।। हरि: ॐ श्री गुरुभ्यो नमः ।।
।। रुग्मिणीश विजयः ।।
प्रथमः सर्ग:
श्रीवेदान्तमहाचलं हि परितः संयोज्य सूत्राहिपं
सद्वातागमपोषितात्महृदयं तत्पूर्वपक्षासुरै:।
सिद्धान्तोक्तिसुरेश्वरैश्च मथितो यः कृष्ण दुग्धाम्बुधिः
स्वीयानाममृतं प्रयच्छति स मां पायाद्गुणोद्यन्मणि: ।। 1 ।।
Here SriKrishna is compared to the ocean of milk, Gods and Demons to purva paksha and siddhAnta ( objections and conclusive answers), serpent Vasuki to brahmasutras ,Mandara mountain to Vedanta, Moksha to the amrita.
Using the rope which are brahma sutras invigorated by Srimadacharya's sadAgamas curled round the mountain of Vedanta ,the ocean full of unsullied bliss and auspiciousness ,Sri Krishna was churned by the Demons and Gods of pUrvapaksha and siddhAnta to give the nectar of moksha , an eternal state of bliss to the followers of Acharya Madhva. May such ksheerasAgara Sri Krishna protect us.
ಶ್ರೀಮದಾನಂದ ತೀರ್ಥರ ಸದಾಗಮಗಳಿಂದ ಪೋಷಿತವಾದ ವೇದಾತಾತ್ಪರ್ಯ ನಿರ್ಣಾಯಕಗಳಾದ ಬ್ರಹ್ಮಸೂತ್ರಗಳೆಂಬ ವಾಸುಕೀ ಎಂಬ ಹಗ್ಗದಿಂದ ವೇದಾಂತವೆಂಬ ಮಂದರ ಪರ್ವತವನ್ನು ಸುತ್ತಿಸಿ , ಪೂರ್ವಪಕ್ಷ-ಸಿದ್ಧಾಂತಗಳೆಂಬ ದೈತ್ಯ-ದೇವತೆಗಳು ಸಕಲಸದ್ಗುಣ, ಜ್ಞಾನಾನಂದಪೂರ್ಣ ಶ್ರೀಕೃಷ್ಣನೆಂಬ ಕ್ಷೀರಸಾಗರವನ್ನು ಕಡೆಯಲು , ಶ್ರೀಮದಾನಂದತೀರ್ಥರ ಪಕ್ಷದ ಸಜ್ಜನರಿಗೆ ಮೋಕ್ಷವೆಂಬ ಅಮೃತವನ್ನು ಕೊಡುವ ಶ್ರೀಕೃಷ್ಣನು ರಕ್ಷಿಸಲಿ.
सच्छास्त्रोदितवर्त्मना पदमिदं ध्यायन्मदंकांकितो
मन्मंत्रं जप शास्त्रसंपदमथो दास्यामि भाग्ये: सह।
तत्तत्त्वान्यपि बोधयामि तदानुप्राप्यो मदंघ्रिर्भवे-
दित्याघोषयतीव यः करचयैस्तं वाजिवक्त्रं भजे ।।2।।
Lord Hayagreeva seems to be indicating these from the position of His four hands.
Guided by sat-shAstra meditate on me with full devotion. Wear my lAnChanas-(shankha cakra) and be immersed in repeating my name (savouring the meaning of those). I will fulfill you with the incomparable wealth of knowledge that leads to eternal bliss together with mundane wealth to live comfortably in this world. I will also make you understand the deep secrets of tenets of shAstras and grant release from the eternal bonds.
( The hand holding the book with jnAna mudra indicating bestowal of jnAna and wealth , the hand holding shankha (indicating wearing of His lAnChanas), the hand holding aksha mAla indicating reciting of His names, the three fingers- middle finger ,forefinger and little finger pointing to His legs)
ತಮ್ಮ ಆರಾಧ್ಯ ಹಯಗ್ರೀವ ಮೂರ್ತಿಯನ್ನು ಭಜಿಸುತ್ತಾ ಹೇಳುತ್ತಾರೆ.
