪಕ್ಷಃ|
ದೇದೀಪ್ಯತೇ$ಸೌ ಭುವನೇಷು ಪೂರ್ಣಪ್ರಜ್ನಾಭಿದಃ ಶ್ರೀ ಯತಿರಾಜವರ್ಯಃ||೪||

Shri Purnaprajna teertha swamiji was foremost in showing the insights in the shaastra of the vedic corpus which was always pleasing to the disciples as it made available the secrets of  path of attaining bliss (moda pradah- moda is the everlasting bliss, moksha which can only be given by moda- blissfull vishnu, modapradah meaning swamiji was giving the ways to attain such modaprada, vishnu). This needed to show the shortcomings of other misleading paths which had arisen in the course of time, my misinterpreting the vedas and related texts, by ignorance and many times intentionally.

ವೇದಾಂತಶಾಸ್ತ್ರಗಳಲ್ಲಿ ಆಳವಾದ ಪಾಂಡಿತ್ಯದಿಂದ ತಾವು ಹೋದ ಕಡೆಗಳಲ್ಲಿ
ತಮ್ಮ ಪಾಠಪ್ರವಚನಗಳಿಂದ ಅವೈದಿಕ ಮತ್ತು ವೈದಿಕಮುಖವಾಡದ ಕಷ್ಟಪ್ರದ(ಅದ್ವೈತ)
ಶಾಸ್ತ್ರಗಳ ದುಷ್ಟವಿಚಾರಧಾರೆಯನ್ನು ಎತ್ತಿತೋರಿಸುತ್ತಾ ಮೋದಪ್ರದವಾದ ಶಾಸ್ತ್ರವನ್ನು
ತಿಳಿಯಾಗಿ ಹೇಳುತ್ತಾ ಶ್ರೀ ಪೂರ್ಣಪ್ರಜ್ನ ತೀರ್ಥರು ದೇದೀಪ್ಯಮಾನರಾಗಿದ್ದರು.( ಮೋದಪ್ರದ-
 ಇಲ್ಲಿ ಮೋದ ಎಂದರೆ ಆನಂದಪೂರ್ಣನಾದವಿಷ್ಣು. ಇಂತಹ ಆನಂದಪ್ರದನಾದ ವಿಷ್ಣುವಿನ
 ನೈಜಚಿತ್ರಣದ ಜ್ನಾನವೂ ಮೋದ. ಇದನ್ನು ಪ್ರದ- ಅಂದರೆ ಲೋಕಕ್ಕೆ ತೋರಿಸಿದವರು
 ಶ್ರೀಮದಾನಂದ ತೀರ್ಥರು. ಆದುದರಿಂದ ಮೋದ ಎಂದರೆ ಮಧ್ವರೂ ಹೌದು
. ಇಂತಹ ಮೋದಪ್ರದ, ಶಾಶ್ವತ ಸುಖಾನುಭವ ಪ್ರಾಪ್ತಿಗೆ ಕಾರಣವಾದ ಸಮೀಚೀನ
 ಜ್ನಾನವನ್ನು ಶ್ರೀ ಪೂರ್ಣಪ್ರಜ್ನರು ತಿಳಿಸಿಕೊಡುತ್ತಿದ್ದರು ಎಂದು ಒಟ್ಟೂ ಮೋದಪ್ರದ ಎಂಬ ಶಬ್ದಕ್ಕೆ ಅರ್ಥ)

विख्यात राजोचित चिह्नजालैः सितातपत्रोत्तम शंखतालैः ।
जितारिवेगे भुवनेषु पूर्णप्रज्ञाभिदः यतिराट् विभाति।।५॥

ವಿಖ್ಯಾತ ರಾಜೋಚಿತ ಚಿಹ್ನಜಾಲೈಃ ಸಿತಾತಪತ್ರೋತ್ತಮ ಶಂಖತಾಲೈಃ|
ಜಿತಾರಿವೇಗೇ ಭುವನೇಷು ಪೂರ್ಣಪ್ರಜ್ನಾಭಿಧಃ ಯತಿರಾಟ್ ವಿಭಾತಿ||೫||

Being a paarivraajya paramahamsa sanyasi, Sri Purnaprajna teerth was travelling fast along the places of His disciples like a King, with the various symbols fit for a king like the blowing of conches, daylight torches, dhwaja, chatra , chaamaras etc., conquering enemies of the divine ways.

ಪಾರಿವ್ರಾಜ್ಯ ಪರಮಹಂಸ ಸನ್ಯಾಸಿಗಳಾಗಿ ಪೀಠಾಧಿಪತಿಗಳೆಂದು ಅಧಿಕಾರಿಗಳಾದುದರಿಂದ ಆ ಪದವಿಗೆ ಶೋಭಿಸುವ ರಾಜವೈಭವದ ಚಿಹ್ನೆಗಳಾದ ಶಂಖದ್ವನಿ, ಛತ್ರ, ಚಾಮರ, ಧ್ವಜಾದಿಗಳಿಂದ ರಾಜೋಚಿತಮಾರ್ಗದಲ್ಲಿ ತಮ್ಮ ಶಿಷ್ಯವರ್ಗರಿರುವ ಊರುಗಳಲ್ಲಿ ಸಂಚರಿಸುತ್ತಾ ಸನ್ಮಾರ್ಗದಿಂದ ಜೀವನಕ್ಕೆ ಅಡ್ಡಿಪಡಿಸುವ ಸಮಾಜದಲ್ಲಿರುವ ಪಾಶವೀವಿಚಾರ ಧಾರೆಗಳನ್ನು ಹತ್ತಿಕ್ಕುತ್ತ ಪ್ರಕಾಶಿಸುತ್ತಿದ್ದರು.

