Total Pageviews

Monday, February 18, 2019

Vaikuntha Varnane - वैकुठं वर्णन - Excerpts from Srimad Bhagavatha


(This is a series on the description of Vaikuntha, the abode of Lord Vishnu as per Srimad Bhagavatha Purana. This is a brief commentary by Shri Girish Prabhu K )


Bhagavata Sangrahaamrita

श्री रूपिणी क्वणयती चरणारविन्दं
लीलाम्बुजेन हरि-सद्मनि मुक्त-दोषा
संलक्ष्यते स्फटिक-कुड्य उपेत-हेम्नि
सम्मार्जतीव यद्-अनुग्रहणेsन्य-यत्नः

ಶ್ರೀ ರೂಪಿಣೀ ಕ್ವಣಯತೀ ಚರಣಾರವಿಂದಂ
ಲೀಲಾಂಬುಜೇನ ಹರಿ-ಸದ್ಮನಿ ಮುಕ್ತ-ದೋಷಾ
ಸಂಲಕ್ಷ್ಯತೇ ಸ್ಫಟಿಕ-ಕುಡ್ಯ ಉಪೇತ-ಹೇಮ್ನಿ
ಸಮ್ಮಾರ್ಜತೀವ ಯದ್-ಅನುಗ್ರಹಣೇ ’ನ್ಯ-ಯತ್ನಃ || 
(Bhagavata 3.16.20)
Brahma and other gods are ever busy trying to get the blessings of Goddess Lakshmi. But such Lakshmi takes on a form and walks about with Her tinkling anklets inside Vaikuntha. The lotus that she holds in Her hand gets reflected in the marble walls bedecked at intervals with golden borders. It appears as though She is the maid of Vaikuntha sweeping the marble walls with the lotus.
This is an amazing description by Vedavyasa. In Vaikuntha there is no dirt. When there is no dirt/dust, how can someone sweep it? Still, Lakshmi is the foremost among the servants of Lord Hari. The lotus that She holds in Her hands and rotates playfully, appears like She is sweeping the floors indicating that She indeed is a servant of Lord Hari and depicts the excessive greatness of Lord. 

ಯಾವ ಲಕ್ಷ್ಮೀದೇವಿಯ ಅನುಗ್ರಹಕ್ಕಾಗಿ ಬ್ರಹ್ಮಾದಿ ದೇವತೆಗಳು ಅನುದಿನ ಪ್ರಯತ್ನಿಸುತ್ತಿದ್ದಾರೆಯೋಅಂತಹ ಪರದೇವತೆಯುಪ್ರತ್ಯಕ್ಷರೂಪದಿಂದ ಗೆಜ್ಜೆಗಳ ದನಿಗೈಯುತ್ತಾ ವೈಕುಂಠದಲ್ಲಿ ನೆಲೆಸಿದ್ದಾಳೆಅವಳು ಕ್ರೀಡೆಗಾಗಿ ಕೈಯಲ್ಲಿ ಧರಿಸಿದ ಕಮಲ ಪುಷ್ಪವು ಚಿನ್ನದ ಪಟ್ಟಿಗಳಿಂದ ಅಲಂಕೃತವಾದ ಸ್ಫಟಿಕದ ಗೋಡೆಗಳಲ್ಲಿ ಪ್ರತಿಬಿಂಬಿಸಿದಾಗ ಹರಿಮಂದಿರವನ್ನು ಸೇವಕಿಯಂತೆ ಕಮಲದ ಪೊರಕೆಯಲ್ಲಿ ಗುಡಿಸುತ್ತಾಳೊ ಎನ್ನುವಂತೆ ಕಾಣಿಸುತ್ತಿದೆ.
ಇದೊಂದು ವ್ಯಾಸರ ಅದ್ಭುತ ವರ್ಣನೆವೈಕುಂಠದಲ್ಲಿ ಕಸವೇ ಇಲ್ಲಇನ್ನು ಗುಡಿಸುವುದು ಹೇಗೆಆದರೂ ಹರಿಮಂದಿರದಲ್ಲಿ ಸೇವಕರಲ್ಲಿ ಅಗ್ರಗಣ್ಯಳಾದ ಲಕುಮಿಯ ಕೈಯಲ್ಲಿ ಕ್ರೀಡೆಗಾಗಿ ಧರಿಸಿ ತಿರುಗಿಸುವ ಕಮಲ ಪುಷ್ಪವೇ ಪೊರಕೆಯಂತೆ ತೋರಿಕೊಂಡುತಾನು ಸೇವಕಿ ಎಂಬ ಭಾವವನ್ನು ಸೂಚಿಸುತ್ತಿರುವಂತಿದೆ ಎಂದು ಪರಮಾತ್ಮನ ಮಹಿಮಾತಿಶಯವನ್ನು ವ್ಯಾಸರು ಬಣ್ಣಿಸಿದ್ದಾರೆ.