"ಸದಾಗಮಗಳಿಂದ ಪಡೆದ ಜ್ಞಾನದಿಂದ ನನ್ನ ಪದವನ್ನೇ ಧ್ಯಾನಿಸುತ್ತ, ನನ್ನ ಚಕ್ರಶಂಖಾದಿ ಲಾಂಛನಗಳನ್ನು ಧರಿಸಿಕೊಂಡು (ಪವಿತ್ರವಾದ ತನುವಿನಿಂದಲೂ , ಮನಸ್ಸಿನಿಂದಲೂ) ನನ್ನ ನಾಮಮಹಿಮೆಯನ್ನು ಮನನಮಾಡುತ್ತ ಜಪಿಸಿ. ಐಹಿಕಸಂಪತ್ತನ್ನೂ ,ಶಾಸ್ತ್ರಸಂಪತ್ತಿನೊಂದಿಗೆ ಅದರ ತಿರುಳಾದ ತತ್ತ್ವಸಂಪತ್ತನ್ನೂ ನಿಮಗೆ ಮನದಟ್ಟುಮಾಡಿಸಿಕೊಡುತ್ತೇನೆ. ಆ ಭಾಗ್ಯವನ್ನು ಪಡೆದುಕೊಂಡು ನೀವು ನನ್ನ ಪಾದಸಾನ್ನಿಧ್ಯದ ಮೋಕ್ಷರೂಪಿ ಫಲವನ್ನು ಪಡೆಯುವಿರಿ."
ಹೀಗೆಂದು ಶಂಖ, ಅಕ್ಷಮಾಲೆ, ಪುಸ್ತಕ, ಜ್ಞಾನಮುದ್ರಾ ಹಸ್ತಗಳಿಂದ ತಿಳಿಸುತ್ತಿರುವ ಹಯಮುಖನನ್ನು ಭಜಿಸುತ್ತೇನೆ ।।2।।
श्रये हयमुखं श्राव्यकाव्यमार्ग समाप्तये ।
सरागयोगिपूगोक्त स्तोत्रतोत्रवशं महः ।।3।।
I take refuge in the kindness of Hayamukha for completion of this poetical work (which describes the auspicious nature of Lord and therefore bestows auspiciousness on the devotee who listens to this) , who is always pleased with descriptions of His wondrous ways.
ಯೋಗಿಗಳಿಂದ ಮಾಡಲ್ಪಟ್ಟ ಗುಣಮಹಿಮಾವರ್ಣನೆಗೆ ವಶನಾಗುವ ಹಯಮುಖನನ್ನು , ಅವನ ಗುಣಾಮಹಿಮಾವರ್ಣನರೂಪವಾದ ,ಕೇಳಲು ಅತ್ಯಂತ ಮಂಗಳಕರವಾದ , ಈ ಕಾವ್ಯದ ಪೂರ್ಣತೆಗಾಗಿ ಆಶ್ರಯಿಸುತ್ತೇನೆ
शिंजन्नूपुरशोभिपादयुगलां मंदस्मितोद्यन्मुखीम् ।
कंजाक्षीम् कुचभारभीरुविलसन्मध्यां क्वणत् कंकणाम् ।
शंभ्वाद्मै: परिसेवितां सुवसनां जाम्बूनदालंकृताम्
अम्बाम् तां प्रणतोस्मि कृष्णरमणीं लंबालकां रुक्मिणीम् ।।4।।
Soft feet adorned with musical anklets and the with lotus eyed beautiful smiling face, the heaviness of the top emphasizing the thin waist , the bangles making sweet sound, wearing a pure glowing dress, surrounded in the middle by decorated golden belt, full of curly hairs , worshipped by Brahma, Rudra and others, fit as a blessed companion to Lord Krishna , I prostrate to such a Rukmini devi.
