Total Pageviews

Wednesday, February 13, 2019

अंत्य प्रार्थना - "Make me immortal"


।। श्रीमद्धनुमभीममध्वांतर्गत रामकृष्णवेदव्यासात्मक श्रीलक्ष्मीहयग्रीवाय नमः।।
।।श्रीमद् वादिराजतीर्थ गुरुभ्यो नमः।।
।।अस्मद् गुरुभ्यो नमः।।

ओम् नानानं वा नो धियो विव्रतानि जनानां
तक्षारिष्टं रुतं भिषग् ब्रह्मासुन्वंतमिच्चति
इंद्रायेंदो परिस्रव।।१।। ओम्

This is soma sukta present in Rig-Veda, 9th mandala 112, 113 and 114. This describes Vaikuntha beautifully and prays to Pavamana (Mukhyaprana) to carry us there.
Srimad Vadiraja teertha swamiji has quoted this sukta to prove that Vaikuntha is an indestructible place present even in pralaya. Yuktimallika 5th part called phaladhyaya has wonderful arguments given and Sri Surottama teertha swamiji has written an exhaustive commentary on this called bhAva vilAsinee

ओम् नानानं वा नो धियो विव्रतानि जनानां
तक्षारिष्टं रुतं भिषग् ब्रह्मासुन्वंतमिच्चति
इंद्रायेंदो परिस्रव।।१।। ओम्
.
Here इंदु is पवमान (मुख्यप्राण) and इंद्र is विष्णु. इंद्र=परम ऐश्वर्यवान्. As only Vishnu has infinite wealth of every kind at all times, only He can be really Indra. Lord of heavens Purandara, the present Indra, is seen to have lost His kingdom many times and gets it restored.
So the mantra prays to Pavamana.
Oh Pavamana! Carry us to the place of Indra. ( हे ! इंदो. इंद्राय परिस्रव). This sentence implies that Pavamana needs to carry us because even in the state of mukti we are not able to go there of our own accord. And do we enter the place of Vishnu, Vaikuntha, purely for enjoyment? Absolutely not! The chaturthi vibhakti इंद्राय implies that it is to serve Lord. The name इंद्र is used here to denote His absolute possession of every kind of wealth (not just material). Thereby the name Indra denotes that even in mukti He is the Lord of all jivas too and there is neither equality nor oneness with jivas.
....
ಇಲ್ಲಿ ಇಂದು ಎಂದರೆ ಪವಮಾನ (ಮುಖ್ಯಪ್ರಾಣ). ಮತ್ತು ಇಂದ್ರ ಎಂದರೆ ವಿಷ್ಣು. ಇಂದ್ರ ಎಂಬ ಪದದ ಅರ್ಥ ಪರಮ ಐಶ್ವರ್ಯಶಾಲಿ. ಸ್ವರ್ಗಾಧಿಪತಿಯಾದ ಇಂದಿನ ಪುರಂದರ ನಾಮಕ ಇಂದ್ರನು ಎಷ್ಟೋ ಸಲ ತನ್ನ ಐಶ್ವರ್ಯವನ್ನು ಕಳೆದುಕೊಂಡದ್ದನ್ನು ನಾವು ತಿಳಿದಿದ್ದೇವೆ. ಆದರೆ ವೈಕುಂಠಾಧಿಪತಿಯಾದ ವಿಷ್ಣು ಎಂದೆಂದಿಗೂ, ಯಾವತ್ತಿಗೂ ಚ್ಯುತಿಬಾರದ ಪರಮ ಐಶ್ವರ್ಯಶಾಲಿಯಾದ ಇಂದ್ರನೇ ಸರಿ.
ಇಂದ್ರಾಯೇಂದೋ ಪರಿಸ್ರವ ಎಂದರೆ ಹೇ! ಇಂದುನಾಮಕ ಪವಮಾನನೇ! ಇಂತಹ ಪರಮ ಐಶ್ವರ್ಯಶಾಲಿಯಾದ ವಿಷ್ಣುವಿನ ಸ್ಥಾನವಾದ ವೈಕುಂಠದೆಡೆ ನನ್ನನ್ನು ಒಯ್ಯು. ಪರಿಸ್ರವ ಎಂಬ ಶಬ್ದ , ಮುಕ್ತಜೀವಿಯೂ ಕೂಡ ಸ್ವತಂತ್ರನಾಗಿ ವೈಕುಂಠದೆಡೆ ಹೋಗಲು ಸಮರ್ಥನಲ್ಲ. ಹೊರತು ಮುಖ್ಯಪ್ರಾಣನೇ ಒಯ್ಯಬೇಕು ಎನ್ನುತ್ತದೆ. ಮತ್ತು ಕೇವಲ ಭೋಗಕ್ಕಾಗಿ ಮುಕ್ತಿಗೆ ಒಯ್ಯು ಅನ್ನುವದಿಲ್ಲ. ಮುಕ್ತಿಯಲ್ಲೂ ಒಡೆಯನಾದ ವಿಷ್ಣುವಿನ ಸೇವೆಗಾಗಿ ಕರೆದೊಯ್ಯು ಎನ್ನುತ್ತದೆ.  ಇಂದ್ರಾಯ ಎನ್ನುವ ಚತುರ್ಥಿ ವಿಭಕ್ತಿ , ವಿಷ್ಣು ಎಂದೆಂದಿಗೂ ಮಿತಿಯಿಲ್ಲದ,  ಪರಮ ಐಶ್ವರ್ಯಶಾಲಿ ಎಂದು ತಿಳಿಸಿ ಅವನ ಸಾಮ್ಯವಾಗಲೀ ಐಕ್ಯವಾಗಲೀ ಮುಕ್ತರು ಪಡೆಯುವದಿಲ್ಲ. ಮುಕ್ತಿಯಲ್ಲಿಯೂ ಅವನೇ ಜೀವಗಣಗಳ ಒಡೆಯ ಎನ್ನುವದನ್ನು ಸ್ಪಷ್ಟಗೊಳಿಸುತ್ತದೆ.
In Vaikuntha reside countless souls who have attained mukti in previous cycles of creations. These souls carry out various actions propelled by their internal differences. As given by the Shruti ऋचां त्वः पोषमास्ते..., तत्र पर्येति and so on, one mukta recites Rig-Veda, some others sing Sama veda, others are worshiping through dhyana , some indulge in traveling and dancing etc etc. All these activities are purely expressions of their own bliss in the continued worship of Vishnu. This is due to the free flow of devotion, which is a natural character of their own being.