यत् सङ्कुलं हरि-पदानति-मात्र-दृष्टैर्
वैडूर्य-मारकत-हेम-मयैर् विमानैः
येषां बृहत्-कटि-तटाः स्मित-शोभि-मुख्यः
कृष्णात्मनां  रज आदधुर् उत्स्मयाद्यैः

ಯತ್ ಸಂಕುಲಂ ಹರಿ-ಪದಾನತಿ-ಮಾತ್ರ-ದೃಷ್ಟೈರ್
ವೈಡೂರ್ಯ-ಮಾರಕತ-ಹೇಮ-ಮಯೈರ್ ವಿಮಾನೈಃ
ಯೇಷಾಂ ಬೃಹತ್-ಕಟಿ-ತಟಾಃ ಸ್ಮಿತ-ಶೋಭಿ-ಮುಖ್ಯಃ
ಕೃಷ್ಣಾತ್ಮನಾಂ  ರಜ ಆದಧುರ್ ಉತ್ಸ್ಮಯಾದ್ಯೈಃ 
(Bhagavata 3.16.20/3.15.20)

ವೈಕುಂಠ ಲೋಕದಲ್ಲಿ ಇಂದ್ರನೀಲಮಣಿಬಂಗಾರದಿಂದ ರಚಿತವಾದ ಪದ್ಮರಾಗ ಸಹಿತವಾದ ವಿಮಾನಗಳ ಸಂಕುಲವೆ ತುಂಬಿಹೋಗಿದೆ ವಿಮಾನಗಳಲ್ಲಿ ಸುಂದರವಾದ ನಿತಂಬ ಪ್ರದೇಶವುಳ್ಳ ಮಂದಹಾಸದಿಂದ ಶೋಭಾಯಮಾನವಾದ ಮುಖದ ಅನೇಕ ಸ್ತ್ರೀಯರು ತಮ್ಮ ಶೃಂಗಾರ ಚೇಷ್ಟೆಗಳನ್ನು ತೋರಿಸುತ್ತಾರೆ ಕಡುಮುದ್ದಾದ ಸ್ತ್ರೀಯರಿಂದ ಸಿಗುವ ತೃಪ್ತಿಗಿಂತ ಅತಿಶಯವಾದ ಸುಖವು ಪರಮಾತ್ಮನ ಪಾದಗಳಿಗೆ ಭಕ್ತಿಯಿಂದ ನಮಿಸುವುದರಿಂದಲೆ ಸಿಗುತ್ತದೆ.

Vaikunths is filled with airplanes made of emerald, gold and cat’s eye gems. The dwellers of Vaikuntha travel in these planes that are crowded by their consorts having large hips and beautiful smiling faces. But the happiness, these inhabitants get, by just bowing down at Lord’s feet is much more than the pleasure obtained by the mirth and beautiful charms of these ladies.

तं त्वागतं प्रतिहृतौपयिकं स्व-पुम्भिः
तेऽचक्षताक्ष-विषयं स्व-समाधि-भाग्यम् 
हंस-श्रियोर् व्यजनयोः शिव-वायु-लोलत्-
शुभ्रातपत्र-शशि-केसर-शीकराम्बुम् 

ತಂ ತ್ವಾಗತಂ ಪ್ರತಿಹೃತೌಪಯಿಕಂ ಸ್ವ-ಪುಂಭಿಃ
ತೇಽಚಕ್ಷತಾಕ್ಷ-ವಿಷಯಂ ಸ್ವ-ಸಮಾಧಿ-ಭಾಗ್ಯಮ್ 
ಹಂಸ-ಶ್ರಿಯೋರ್ ವ್ಯಜನಯೋಃ ಶಿವ-ವಾಯು-ಲೋಲತ್-
ಶುಭ್ರಾತಪತ್ರ-ಶಶಿ-ಕೇಸರ-ಶೀಕರಾಂಬುಮ್ 
 (Bhagavata 3.15.38)