ಝಣಝಣನಾದಗೈವ ನೂಪುರಗಳಿಂದ ಶೋಭಿಸುವ ಕೋಮಲವಾದ ಪದದ್ವಂದ್ವಗಳುಳ್ಳವಳು , ಮಂದಹಾಸದಿಂದ ಉಲ್ಲಸಿತವಾದ ಮುಖಕಮಲವುಳ್ಳವಳು, ಕಮಲದೆಸಳಿನಂತೆ ವಿಕಸಿತವಾದ ಕಣ್ಣುಗಳುಳ್ಳವಳು , ಸ್ತನಭಾರಗಳಿಗೆ ಹೆದರಿ ಕುಗ್ಗಿತೋ ಎಂಬಂತಿರುವ ಕೃಶವಾದ ನಡುವುಳ್ಳವಳು, ಕಿಣಿಕಿಣಿ ಮಂಜುಳನಾದಗೈವ ಕಂಕಣಗಳಿಂದ , ಹೊಳೆವ ಶುಭ್ರ ವಸನವನ್ನುಟ್ಟಿರುವವಳು, ಸೊಂಟದಲ್ಲಿ ಬಹುರತ್ನಗಳಿಂದ ಖಚಿತವಾದ ಬಂಗಾರದ ಪಟ್ಟೆಯುಳ್ಳವಳು, ಗುಂಗುರಾದ ಕೇಶರಾಶಿಯಿಂದ ಶೋಭಿಸುತ್ತಿರುವವಳು, ಬ್ರಹ್ಮ ರುದ್ರಾದಿ ದೇವತಾವೃಂದಾಗಳಿಂದ ಸದಾ ಪೂಜಿತಳು, ಶ್ರೀ ಕೃಷ್ಣನ ಮನೋರಮಣಿಯು , ಜಗನ್ಮಾತೆಯೂ ಆದ ರುಕ್ಮಿಣೀ ದೇವಿಗೆ ನಮಿಸುತ್ತೇನೆ. ।।4।।
सत्संघमानससरोवरमध्यवर्ती
कृष्णाङ्घ्रिचारुकमलार्पितचित्त वृत्ति:।
शास्त्रातिमंजुपदरंजितरम्यसंस-
दास्माकहृत्सरासिजे$स्तु स मध्वहंसः ।।5।।
Sriman Madhva , the great pure white swan- paramahamsa pakshi- swimming in the middle of manasa sarovara of divine persons, who has fixed His mind forever firmly in the incomparably beautiful lotus feet of Sri Krishna, the one who captures the attention of the congress of divine minded with His words of wisdom in line with proper sources of knowledge, may come and settle in my heart.
ಸಜ್ಜನರ ಸಂಘದ ಮಾನಸಸರೋವರದಲ್ಲಿ ವಿಹರಿಸುತ್ತಿರುವ, ತದೇಕಚಿತ್ತದಿಂದ ಪರಮಮಂಗಳಕರವಾದ ಶ್ರೀಕೃಷ್ಣನ ಸುಂದರ ಪದಕಮಲದಲ್ಲೇ ತಮ್ಮ ಮನವನ್ನು ನೆಟ್ಟಿರುವ, ಸಜ್ಜನರ ಸಭೆಯನ್ನು ಸದ್ಗತಿಪ್ರದವಾದ ಸಚ್ಚಾಸ್ತ್ರಗಳಿಗನುಕೂಲ ತಮ್ಮ ಮಾತುಗಳಿಂದ ರಮಿಸುತ್ತಿರುವ ಶ್ರೀಮನ್ ಮಧ್ವಹಂಸವು ನಮ್ಮ ಹೃದಯಕಮಲದಲ್ಲಿ ಬಂದು ನೆಲೆಸಲಿ.