Vedic prouncements are many which describe the different activities of the muktas.
If the question arises as to the material from which the chariots, bows, arrows, wood etc are made..
तक्षारिष्टं ऋतं भिषग् ब्रह्मासुन्वंतमिच्छति
The mukta carpenter (taksha), uses the material that is from the sentient parts of the mukta trees and sentient feathers of the mukta birds. (Rishtam). The Vaidya who wants to join these sentient parts back to their owners by reciting mantras is termed here as Bhishak. Similarly the Brahma who is in the yajnashaala and presses the sentient soma vine by the Ritvik is also present here.
इंद्राय इंदो परिस्रव
Oh ! Pavamana, please carry me to such a place where Indra (Vishnu) is thus worshiped out of pure bliss by the muktas.
This part of the mantra is not too clear here, but the next mantra explains it and makes us understand what exactly vaikuntha is.
(I will also include some verses from yukti mallika for understanding the importance of these Riks.
**
ವೈಕುಂಠದಲ್ಲಿ ಅನಾದಿಕಾಲದಿಂದ ನಡೆಯುತ್ತಿರುವ ಸೃಷ್ಟಿಯಲ್ಲಿ ಸಾಧನ ಮಾಡಿ ಮುಕ್ತರಾದ ಜೀವಗಣಗಳು ಅನಂತ ಸಂಖ್ಯೆಯಲ್ಲಿವೆ  ಜೀವರೆಲ್ಲ ತಮ್ಮ ತಮ್ಮ ಸ್ವರೂಪ ಯೋಗ್ಯತೆಗೆ ತಕ್ಕಂತೆ ನಾನಾವಿಧವಾಗಿ ಶ್ರೀಮನ್ನಾರಾಯಣನನ್ನು ಆರಾಧಿಸುತ್ತಿರುತ್ತಾರೆ.  ಇದನ್ನೇ ವೇದದಲ್ಲಿ ऋचां त्वः पोषमास्ते..., तत्र पर्येति ಎಂದೆಲ್ಲ ವರ್ಣಿಸುತ್ತಿವೆ. ಒಬ್ಬ ಮುಕ್ತ ಬ್ರಹ್ಮನು ಋಗ್ವೇದ ಪಠಣ ಮಾಡುತ್ತಿದ್ದರೆ ಇನ್ನೊಬ್ಬ ಸಾಮವೇದ ಗಾಯನ ಮಾಡುತ್ತಾನೆ. ಇನ್ನು ಕೆಲವರು ಶ್ರೀಹರಿಯ ನಾನಾರೂಪಗಳ ಧ್ಯಾನದಿಂದ ಸುಖಪಡುತ್ತಿದ್ದಾರೆ  ಇನ್ನು ಕೆಲವರು ಆನಂದೋದ್ರೇಕದಿಂದ ವಿಹಾರಾದಿಗಳನ್ನು ಮಾಡುತ್ತಿದ್ದಾರೆ. ರೀತಿ ಅನೇಕಾನೇಕ ಮುಕ್ತ ಜೀವಗಣಗಳು ಶ್ರೀಹರಿಯ ಆರಾಧನಾ ರೂಪವಾಗಿಯೇ ಕರ್ಮಗಳನ್ನು ಮುಕ್ತಿಯಲ್ಲೂ ಕೂಡ ಮಾಡುತ್ತ ಮಾಡುತ್ತ ತಮ್ಮ ಸ್ವರೂಪವೇ ಭಕ್ತಿಯನ್ನೇ ವ್ಯಕ್ತಗೊಳಿಸುತ್ತ ಆದ ಆನಂದಿಸುತ್ತಿರುತ್ತಾರೆ.    
ವೇದಗಳಲ್ಲಿ ಮುಕ್ತರ ಚಟುವಟಿಕೆಗಳನ್ನು ವರ್ಣಿಸುವ ಮಂತ್ರರಾಶಿಗಳು ಬಹಳೇ ಇವೆ. ಕೆಲವನ್ನು ಹಿಂದೆ ನೋಡಿದ್ದೇವೆ. ಈಗೊಂದು ಸಂದೇಹ. ಮುಕ್ತಸ್ಥಾನವಾದ ವೈಕುಂಠದಲ್ಲಿ ರಥಗಳಾಗಲೀ , ಬಿಲ್ಲು ಬಾಣಗಳನ್ನಾಗಲೀ  ಮಾಡಲು ಸಾಧನ ಸಾಮಗ್ರಿಗಳು ಎಲ್ಲಿ? ಅಂದರೆ ವೇದ ಹೇಳುತ್ತದೆ..
तक्षारिष्टं ऋतं भिषग् ब्रह्मासुन्वंतमिच्छति
ಮುಕ್ತನಾದ ಬಡಗಿಗಳು  (ತ್ವಷ್ಟಾ) ಅಪ್ರಾಕೃತ ಜ್ಞಾನಾನಂದ ಶರೀರಿಗಳಾದ ಮರಗಳಿಂದ, ಪಕ್ಷಿಗಳ ರೆಕ್ಕೆಗಳಿಂದ ಇತ್ಯಾದಿ ಚೇತನಾತ್ಮಕ ಭಾಗಗಳಿಂದಲೇ ಅವನ್ನು ತಯಾರಿಸುತ್ತಾನೆ. (ರಿಷ್ಟಮ್). ಅಷ್ಟೇ ಅಲ್ಲ ಚೇತನಾತ್ಮಕ ಭಾಗಗಳು ಪುನಃ ಆಯಾ ಜೀವ ಶರೀರಗಳೊಂದಿಗೆ ಜೋಡಿಸಲು ಮುಕ್ತ ವೈದ್ಯರೂ (ಭಿಷಕ್) ಮಂತ್ರಗಳನ್ನು ಪಠಿಸುತ್ತಾರೆ. ಯಜ್ಞಶಾಲೆಯಲ್ಲಿ ಚೇತನಾತ್ಮಕ ಸೋಮಲತೆಯನ್ನು ಹಿಂಡಲು ಬ್ರಹ್ಮನೂ ಋತ್ವಿಜರನ್ನು ನೇಮಿಸುತ್ತಾನೆ. ವೈದ್ಯರೂ ನಂತರ ಮಂತ್ರ ಪಠಣೆಯಿಂದ ಪುನಃ ಚೇತನಾತ್ಮಕ ಸೋಮಲತೆಯೊಂದಿಗೆ ರಸವನ್ನು ಜೋಡಿಸಿ ಸರಿಪಡಿಸುತ್ತಾರೆ.
इंद्राय इंदो परिस्रव
ಹೇ ! ಪವಮಾನನೇ ನನ್ನನ್ನು ಇಂತಹ, ಶ್ರೀಹರಿಯ ನಿರಂತರ ಆರಾಧನಾ ರೂಪ ಸ್ಥಳವಾದ, ಆನಂದಾತ್ಮಕವಾದ ಲೋಕಕ್ಕೆ ಕರೆದೊಯ್ಯು. 
..
ಭಾಗದ ಅರ್ಥವು ಸ್ವಲ್ಪ ವಿಚಿತ್ರವೂ, ಅಪ್ರಸಿದ್ಧವೂ ಆದುದರಿಂದ ಅದನ್ನು ಮುಂದಿನ ಮಂತ್ರವು ವಿಷದೀಕರಿಸಿ ಮನಗಾಣಿಸುತ್ತದೆ. ವೈಕುಂಠವೆಂದರೆ ಹೇಗಿದೆ ಎನ್ನುವದನ್ನು ಸ್ಪಷ್ಟಗೊಳಿಸುತ್ತದೆ. .
(ಯುಕ್ತಿಮಲ್ಲಿಕಾ ಗ್ರಂಥದಲ್ಲಿ ಶ್ರೀಮದ್ ವಾದಿರಾಜ ಶ್ರೀಮಚ್ಚರಣರು ಇದನ್ನು ಸುಲಭವಾಗಿ ಸಯುಕ್ತಿಕವಾಗಿ ವಿವರಿಸಿದ್ದಾರೆ. ಕೆಲವು ಶ್ಲೋಕಗಳನ್ನೇ ಮುಂದಿನ ಭಾಗದಲ್ಲಿ ಬರೆದು ಕನ್ನಡಿಸುತ್ತೇನೆ)
ओम्.  जरतीभिरोषदीभिः पर्णॆभिः शकुनानाम्
कार्मारॊ अश्मभिध्युर्भिर्हिरण्यवंतमिच्छति।
इन्द्रायेंदो परिस्रव ॥२॥