 ಪರಮಾತ್ಮನು ವೈಕುಂಠದ ಒಳಗಿನಿಂದ ಬಂದುದ್ದನ್ನು ಸನಕಾದಿಗಳು ಕಂಡದ್ದು:
ತಮ್ಮ ಸಮಾಧಿಯಲ್ಲಿ ಕಾಣುವ  ರೂಪವನ್ನು ಈಗ ಕಣ್ಣಮುಂದೆಯೇ ಕಂಡರು ನಾರಾಯಣನಿಗೆ ಅವನ ಪರಿವಾರದವರು ಛತ್ರ-ಚಾಮರ ಹಿಡಿದು ನಿಂತಿದ್ದಾರೆಇಬ್ಬದಿಗಳಲ್ಲಿ ಬೀಸುವ ಬೀಸಣಿಕೆಗಳು ರಾಜಹಂಸಗಳ ರೆಕ್ಕೆಗಳಂತೆ ಕಾಣುತ್ತಿವೆಶ್ವೇತಛತ್ರಕ್ಕೆ ಮುತ್ತುಗಳ ಮಾಲೆ ಪೋಣಿಸಿದೆ ಚಾಮರದ ತಂಪಾದ ಗಾಳಿಗೆ ಮುತ್ತುಗಳ ಮಾಲೆ ಅತ್ತಿತ್ತ ಸುಳಿದಾಡುತ್ತಿದೆ ಶ್ವೇತಛತ್ರವು ಚಂದ್ರನಂತೆಯೂ ಮುತ್ತುಗಳು ಚಂದ್ರನ ಬಳಿ ತೊಟ್ಟಿಕ್ಕುವ ಅಮೃತದ ಬಿಂದುಗಳಂತೆಯೂ ಕಾಣುತ್ತಿತ್ತು.

Sanaka and other sages saw Viṣṇu coming out of Vaikuntha thus:
The same form that visible to them in their samadhis, had now actually become visible to their eyes.
Lord Vishnu was accompanied by His own associates bearing all paraphernalia, such as an Shwetha chatra (White umbrella) and a chamara fan; the umbrella had garlands of pearls on it; the fanning of the chamara appeared like feathers of swans flying on both sides; and due to their favourable breeze the pearls garlanding the Shwetha chatra also moved. The Shwetha chatra appeared like moon and the pearls appeared like drops of nectar falling from the white full moon.

श्यामावदाताः शत-पत्र-लोचनाः
पिशङ्ग-वस्त्राः सुरुचः सुपेशसः |
सर्वे चतुर्-बाहव उन्मिषन्-मणि-
प्रवेक-निष्काभरणाः सुवर्चसः ||

ಶ್ಯಾಮಾವದಾತಾಃ ಶತ-ಪತ್ರ-ಲೋಚನಾಃ
ಪಿಶಂಗ-ವಸ್ತ್ರಾಃ ಸುರುಚಃ ಸುಪೇಶಸಃ |
ಸರ್ವೇ ಚತುರ್-ಬಾಹವ ಉನ್ಮಿಷನ್-ಮಣಿ-
ಪ್ರವೇಕ-ನಿಷ್ಕಾಭರಣಾಃ ಸುವರ್ಚಸಃ ||
(Bhagavata 2.9.11)

ವೈಕುಂಠವಾಸಿಗಳೆಲ್ಲರು ನೀಲವರ್ಣದ ಶುಭ್ರ ದೇಹದವರು. ಕಮಲದ ಕಣ್ಣಿನವರು, ಪೀತಾಂಬರವನ್ನು ತೊಟ್ಟು ಹೊಳೆಯುವ ಕಾಂತಿಯಿಂದ ಶೋಭಿಸುವವರು. ಅತಿ ಸುಂದರರಾದ ಹರೆಯದ ಪ್ರಾಯದ ಇವರಿಗೆ ನಾಲ್ಕು ತೋಳುಗಳು. ಇವರು ಫಳಫಳನೆ ಹೊಳೆವ ರತ್ನಖಚಿತ ಚಿನ್ನದಾಭರಣಗಳನ್ನು ಧರಿಸಿ, ಉತ್ತಮ ತೇಜಸ್ವಿಗಳಾಗಿ ಮೆರೆಯುತ್ತಾರೆ

The indwellers of Vaikuṇṭha have a glowing sky-bluish complexion. Their eyes are like lotus flowers; they wear peetambara (yellowish colored silk robe), are very attractive and youthly; they all have four hands, they are all nicely decorated with golden ornaments decked with pearls and they all are effulgent.