ताटंकद्वय शोभि कर्ण युगलं भ्राजद्दयावीक्षणं
पूर्णेन्दुद्युति विद्रुमाधररुचा व्यामिश्रमंदस्मितम् ।
ईशत्कुंचितकुंतलं सतिलकं नासोल्लसन्मौक्तिकं ।
भूयात्कूर्मसदृक्षकर्णयुगलं वाणीमुखं श्रेयसे ।।6।।
May the mere glance from Saraswati devi bless us with the knowledge that takes us toward the final grace of Lord.
(Sri Vadiraja teerth swamin describes the exquisite beauty of the face ) Vani devi's ears have rings which are shining brightly. Her glance is full of kindness. Fresh and enlivening like a full moon with a smile from coral like lips, the nose studded with pearl ring, cheeks full and rounded like the back of a tortoise, and curly hairs adjoining Her face is auspicious with the vermilion mark on the forehead.
ಶೋಭಾಯಮಾನವಾದ ಕರ್ಣಾಭರಣಗಳು ಜೋಲಾಡುತ್ತಿರುವ, ದಯಾಪೂರ್ಣವಾದ ದೃಷ್ಟಿಯಿಂದ ನೋಡುತ್ತಿರುವ,, ಹುಣ್ಣಿಮೆಯ ಚಂದ್ರನಂತೆ ಆಹ್ಲಾದಕರವಾಗಿರುವ, ಹವಳದಂತಿರುವ ಕೆಂದುಟಿಗಳಿಂದ ಮಂದಹಾಸ ಬೀರುತ್ತಿರುವ, ಮುತ್ತಿನ ಮೂಗುತಿಯಿಂದ ಶೋಭಿಸುತ್ತಿರುವ, ಆಮೆಯ ಬೆನ್ನಿನಂತೆ ದುಂಡಗೆ ತುಂಬಿಕೊಂಡ ಕೆನ್ನೆಗಳಿರುವ, ಸುತ್ತಲೂ ಗುಂಗುರವಾದ ಕೂದಲುಗಳಿಂದ, ಒಪ್ಪುವ ತಿಲಕದಿಂದ ಮಂಗಲಮಯವಾದ ವಾಣೀದೇವಿಯ ಮುಖಕಮಲವು ನಮ್ಮ ಶ್ರೇಯಸ್ಸಿಗೆ ಕಾರಣವಾಗಲಿ || 6 ||
श्रीनाथकीर्त्यम्बुजसेव्यगंधं
प्राणः स संगृह्य विहर्तुमीष्टे।
सो$हं तदीयागमविस्तृतं तद्
वाणी मुखं वासयितुं वृणोमि ।।7।।
Only Jeevottama Mukhyaprana is fit and capable to collect and enjoy in the fragrance of Greatness of Lord of Lakshmidevi. From the same blissful fragrance, which is a distilled essence of sadAgamas I will spread it for our vAkshuddhi. ।।7।।