कारुरहं ततोभिषगुपलप्रक्षिणी नना
नानाधियो वसूययॊनुगा इव तस्थिमेंद्रायेंदो परिस्रव ॥३॥
अश्वोवोळ्हा सुखं रथं हसनामुपमंत्रिणः।
शेपो रोमण्वंतौ भेदौ वारिन्मंडूक इच्छतींद्रायेंदो परिस्रव ॥४॥
...
I am now taking these three Riks together. Sri Vadiraja teertharu in yuktimallika has based His arguments to prove the description of vaikuntha mainly on these three Riks. These three Riks are sufficient to prove the the main tenets of esential difference between the individual souls and also the souls and the Lord. These Riks describe the activity present in vaikuntha where there is only enjoyment of one's own bliss. As the souls have attained the state that has completely relaized their full innate potential, there cannot be any activity to achieve anything more. Each soul is full to its capacity. Therefore any description that conclusively proves presence of any activity has to be explained and understood as purely an expression of their essence.
.
ಸೋಮಸೂಕ್ತದ ಮುಂದಿನ ಮೂರು ಮಂತ್ರಗಳನ್ನು ಈಗ ಒಟ್ಟಿಗೇ ನೋಡೋಣ. ಶ್ರೀ ವಾದಿರಾಜರು
ಯುಕ್ತಿಮಲ್ಲಿಕಾದಲ್ಲಿ ಮೂರು ಮಂತ್ರಗಳನ್ನು ಉದ್ಧರಿಸುತ್ತ ಮುಕ್ತಸ್ಥಾನವಾದ ವೈಕುಂಠವು ರಮಣೀಯವಾಗಿದ್ದು ಅಲ್ಲಿ ಮುಕ್ತರು ನಾನಾ ತರದವರೂ ಇರುತ್ತಾರೆ. ಅವರ ಕಾರ್ಯಗಳೂ ವಿಧ ವಿಧವಾಗಿ ಇರುತ್ತವೆ. ಅವರ
ಚಟುವಟಿಕೆಗಳೂ ಕೂಡ ಚಿತ್ರವಿಚಿತ್ರವಾಗಿ ಇರುತ್ತವೆ. ಅಲ್ಲಿ ಸ್ವಸ್ವರೂಪಭೂತವಾದ, ಸ್ವಭಾವಯುತವಾದ ಅವರ ಚೇಷ್ಟೆಗಳೂ ಬೇರೆಬೇರೆಯಾಗಿ ಇರುತ್ತವೆ. ಮುಕ್ತರಲ್ಲೂ ಕೂಡ ಸ್ವರೂಪದಲ್ಲೇ ತೃಣ, ಲತೆ, ವೃಕ್ಷ, ಪಕ್ಷಿ , ಎರಡು ನಾಲ್ಕು ಕಾಲಿನ ಪಶುಗಳು, ಮನುಷ್ಯರಂತೆ ನಾನಾವಿಧ ದೇಹಗಳು ಪೂರ್ಣವಾಗಿ ಜ್ಞಾನಾನಂದಮಯವಾದವುಗಳಾಗಿ ಯಾವುದೇ ದೋಷಗಳಿಂದ ಕೂಡಿರದೇ ಆಯಾ ಸ್ಥಾವರ ಜಂಗಮಾದಿ ದೇಹಗಳ ಸಹಜವಾದ ಕ್ರಿಯೆಗಳನ್ನು ಕೇವಲ
ಆನಂದಾಭಿವ್ಯಕ್ತಿಯ ರೂಪದಲ್ಲಿ, ಶ್ರೀಹರಿಯ ಸೇವಾರೂಪದಲ್ಲಿ ಮಾಡುತ್ತಿರುತ್ತವೆ. ಪ್ರತಿಯೊಬ್ಬ ಮುಕ್ತ ಜೀವಿಯ ವ್ಯಕ್ತಿವಿಶೇಷ
ಗಳಾದ ಅವರವರ ವೃತ್ತಿರೂಪವಾದ ಸಹಜವಾದ ಕೆಲಸಗಳನ್ನು ಆನಂದೋದ್ರೇಕದಿಂದ ಶ್ರೀಹರಿಯ ಮತ್ತು ಇತರ ಮುಕ್ತ
ಜೀವರ ವಿಹಾರಕ್ಕೆ ಅನುಕೂಲಕರವಾಗಿ ಮಾಡುತ್ತಿರುತ್ತಾರೆ. ಇಲ್ಲಿ ಸಾಧನಾರೂಪವಾದ ಕರ್ಮಗಳಿಲ್ಲ. ಯಾಕೆಂದರೆ ಇಲ್ಲಿರುವವರು
ಎಲ್ಲವರೂ ಮುಕ್ತರು. ತಮ್ಮ ಸಾಧನೆಗಳನ್ನು ಪೂರ್ತಿಗೊಳಿಸಿ ತಮ್ಮ ತಮ್ಮ ಸ್ವರೂಪಕ್ಕೆ ತಕ್ಕಂತೆ ಪೂರ್ಣಜ್ಞಾನಾನಂದವನ್ನು
ಪಡೆದವರು. ಮುಕ್ತಿಯಲ್ಲಿ ತಮ್ಮ ಜ್ಞಾನಾನಂದಗಳನ್ನು ಅಭಿವ್ಯಕ್ತಗೊಳಿಸುವಾಗ ತಮ್ಮ ವ್ಯಕ್ತಿ ಸಹಜವಾದ ಕರ್ಮಗಳನ್ನು ಫಲರೂಪವಾಗಿ
ಮಾಡುತ್ತಿರುತ್ತಾರೆ. ಹೊರತು ಕರ್ಮಗಳಿಂದ ಇನ್ನೂ ಹೆಚ್ಚು ಫಲ ಪಡೆಯುವದಕ್ಕಲ್ಲ.
The meaning of the 2nd, third and fourth Riks is
ಮೊದಲು ಕೊಟ್ಟಿರುವ 2, 3 ಮತ್ತು ನಾಲ್ಕನೇ ಮಂತ್ರಗಳ ಸ್ಥೂಲವಾದ ಅರ್ಥ ,