प्रवाळ-वैढूर्य-मृणाळ-वर्चसः
परिस्फुरत्-कुण्डल-मौलि-मालिनः ||
भ्राजिष्णुभिर् यः परितो विराजते
लसद्-विमानावलिभिर् महात्मनाम् |
विद्योतमानाः प्रमदोत्तमाद्युभिः
सविद्युद्-अभ्रावळिभिर् यथा नभः||

ಪ್ರವಾಳ-ವೈಢೂರ್ಯ-ಮೃಣಾಳ-ವರ್ಚಸಃ
ಪರಿಸ್ಫುರತ್-ಕುಂಡಲ-ಮೌಲಿ-ಮಾಲಿನಃ ||
ಭ್ರಾಜಿಷ್ಣುಭಿರ್ ಯಃ ಪರಿತೋ ವಿರಾಜತೇ
ಲಸದ್-ವಿಮಾನಾವಲಿಭಿರ್ ಮಹಾತ್ಮನಾಮ್ |
ವಿದ್ಯೋತಮಾನಾಃ ಪ್ರಮದೋತ್ತಮಾದ್ಯುಭಿಃ
ಸವಿದ್ಯುದ್-ಅಭ್ರಾವಳಿಭಿರ್ ಯಥಾ ನಭಃ||
(Bhagavata 2.9.11)

ವೈಕುಂಠದಲ್ಲಿ ಕೆಲವರು ಹೊಳೆವ ಹವಳದ ಮೈಕಾಂತಿಯವರು. ಕೆಲವರು ವೈಡೂರ್ಯದ ಕಾಂತಿಯವರು; ಮತ್ತೆ ಕೆಲವರು ಕಮಲದ ಮಧ್ಯದ ಸೂಕ್ಷ್ಮ ನಾಳದ ಕಾಂತಿಯಿಂದ ಹೊಳೆಯುತ್ತಾರೆ. ಉಜ್ವಲವಾದ ಕರ್ಣ-ಕುಂಡಲಗಳು, ಕಿರೀಟ ಮಾಲೆಗಳನ್ನು ಧರಿಸುತ್ತಾರೆ. ಜಾಜ್ವಲ್ಯಮಾನವಾದ ವಿಮಾನಗಳನ್ನು ಏರಿ ಸಂಚರಿಸುತ್ತಾರೆ. ವಿಮಾನಗಳಲ್ಲಿ ಸುಂದರ ಸ್ತೀಯರು ಮೋಡದಲ್ಲಿ ಮೂಡುವ ಮಿಂಚಿನಂತೆ ಕಂಗೊಳಿಸುತ್ತಾರೆ.
Some, in Vaikuntha, have effulgent complexion like that of coral, some others like cat’s eye gems; while some have the complexion of the stigma of a lotus (the centre part of the flower); they wear crowns on their heads, garlands and shining ear-rings.
These great devotees of Vishnu, roam around in brilliantly glowing airplanes. The beautiful ladies with celestial complexions, appear like lightning ripping through the clouds!

श्रीर् यत्र रूपिण्युरुगायपादयोः
करोति मानं बहुधा विभूतिभिः
प्रेङ्खं श्रिता या कुसुमाकरानुगैर्
विगीयमाना प्रियकर्म गायती ||

ಶ್ರೀರ್ ಯತ್ರ ರೂಪಿಣ್ಯುರುಗಾಯಪಾದಯೋಃ
ಕರೋತಿ ಮಾನಂ ಬಹುಧಾ ವಿಭೂತಿಭಿಃ
ಪ್ರೇಙ್ಖಂ ಶ್ರಿತಾ ಯಾ ಕುಸುಮಾಕರಾನುಗೈರ್
ವಿಗೀಯಮಾನಾ ಪ್ರಿಯಕರ್ಮ ಗಾಯತೀ ||
(Bhagavata 2.9.14)

ವೈಕುಂಠದಲ್ಲಿ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯು ಹಾಸಿಗೆಯಲ್ಲಿ ಕುಳಿತು ತನ್ನ ಅನೇಕ ರೂಪಗಳಿಂದ ನಾರಾಯಣನನ್ನು, ಅವನ ಲೀಲೆಗಳನ್ನು ಹಾಡಿ ಹೊಗಳುತ್ತಾಳೆ, ಅವನ ಪಾದವನ್ನು ಸೇವಿಸುತ್ತಾಳೆ. ಅವನ ಗುಣಗಾನದಲ್ಲೇ ರತಳಾಗಿರುತಾಳೆ. ಲಕ್ಷ್ಮಿಯು ಮಾಡುವ ಗುಣಗಾನದ ಮಹಿಮೆಯನ್ನು ವಸಂತ ಕಾಲದ ದುಂಬಿಗಳು, ಕೋಗಿಲೆಗಳು ಅನುಕರಿಸಿ ಹಾಡುತ್ತವೆ, ಪ್ರಶಂಸಿಸುತ್ತವೆ.