ಶ್ರೀದೇವಿಯ ಮನೋರಮಣನ ಕೀರ್ತಿಯೆಂಬ ಕಮಲದ ಸುಗಂಧವನ್ನು ಸಂಗ್ರಹಿಸಿ ವಿಸ್ತರಿಸಲು ಶಕ್ತನಾದ ಅಧಿಕಾರಿಯು ಪ್ರಾಣನೇ ಸರಿ. ಸದಾಗಮದ ಸಾರಭೂತವಾದ ಮಧ್ವಮುನಿಗಳ ಶಾಸ್ತ್ರಸುಗಂಧದಿಂದ ನಮ್ಮ ವಾಕ್ ಶುದ್ಧಿಯನ್ನು ಮಾಡಲಿಚ್ಛಿಸುತ್ತೇನೆ. (ಇದರ ಅಂತರಂಗವೇನೆಂದರೆ ಶ್ರೀಮದಾನಂದತೀರ್ಥರ ಶಾಸ್ತ್ರವನ್ನು ತಿಳಿಯದೇ ಶ್ರೀಕೃಷ್ಣಭಗವಂತನ ಮಹಿಮೆಯ ಜ್ಞಾನವಾಗಲು ಅಶಕ್ಯವಾದುದರಿಂದ ಅದರ ಮೂಲಕವೇ ಜನ್ಮಸಾರ್ಥಕ್ಯ ಮಾಡಿಕೊಳ್ಳುತ್ತೇವೆ. ಅರ್ಥಾತ್ ಈ ಗ್ರಂಥವು ಮಧ್ವಾಶಾಸ್ತಕ್ಕನುಸಾರವಾಗಿ ರಚಿಸಲ್ಪಟ್ಟಿದೆ ಎನ್ನುತ್ತಾರೆ) ।।7।।
हयास्यनासापुटजातवात-
विघातधूताघपलालजातः ।
मुनीशवागीशसुतः सुरम्यां
हरे: कथां शंसति वादिराजः ।।8।।
Sri Vadiraja , disciple of king of ascetics Sri Vageesha teertha, pure with the sins blown off with the air from the nose of Lord Hayavadana as piles of dust is blown off with wind, writes down the auspicious biography of Srihari. ( With the use of third person *writes down* instead of *I write* Sri Vadiraja teertha indicates that the real composer is Lord Himself)
ಶ್ರೀ ಹಯವದನದೇವರ ಮೂಗಿನ ಹೊರಳುಗಳಿಂದ ಹೊರಟ ಗಾಳಿಯ ವೇಗಕ್ಕೆ ಪಾಪರಾಶಿಯೆಂಬ ಧೂಳಿನ ರಾಶಿಯು ಹಾರಿಹೋಗಿ ಶುದ್ಧವಾದ , ಮುನಿಪುಂಗವರಾದ ಶ್ರೀವಾಗೀಶ ತೀರ್ಥರ ಶಿಷ್ಯರಾದ ವಾದಿರಾಜರು ಶ್ರೀಹರಿಯ ರಮ್ಯವಾದ ಚರಿತ್ರೆಯನ್ನು ವರ್ಣಿಸುತ್ತಾರೆ. ( ವರ್ಣಿಸುತ್ತೇನೆ ಎನ್ನುವ ಬದಲು ವರ್ಣಿಸುತ್ತಾರೆ ಎಂದು ಹೇಳಿ ಈ ಗ್ರಂಥದ ಕರ್ತೃ ಮುಖ್ಯವಾಗಿ ಶ್ರೀಹರಿಯೇ ಎನ್ನುವದನ್ನು ಸೂಚಿಸಿದ್ದಾರೆ)
अपण्डितेनापि मयार्जितेयं
मुकुंदलीला कविकंठमाला ।
अकौशलेन ग्रथितेति जाति-
प्रसूनमालां किमु संत्यजन्ति ।।9।।
(To point out that one should be humble, Sri Vadiraja writes)
Though not an expert in poetry, the biography of the Supreme, bestower of moksha , written by me is worthy enough to be valued by the poets. Does anyone discard the garland of fragrant jasmine flowers just because it has been tied unevenly by rough hands?
(ಲೋಕಶಿಕ್ಷಣಕ್ಕಾಗಿ ರಾಜರು ಹೇಳುತ್ತಾರೆ)
ಪಂಡಿತನಲ್ಲವಾದರೂ ನನ್ನಿಂದ ರಚಿತವಾದ ಮುಕ್ತಿದಾಯಕನ ಈ ಚರಿತ್ರೆ ಕವಿಗಳೆಲ್ಲರಿಗೂ ಕಂಠಕ್ಕೆ ಆಭೂಷಣವೇ ಆಗಿದೆ. ಅಕುಶಲನಿಂದ ಕಟ್ಟಲ್ಪಟ್ಟ ಸುವಾಸನೆಯ ಜಾಜೀ ಮಾಲೆಯು ಅಡ್ಡತಿಡ್ಡವಾಗಿದೆಯೆಂದು ಯಾರಾದರೂ ಅದನ್ನು ಬಿಸುಡುತ್ತಾರೇನು?