2) Where (in vaikuntha), the mukta carpentors prepare the bow, arrows and charriots, the materials for these will be the ancient Oshadhis ( ancient is  because they are there since a very long time and will be there forever), (oshadhis are the sentient parts of the branches of trees, bamboos etc) and the sentient feathers of the birds, which will be adorned with shining gems...Oh Pavamana ! Please take me there. (To such an aprakritic place called vaikuntha)

2) ಯಾವ ಮುಕ್ತ ಸ್ಥಾನವಾದ ವೈಕುಂಠದಲ್ಲಿ ಮುಕ್ತ ಜೀವರಾದ ಬಡಗಿಗಳು ಅನ್ಯಮುಕ್ತಜೀವಿಗಳ ವಿಹಾರಕ್ಕಾಗಿ ಬಿಲ್ಲು, ಬಾಣ. ರಥ ಮತ್ತು ಇನ್ನೂ ಅನೇಕ ವಸ್ತುಗಳನ್ನು ಮಾಡುತ್ತಾರೋ ಆಗ ಅಲ್ಲೇ ಇರುವ, ಪುರಾತನಗಳಾದ (ಎಂದೋ ಹಿಂದೊಂದು ಕಲ್ಪದಲ್ಲಿ ಮುಕ್ತರಾಗಿ ಶಾಶ್ವತವಾಗಿ ವೈಕುಂಠದಲ್ಲೇ ಇರುವ) ಓಷಧಿಗಳಿಂದ ( ಅಂದರೆ ಮುಕ್ತ ಗಿಡ, ಮರ ಬಳ್ಳಿಗಳ ಚೇತನಾತ್ಮಕ ಭಾಗಗಳಿಂದ), ಹಕ್ಕಿಗಳ ಚೇತನಾತ್ಮಕ ರೆಕ್ಕೆಯ ಗರಿಗಳಿಂದ ತಯಾರಿಸಿ ಅವನ್ನು
ಮುತ್ತುರತ್ನಾದಿಗಳಿಂದ ಹೊಳೆಹೊಳೆವಂತೆ ಸುಂದರವಾಗಿ ಮಾಡುತ್ತಾರೆ.
ಹೇ ಪವಮಾನನೇ! ಅಂತಹ ವೈಕುಂಠವೆಂಬ ಅಪ್ರಾಕೃತಿಕ ನಿತ್ಯ ಮುಕ್ತ ಸ್ಥಾನಕ್ಕೆ ನನ್ನನ್ನು ಕರೆದೊಯ್ಯು.