In Vaikuntha, Goddess Mahalakshmi takes multiple forms and sings glories of Lord and His activities sitting on the bed; she serves the Lord’s feet and is ever engaged in serving the Lord.  The songs of Lord’s glory sung by Lakshmi are praised and mimicked by honey bees, and nightingales of spring season.

What is in Vaikuntha? - Summary

From all these verses, we understand:
- Vaikuntha is not a dry, boring place
- In Vaikuntha, we see Lord’s palace as a shining bright place with emerald walls having golden borders etc
- Along with Lord, stays Lakshmi, muktas along with their spouses
- Lord Himself appears to the indwellers with all His paraphernalia in an effulgent form.
- Goddess Lakshmi serves the Lord by singing, fanning, and performing other activities to please Him.
- The muktas, the indwellers of Vaikuntha are innumerable and they roam around in marvelous airplanes along with their beautiful spouses.
- The indwelling muktas of Vaikuntha are attractive, youthly, having four hands, are fully decorated and are effulgent themselves
- Additionally, the muktas remain in vaikuntha singing songs, praising Lord’s glories, meditating on Him, listening to His stories and enjoying there; their happiness does not have an iota of sorrow.

ಇವೇ ಮುಂತಾದ ಭಾಗವತದ ಶ್ಲೋಕಗಳಿಂದ ತಿಳಿಯುವುದೇನೆಂದರೆ:
- ವೈಕುಂಠವು ಕೇವಲ ಒಣ, ಸಂತೋಷವಿಲ್ಲದ ನೀರಸ ಪ್ರದೇಶವಲ್ಲ
- ವೈಕುಂಠದಲ್ಲಿ ಪರಮಾತ್ಮನ ಅರಮನೆ ಚಿನ್ನದ ಪಟ್ಟಿಗಳ ಸ್ಫಟಿಕದ ಗೋಡೆಗಳ ಬೆಳಗುವ ಮನೆ
- ಪರಮಾತ್ಮನೊಂದಿಗೆ ಅಲ್ಲಿ ಲಕ್ಷ್ಮೀದೇವಿ, ಮುಕ್ತರು ತಮ್ಮ ಸಂಗಾತಿಗಳೊಂದಿಗೆ ಇರುವರು
- ಸ್ವಯಂ ವಿಷ್ಣುವೇ ಮುಕ್ತರಿಗೆ ತನ್ನ ಅದ್ಭುತ ಬೆಳಗುವ ರೂಪದಿಂದ ಛತ್ರ-ಚಾಮರ ಮೊದಲಾದ ಪರಿಕರಗಳೊಂದಿಗೆ ತೋರಿಕೊಳ್ಳುತ್ತಾನೆ
- ಲಕ್ಷ್ಮಿಯು ಹಾಡುತ್ತಾ, ಚಾಮರ ಬೀಸುತ್ತಾ ನಾರಾಯಣನ ಸೇವೆಗೈಯುತ್ತಾಳೆ
- ಅಸಂಖ್ಯ ಮುಕ್ತರೂ ಸಹ ತಮ್ಮ ಸುಂದರ ಸಂಗಾತಿಗಳೊಂದಿಗೆ ವಿಮಾನಗಳಲ್ಲಿ ಓಡಾದುತ್ತಾರೆ
- ಅಲ್ಲದೆ, ಮುಕ್ತರು ಸದಾಕಾಲ ಹರಿಯ ಧ್ಯಾನದಲ್ಲೇ ಇರುತ್ತಾ, ಹಾಡುತ್ತಾ, ಹರಿಯ ಗುಣಗಾನ ಮಾಡುತ್ತಾ, ಅವನ ಕಥೆ/ಲೀಲೆಗಳನ್ನು ಕೇಳುತ್ತಾ ದುಃಖದ ಲವಲೇಶವಿಲ್ಲದ ಆನಂದದಲ್ಲಿ ತೊಡಗಿರುತ್ತಾರೆ
- ವೈಕುಂಠವಾಸಿಗಳಾದ ಮುಕ್ತರು ಹರೆಯದವರೂ, ಸುಂದರರೂ, ೪ ಕೈ ಹೊತ್ತವರೂ ಹೊಳೆಯುವ ಆಭರಣ ಧರಿಸಿದವರೂ ಆಗಿ ಕಂಗೊಳಿಸುತ್ತಾರೆ

No comments:

Post a Comment

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...