अपि प्रमादागतदोषलेशा -
मिमां कवित्वश्रियमाद्रियध्वम् ।
बुधा विदग्धै: किमुपेक्षणीया
पयोब्धिजा चंचलताख्यदोषात् ।।10।।
If any shortcomings are seen in this poetical composition, they should not be considered. No one ignores and discards Shreedevi because some see Her as whimsical (fickle).
( In this verse Rajaru has noted in His inimitable style that the composition is free from shortcomings. It is an established fact that Lakshmidevi has no faults. The way some describe Her as unstable stems from their wrong understanding . No such faults are present in Sri devi. Similarly no faults can be present in the kAvya Sri that has come forth from Rajaru )
ಈ ಕಾವ್ಯಶ್ರೀಯಲ್ಲಿ ಕಿಂಚಿತ್ ನ್ಯೂನತೆಗಳಿದ್ದರೂ ( ಪ್ರಮಾದವಶಾತ್ ಎಂದಿದ್ದರೂ ಅದು ಹೇಗೆ ಕೂಡುವದಿಲ್ಲ ಎನ್ನುವದನ್ನು ಮುಂದೆ ವಿವರಿಸಿದ್ದೇನೆ) ಅವನ್ನು ಪರಿಗಣಿಸಬಾರದು. ಯಾವ ರೀತಿ ಚಂಚಲತೆ ಎನ್ನುವ ದೋಷದಿಂದ ಕ್ಷೀರಾಬ್ಧಿಸಂಭವಳಾದ ಶ್ರೀಲಕ್ಷ್ಮೀ ದೇವಿಯನ್ನು ಉಪೇಕ್ಷಿಸುವದಿಲ್ಲವೋ ಅದರಂತೆ ಈ ಕಾವ್ಯವು ಉಪೇಕ್ಷಣೆಗೆ ತಕ್ಕುದಲ್ಲ. ಇದನ್ನು ಆದರದಿಂದ ಸ್ವೀಕರಿಸಿ !
( ಲಕ್ಷ್ಮೀ ದೇವಿ ದೋಷರಹಿತಳು. ಆದರೆ ಅವಳಲ್ಲಿ ಚಾಂಚಲ್ಯದೋಷವಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ. ಆದರೆ ಈ ದೋಷವು ನೋಡುವವರ ಕಣ್ಣಲ್ಲಿ ಮಾತ್ರ ಹೊರತು ಲಕ್ಷ್ಮೀ ದೇವಿಯಲ್ಲಿ ಇಲ್ಲ. ಅದೇ ರೀತಿ ರಾಜರು ಬರೆದ ಕಾವ್ಯದಲ್ಲಿ ಪ್ರಮಾದದಿಂದಾಗಲೀ ಇತರ ಕಾರಣಗಳಿಂದಾಗಲೀ ದೋಷಗಳಿರಲು ಅಶಕ್ಯ ಅದಕ್ಕೇ ಇದನ್ನು ರಾಜರು ಕಾವ್ಯಶ್ರೀ ಎಂದು ಕರೆದಿದ್ದಾರೆ. ಅದರಿಂದ ಹೇಗೆ ಶ್ರೀದೇವಿಯಲ್ಲಿ ದೋಷಗಳಿಗೆ ಅವಕಾಶವಿಲ್ಲವೋ ಹಾಗೆಯೇ ಈ ಕಾವ್ಯಶ್ರೀಯಲ್ಲೂ ದೋಷಗಳಿರಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜರು)
...
Hari Om . Kindly accept my immense gratitude for this post.
ReplyDeleteKindly clarify whether the last line of Sri Vanistuti should read as कूर्मसदृश instead of कूर्मसदृक्ष