3) (The carpenter says) I remain a carpenter class even after mukti. The mukta ashvini devatas and their kind remain as the healer class. The various play toys like the stone throwers etc are also present. All sentient souls in muktis have different thoughts, different activities. They remain different and retain their individual personality. All of them are always attached to Narayana and follow Him in thought, action and worship Him in various differing ways. Being limited in our capacity we cannot follow Him eveywhere in the mukta space and when He takes avataras. Still we are always in perfect communion with Him. (This part of the Rik clearly demonstrates the limitation of the souls even when they are muktas. And also demonstrates that though limited, these muktas alwyas derive their existence and bliss from the exclusive engagement in their activities and thoughts aligned to Sri Hari at every moment of the time.) Oh Pavamana ! Please take us to such a vaikuntha

) ( ಬಡಗಿ ಹೇಳುತ್ತಾನೆ) ಮುಕ್ತಿಯಲ್ಲೂ ಕೂಡ ನನ್ನ ಸಹಜವಾದ ಬಡಗಿಯ ಕೆಲಸವನ್ನೇ ಮಾಡುತ್ತಿರುತ್ತೇನ.
ಮುಕ್ತರಾದ ಅಶ್ವಿನೀ ದೇವತೆಗಳೂ ಅವರ ಪರಿವಾರದವರೂ ಕೂಡ ವೈದ್ಯರಾಗಿಯೇ ಇರುತ್ತಾರೆ.
(ಇಲ್ಲಿ ಬಡಗಿಯ ಜೊತೆ ವೈದ್ಯರನ್ನು ಯಾಕೆ ಹೇಳಿದ್ದಾರಪ್ಪ ಎಂದರೆ. ಬಿಲ್ಲು, ಬಾಣ, ರಥಾದಿ ಸಾಮಗ್ರಿಗಳನ್ನು
ಬಡಗಿಯು ಉಳಿದ ಜೀವರ ಚೇತನಾತ್ಮಕ ಭಾಗಗಳನ್ನೇ ಉಪಯೋಗಿಸಿ ಮಾಡಿರುವದರಿಂದ,.ಆಯಾ ವಿಹಾರಕಾರ್ಯಗಳು ಮುಗಿದ ನಂತರ ಭಾಗಗಳನ್ನು ಮತ್ತೆ ಪುನಃ ಆಯಾ ಜೀವರಿಗೆ ಜೋಡಿಸಬೇಕಾಗಿರುವದರಿಂದ ವೈದ್ಯರು ಆಯಾ
ಮಂತ್ರಗಳನ್ನು ಪ್ರಯೋಗಿಸಿ ಅದನ್ನು ಮಾಡಬೇಕು. ಇದರಿಂದ ತ್ವಷ್ಟ್ರ (ಬಡಗಿ) ಜೊತೆಯಾಗಿ ವೈದ್ಯರನ್ನು
ಹೇಳಿದೆ.)
ವೈಕುಂಠದಲ್ಲಿ ಮುಕ್ತರು ಕ್ರೀಡೆಗಾಗಿ ಉಪಯೋಗಿಸುವ ( ಕಲ್ಲೆಸೆಯುವ ಯಂತ್ರಗಳು ಇತ್ಯಾದಿ) ನಾನಾ ಸಾಧನಗಳು  ಉಂಟು. ಮುಕ್ತಿಯಲ್ಲಿ ಎಲ್ಲ ಮುಕ್ತ ಜೀವರು ಶ್ರೀಹರಿಯ ಅನುಚರರಂತೆಯೇ ಇದ್ದು ಸುಖಿಸುತ್ತೇವೆ. ( ಮಂತ್ರದಲ್ಲಿ ಇಲ್ಲೊಂದು ಅನುಗಾ ಇವ ಎಂಬ ಶಬ್ದ ಪ್ರಯೋಗವು ಇದ್ದು ಅದು ಮಹತ್ತ್ವದ ಪ್ರಮೇಯವೊಂದನ್ನು ಸಾಧಿಸಿ ಕೊಡುತ್ತದೆ. ಅರ್ಥಾತ್ ಶ್ರೀಹರಿಯು ಅನಂತ ಪ್ರದೇಶದಲ್ಲಿ ವ್ಯಾಪ್ತಿ ಉಳ್ಳವನಾದುದುರಿಂದ , ಮುಕ್ತರಾದರೂ ಜೀವರು ರೀತಿ ವ್ಯಾಪ್ತಿ ಇಲ್ಲದವರಾದುದರಿಂದ ಇವ ಎಂದು ಮಂತ್ರ ಹೇಳುತ್ತಿದೆ. ಅದರಂತೆ ಶ್ರೀಹರಿ ಅವತಾರ ಮಾಡಿದಾಗ ಮುಕ್ತ ಜೀವರಿಗೆ ಪುನಃ ಪ್ರಕೃತಿ ಸಂಬಂಧವುಳ್ಳ ಜಗತ್ತಿನಲ್ಲಿ ಪ್ರವೇಶ ಇಲ್ಲದುದರಿಂದ ಮುಕ್ತ ಜೀವರು (ಮುಕ್ತ ಬ್ರಹ್ಮನೂ ಕೂಡ) ಶ್ರೀಹರಿಯನ್ನು ಅನುಚರಿಸಿ ಪ್ರಾಕೃತಕ್ಕೆ ಹೋಗಲಾರ. ಇದಕ್ಕಾಗಿ , ಶ್ರೀಹರಿಯನ್ನು ಅನುಚರಿಸಿ ಅವನು ಎಲ್ಲೆಲ್ಲಿ ಇರುತ್ತಾನೋ ಅಲ್ಲಲ್ಲೆಲ್ಲ ಮುಕ್ತರು ಹೋಗಲಾರರು. ಆದರೆ ಶ್ರೀಹರಿಯ ವ್ಯಾಪ್ತಿ ಇಲ್ಲದ ಪ್ರದೇಶವಿಲ್ಲ. ಎಲ್ಲಿ ಮುಕ್ತರಿದ್ದಾರೆಯೋ ಅಲ್ಲಿ ಶ್ರೀಹರಿ ಇದ್ದು ಮುಕ್ತರ ಜೊತೆ ಯಾವಾಗಲೂ ಇದ್ದು ಸತತ ಆರಾಧಿಸಲ್ಪಡುತ್ತಾನೆ. ವೈಶಿಷ್ಟ್ಯವನ್ನು ಮಂತ್ರವು ಅನುಗಾ ಇವ ಅಂದರೆ ಅನುಚರರಂತೆ ಎಂದು ಹೇಳಿ ಜೀವರು ಎಂದೂ ಯಾವತ್ತಿಗೂ ಎಲ್ಲೆಲ್ಲೂ ಸಂಕುಚಿತ ಸ್ವಭಾವದವರು ಹೊರತು ಶ್ರೀಹರಿಯ ಸಮಾನರಲ್ಲ. ಇನ್ನು ಐಕ್ಯವಂತೂ ದೂರದ ಮಾತು.
ಇದರಿಂದ ನಾವೇನು ತಿಳಿಯುತ್ತೇವೆಂದರೆ. ವೇದಗಳ ಪ್ರತಿ ಶಬ್ದವೂ ಗಹನಾರ್ಥಕ ವಾದದ್ದು. ಅದನ್ನು ಬಿಟ್ಟಲ್ಲಿ ಅನಾಹುತಕರವಾದ ಅಪಾರ್ಥವೇ ಆಗುತ್ತದೆ)