श्रीविठ्ठलध्यान विधूतमॊहॊ देवेशमध्वार्चन पूत देहः।
जीवोत्तमार्याभिजनोत्ठ पूर्णप्रज्ञाख्ययॊगी भुवने विभाति॥६॥

Sri Purnaprajna teerth swamiji was a true yogi having conquered the wordly attachments and a pure mind with constant meditation in the lotus feet of Veera Vitthala, with a pure physical and mental existence through the divine worship of Supreme being, the Lord of Madhva. Being in the lineage of
the great Jeevottam teerth, He was a reknown for His wisdom.

ಶ್ರೀ ವೀರ ವಿಠ್ಠಲದೇವರ ಪದದಲ್ಲಿ ನಿತ್ಯ ಧ್ಯಾನಸಕ್ತರಾಗಿದ್ದು ಅರಿಷಡ್ವರ್ಗಗಳನ್ನು ಜಯಿಸಿ ಸಂಪೂರ್ಣ ವೈರಾಗ್ಯದಿಂದಿದ್ದು ದೇವೋತ್ತಮ ಮಧ್ವೇಶನ ನಿತ್ಯ ಅರ್ಚನೆಯಿಂದ ಕಾಯಾ ವಾಚಾ ಮನಸಾ ಅತ್ಯಂತ ಶುದ್ಧಗಾತ್ರರಾಗಿ ದೇಶದಲ್ಲಿ ಕಂಗೊಳಿಸುತ್ತಿದ್ದರು.

गोकर्णसंस्थान वराधिराजः लोकार्चितो सार्वनिवार्य तेजः।
शोकापह: साधुसभासु पूर्णप्रज्ञाभिदो भाति यतीन्द्रवर्यः ॥७॥

Sri Purnaprajna teerth swamiji , a reknown King in the kingdom of the great yati rajas of the Gokarna Partagali Jevottam math parampara was respected and honoured by the whole society. He was sparkling in the congregations of devotees, by getting rid of their suffering in this mundane life ..as well as leading them to get rid of the suffering bond of samsaara.

********
These seven verses of Sri Purnaprajna swamiji's stotra are available in the math. Reciting these will get the blessings of Sri Hari vAyu gurus. Shri Vishnu Shanbhag, Kumta

ಗೋಕರ್ಣ ಪರ್ತಗಾಳೀ ಜೀವೋತ್ತಮ ಮಠದ ಪರಂಪರೆಯ ಯತಿರಾಜರಲ್ಲೇ ಹಿರಿದಾದ ರಾಜರಾಗಿ ಸಮಾಜದ ಸಭೆಗಳಲ್ಲಿ ದಿವ್ಯ ತೇಜಸ್ಸಿನಿಂದ ಕಣ್ಗೊಳಿಸುತ್ತಾ ಜನರ ಐಹಿಕ ಕಷ್ಟಪರಂಪರೆಯನ್ನು ನೀಗಲು ಸಹಾಯ ಮಾಡುತ್ತ, ಅನಾದಿಕಾಲೀನ
ಸಂಸಾರಬಂದನವೆಂಬ ಘೋರಕಷ್ಟವನ್ನು ದೂರಪಡಿಸಲು ಸನ್ಮಾರ್ಗದರ್ಶನ ಮಾಡುತ್ತ ದಾರಿದೀಪವಾಗಿದ್ದರು.
ಈ ಏಳು ಶ್ಲೋಕಗಳು ಶ್ರೀ ಪೂರ್ಣಪ್ರಜ್ನತೀರ್ಥ ಸ್ವಾಮೀಜಿಯವರ ಬಗ್ಗೆ ಮಠದಲ್ಲಿ ಉಪಸ್ಥಿತವಿದ್ದು ಇದನ್ನು ಪಠಿಸಿದವರಿಗೆ ಶ್ರೀ ಹರಿ ಗುರುಗಳ ಕೃಪೆ ದೊರೆತು ಸಕಲ ಸನ್ಮಂಗಳವಾಗುವದರಲ್ಲಿ ಸಂಶಯವಿಲ್ಲ ಎಂದು ಪ್ರಾರ್ಥಿಸುವ ವಿಷ್ಣು ವೆಂಕಟದಾಸ್ ಶ್ಯಾನಭಾಗ, ಕುಮಟಾ.
|| श्री मध्वेशार्पणमस्तु ||

No comments:

Post a Comment

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...