अश्वोवोळ्हा सुखं रथं हसनामुपमंत्रिणः।
शेपो रोमण्वंतौ भेदौ वारिन्मंडूक इच्छतींद्रायेंदो परिस्रव॥४॥

4) A charriot has to be pulled by horses. In vaikuntha the mukta horses pull the chariots
out of pure bliss. ( the vihara of muktas is described in Veda as strIbhirvA yAnairvA. .and
in bhagavata as "lasatvimAnAvalibhirmahAtmanAM..") There is no stress and pain due to the hard work of pulling the chariot. The horses do the work effortlessly and out of pure bliss. The mantra says sukham for this work indicating that it is purely the result of AnandodrEka. 
The mukta Rams with  round and well developed testes which are full of bliss and their body full of thick hairs playfully fight with each other to 
entertain the mukta devatas. This fighting is not due to the anger and cruelty. In mukti there can be no such doshas. These sporty events from the mukta elements are out of expression of their bliss and bring on smiles and laughter in the   devatas like mukta Indras watching it.
Each class of muktas display actions characteristic of their respective class and carried out of pure bliss.
It is also a worship of Sri Hari and other muktas. Similarly even the frogs jump in to the waters of the pond in vaikuntha  when the chariots come near. This also out of pure bliss. Oh Pavamana! take me to such a vaikuntha.
.
ಮುಕ್ತರು ಆನಂದೋದ್ರೇಕದಿಂದ ನಾನಾ ಲೀಲೆಗಳುಳ್ಳವರು. ಉಪನಿಷತ್ತಿನಲ್ಲಿ ಮುಕ್ತರು ರಥಗಳನ್ನೇರಿಯೂ, ವಿಮಾನಗಳಲ್ಲಿಯೂ
ವಿಹಾರ ಮಾಡಿ ತಮ್ಮ ಆನಂದವನ್ನು ಪ್ರದರ್ಶಿಸುತ್ತಾರೆ ಎನ್ನುವದನ್ನು ಸ್ತ್ರೀಭಿರ್ವಾ ಯಾನೈರ್ವಾ ಎಂದೂ, ಭಾಗವತದಲ್ಲಿ 
ಲಸದ್ವಿಮಾನಾವಲಿಭಿರ್ಮಹಾತ್ಮನಾಂ ಎಂದೂ ಬಣ್ಣಿಸಲ್ಪಟ್ಟಿದೆ. ಅಂತಹ ರಥಗಳನ್ನು ಕುದುರೆಗಳು ಯಾವುದೇ ತರದ ಶ್ರಮವಿಲ್ಲದೇ
ತಮ್ಮ ಜಾತಿಗೆ ಯೋಗ್ಯವಾದ ರಥಗಳನ್ನೆಳೆಯುವ ಕರ್ಮವನ್ನು ಕೇವಲ ಸುಖೋದ್ರೇಕದಿಂದಲೇ ಮಾಡುತ್ತವೆ. ಇದನ್ನು ಸುಖಂ 
ಎಂದೇ ಈ ಮಂತ್ರದಲ್ಲಿ ಹೇಳಲ್ಪಟ್ಟಿದೆ. ದಷ್ಟ ಪುಷ್ಟವಾದ , ಮಹದಾನಂದಪೂರ್ಣವಾದ ವೄಷಣಗಳುಳ್ಳ ಮುಕ್ತರಾದ ಟಗರುಗಳು ಕೂಡ ತಮ್ಮೊಳಗೆ ಜಗಳವಾಡುತ್ತವೆಯೋ ಎಂಬಂತೆ ಒಬ್ಬರಿಗೊಬ್ಬರು ತಮ್ಮ ತಮ್ಮ  ತಲೆಗಳಿಂದ  ಬಡಿಯುತ್ತ ಕಾದಾಡುತ್ತ
 ಮುಕ್ತ ಇಂದ್ರಾದಿ ದೇವತೆಗಳ ಮನೋರಂಜನೆ ಉಂಟುಮಾಡುತ್ತವೆ. ಇಲ್ಲಿಯ ಈ ಕಾದಾಟವು ಕೋಪದಿಂದಾಗಲೀ ದ್ವೇಷದಿಂದಾಗಲೀ ಅಲ್ಲ. ಏಕೆಂದರೆ ಯಾವುದೇ ಮುಕ್ತಜೀವರಲ್ಲಿ ಲೇಶವಾದರೂ ಕ್ರೋಧ, ದ್ವೇಷಾದಿ ದೋಷಗಳೇ ಇಲ್ಲ. ಹಾಗಾಗಿ ಈ ಕಾದಾಟ ಶ್ರೀಹರಿ ಪ್ರೀತಿಗಾಗಿ ಮತ್ತು ಅವನ ಬಳಗದವರಾದ ದೇವತೆಗಳ ರಂಜನೆಗಾಗಿ ತಮ್ಮ ಜಾತಿಸ್ವಭಾವಕ್ಕೆ ಸಹಜವಾದ ಲೀಲೆಗಳನ್ನು ಆನಂದೋದ್ರೇಕದಿಂದಲೇ ಈ ಟಗರುಗಳು ಮಾಡುತ್ತವೆ. ಅಂತೇಯೇ ರಥಗಳು ಹತ್ತಿರ ಬರುತ್ತಿರುವಂತೆ ಮುಕ್ತ ಕಪ್ಪೆಗಳು ಕೂಡ ಕೇವಲ ಲೀಲೆಗಾಗಿ ಆನಂದೋದ್ರೇಕದಿಂದ ವೈಕುಂಠದಲ್ಲಿದ್ದ ಕೊಳಗಳಲ್ಲಿ ಸ್ವಭಾವ ಸಹಜವಾಗಿಯೇ ಜಿಗಿಯುತ್ತವೆ.
ಹೇ ಪವಮಾನನೇ ! ಇಂತಹ ವೈಕುಂಠದೆಡೆ ನನ್ನನ್ನು ಕರೆದೊಯ್ಯು.
***
When we first see the examples given above, they seem to be colourless and crude to describe such a weighty and serious place attained after eons of hard struggle by a soul. But the Veda has accomplished its task of modifying our perception and understanding.  In mundane world all the activities described above need some hard tiring work. The labouer would suffer with the pain of the tedious work of construction. The material that he uses is also rough and insentient
like the dead wood and the tools may harm in untrained hands. Moreover the sports  like the fights between animals arranged during the festivities are certainly painful for them and those animals would have  to be incited with strong bad temper. The mukta devatas and the parivara would have to 
be at least rajasic to enjoy such painful sports. In the case of frogs jumping into the water when chariots are near would do so only with fright.
Do we understand that such a mundane situation exists in the place called Vaikuntha where not even a shadow of suffering, fault and twisted undesirable mental attitudes exist? Precisely to rule out these doubts, the veda describes the state of being in Vaikuntha through the above common crude examples.
The example of a carpentor making bows, arrows and chariots describes the presence of jeevas of various inner
tendencies. The material and the tools he needs are  ready when he wishes The horses blissfully pulling the chariot proves that no activity is tiresome for muktas. The presence of Rams who fight playfully proves that even the fight
between the two which is necessarily an outcome of hate is not so in mukti. Simply becase the evil tendencies like anger and hate are not present in mukti. The frogs jumping into the water as the chariots approach illustrates the absence of fear.
That is a remarkable task of teaching accomplished by these mantras. In next few Riks the worship of Lord by
devatas is described which is out of pure bliss. That section is not difficult to understand. 
--
ಮೇಲ್ನೋಟಕ್ಕೆ ವೈಕುಂಠವನ್ನು ವರ್ಣಿಸಲು ಉಪಯೋಗಿಸಿದ ಉದಾಹರಣೆಗಳು ತುಂಬ ನೀರಸವಾಗಿ ತೋರುತ್ತವೆಯಲ್ಲವೇ? ಕಲ್ಪಕಲ್ಪಗಳಲ್ಲಿ
ಯುಗಯುಗಗಳಲ್ಲಿ  ಅಸಂಖ್ಯಾತ ಜನ್ಮಗಳನ್ನು ತಳೆದು ಮಾಡಿದ ಸಾಧನೆಗಳ ನಂತರ ಪಡೆದ ಮುಕ್ತಸ್ಥಾನವೆಂದೆನಿಸಿದ ವೈಕುಂಠವನ್ನು ಪರಿಚಯಿಸಲು ವೇದವು ಘನತರ ಉದಾಹರಣೆಗಳನ್ನು ಹೇಳಬಹುದಿತ್ತು ಎನ್ನಿಸುವದು. ವೈಕುಂಠದೆಡೆ ಒಯ್ಯಪ್ಪ ಎಂದು ಜೀವೋತ್ತಮನಾದ
ಪವಮಾನನಲ್ಲಿ ಮಾಡುವ ಪ್ರಾರ್ಥನೆಯಿದು. ಸೂಕ್ಷ್ಮವಾಗಿ ನೋಡಿ ಕಿಂಚಿದಾಳವಾಗಿ ವಿಚಾರಮಾಡಿದಾಗ ಈ ವೇದಮಂತ್ರಗಳು ವೈಕುಂಠವನ್ನು
ಅತ್ಯಂತ ಸುಂದರವಾಗಿ ವರ್ಣಿಸಿವೆ ಎನ್ನುವದು ಹೊಳೆಯುತ್ತದೆ. ಈ ಜಗತ್ತಿನಲ್ಲಿ ನಾವು ನಾವು ನೋಡುವದೇನು? ಪ್ರತಿಯೊಬ್ಬ ಜೀವಿಯೂ ತನ್ನ ದಿನಚರಿಯಲ್ಲಿ ಗೈಯ್ಯುವ ಚಟುವಟಿಕೆಗಳಿಂದ ಕ್ಲೇಶಪಡುವದೇ ಹೊರತು ಸುಖವೆಂಬುದು ಕ್ಷಣಾರ್ಧದಲ್ಲಿ ಮಿಂಚಿ ಮರೆಯಾಗುವದು.
ತನ್ನಲ್ಲಿ ಹುದುಗಿ ಅಡಗಿರುವ ಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸಲೂ ಬಾರದೇ ಚಡಪಡಿಸುತ್ತಿರುತ್ತಾನೆ. ತನ್ನ ಕೆಲಸಗಳಿಗೆ ಬೇಕಾಗುವ ಸಾಧನಸಂಪತ್ತನ್ನು ಕೂಡ ಕಷ್ಟಪಟ್ಟು ಒಟ್ಟುಗೂಡಿಸಿಕೊಂಡರೂ ಬಹಳೇ ಸಲ ಅದನ್ನು ಉಪಯೋಗಿಸಕೊಳ್ಳಲಾರ. 
ಜೀವನವಿಡೀ ತನ್ನಲ್ಲಿದ್ದ ಕಾಮ, ಕ್ರೋಧ, ದ್ವೇಷಾದಿಗಳಿಗೆ ಬಲಿಯಾಗಿ ಉಳಿದ. ಅದೇ ರೀತಿ ಬಳಲುತ್ತಿರುವವರ ಜನರಿಗೂ ಬಲಿಯಾದ.
ಇಂತಹ ಅನೇಕಾನೇಕ ಕ್ಲೇಶಗಳು ಮುಕ್ತಪ್ರದೇಶದಲ್ಲಿಲ್ಲ ಎನ್ನುವದನ್ನು ಈ ನಾಲ್ಕು ಮಂತ್ರಗಳು ತಿಳಿಸಿಕೊಡುತ್ತಿವೆ. ಮುಕ್ತಿಯ ಲಕ್ಷಣಗಳಲ್ಲಿ ಒಂದೆಂದರೆ ಯಾವುದೇ ತರದ ಕ್ಲೇಶಗಳಿಲ್ಲದಿರುವದು. ಒಬ್ಬ ಬಡಗಿಗೆ ತನ್ನ ಸಹಜ ಕರ್ಮಗಳಿಗೆ ಬೇಕಾದ ವಸ್ತುಗಳು ಅವನು ಆ ರೀತಿ ಸಂಕಲ್ಪ ಮಾಡಿದ ತಕ್ಷಣ ಒದಗಿ ಬರುತ್ತವೆ. ಇಲ್ಲಿ ಬಡಗಿ ಎನ್ನುವದು ಕೇವಲ ಒಂದು ಉದಾಹರಣೆ. ಮುಕ್ತಜೀವರಲ್ಲಿ
ನಾನಾ ವಿಧ ಜೀವರು ಇರುತ್ತಾರೆ ಎನ್ನುವದನ್ನು ಇದು ಸಾಧಿಸುತ್ತದೆ. ಅಷ್ಟೇ ಅಲ್ಲ ಆ ರೀತಿ ನಾನಾ ವಿಧದ ಜೀವರುಗಳ ಸ್ವಭಾವವೂ
ವ್ಯಕ್ತವಾಗುವಾಗ ಅದಕ್ಕೆ ಯಾವುದೇ ಅಡೆತಡೆಗಳು ಇರುವದಿಲ್ಲ. ಈ ರೀತಿ ಸ್ವಭಾವಸಿದ್ಧವಾದ ಕರ್ಮಗಳು ವ್ಯಕ್ತವಾಗುವದು ಕೂಡ
ಅವರಲ್ಲೇ ಹುದುಗಿದ ಆನಂದೋದ್ರೇಕದಿಂದ. ಪ್ರತಿಯೊಬ್ಬ ಮುಕ್ತ ಜೀವರ ವಿಧ ವಿಧ ಸ್ವಭಾವಗಳು ವ್ಯಕ್ತವಾಗುತ್ತಿರುವಾಗ ಅವುಗಳೆಲ್ಲ ಶ್ರೀಹರಿಯ ಆರಾಧನೆಗಾಗಿಯೇ ಆಗುತ್ತಿರುತ್ತವೆ. ಅವೂ ಕೂಡ ತಮಗಿಂತ ಕೆಳಗಿನವರಿಗಾಗಲೀ ಮೇಲಿನವರಿಗಾಗಲೀ ಮುಕ್ತ ಜೀವರ ವಿಹಾರಕ್ಕೆ ಅನುಕೂಲವಾಗಿಯೇ ಇರುತ್ತವೆ. ಇಂಥಹ ಪ್ರಮೇಯಗಳನ್ನು ಬಡಗಿಯು ಬಿಲ್ಲು,ಬಾಣ, ರಥಾದಿಗಳನ್ನು ರಚಿಸುವ, ರಥಕ್ಕೆ
ಹೂಡಿದ ಕುದುರೆಗಳು ಶ್ರಮವಿಲ್ಲದೇ ಆನಂದದಿಂದಲೇ ರಥವನ್ನು ಎಳೆಯುವ, ಟಗರಿನ ನಡುವಿನ ಕ್ರೀಡಾತ್ಮಕ ಯುದ್ಧದ ಮತ್ತು ಸ್ವಸ್ವಭಾವದಿಂದಲೇ ಕೊಳಕ್ಕೆ ಜಿಗಿಯುವ ಕಪ್ಪೆಯ ಉದಾಹರಣೆಗಳನ್ನು ಕೊಟ್ಟು ವೇದವು ತಿಳಿಸುತ್ತಿದೆ. ಇಂತಹ ಸಾಧಾರಣವಾದ
ಘಟನೆಗಳೂ ಕೂಡ ಹೇಗೆ ಮುಕ್ತರ ಸ್ವಭಾವವನ್ನು ತಿಳಿಸುತ್ತವೆ ಎನ್ನುವದನ್ನು ಸೂಕ್ಷ್ಮವಾಗಿ ವಿಚಾರಿಸಿ ಅರ್ಥಮಾಡಿಕೊಳ್ಳಬೇಕು.
ಇನ್ನು ಮುಂದಿನ ಮಂತ್ರಗಳು ಮುಕ್ತಿಯಲ್ಲಿ ದೇವತೆಗಳು ಶ್ರೀಹರಿಯನ್ನು ಆರಾಧಿಸುತ್ತ ತಮ್ಮ ಆನಂದವನ್ನು ವ್ಯಕ್ತಪಡಿಸುವದನ್ನು
ಹೇಳುತ್ತವೆ ಆದುದರಿಂದ ಅವುಗಳನ್ನು ತಿಳಿಯುವದು ಕಷ್ಟಕರವಲ್ಲ.
   .
To be continued 

श्रीमद् वादिराज: प्रीतोस्तु।।
श्री मध्वेशार्पणमस्तु ।।
...."विष्णुदास" वेंकटदास शानभाग
कलबागकार, कुमटा.

No comments:

Post a Comment

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...