Total Pageviews

Monday, May 29, 2017

श्री वादिराजथीर्थ कृत रुग्मिणीश विजयः Rugminisha Vijaya by Sri Vadiraja Thirtha - Part 2

।। हरि:  श्री गुरुभ्यो नमः ।। 
।। रुग्मिणीश विजयः ।। 

(Continued from Part 1)

असंख्य पापाचल कोटिभाजां
दिते: सुतानां वशमागतेयम्
असह्यभारार्दितसर्वगात्री 
जगाम धात्री शरणं विरिंचम् ।। 11।।

(ಇಲ್ಲಿಂದ ರಾಜರು ಶ್ರೀಕೃಷ್ಣನ ಅವತಾರಕ್ಕೂ, ಉದ್ದೇಶಿಸಿದೆ  ಚರಿತ್ರೆಯನ್ನು ವರ್ಣಿಸಲಿಕ್ಕೂ ಪ್ರಾರಂಭಿಸುತ್ತಾರೆ.)

ದಿತಿಯ ಮಕ್ಕಳಾದ ರಕ್ಕಸರ ಪಾಪರಾಶಿಗಳೆಂಬ ಅಸಂಖ್ಯಾತ ಗುಡ್ಡ ಬೆಟ್ಟಗಳ ಭಾರ ಹೊರಲಾಗದೇ ಮೈತುಂಬಿದ ನೋವಿನಿಂದ ಕಂಗಾಲಾಗಿ ಧರಣೀದೇವಿಯು ಬ್ರಹ್ಮದೇವರಿಗೆ ಶರಣು ಬಂದಳು. ।।11।।

(Now Sri Vadiraja swamin starts to describe the glory of Lord Krishna in a wonderful poetic style)
Bhudevi, suffering pains in every joint of the body from the unbearable weight of mountainous sins from the evil progenies of Ditidevi, the haters of Lord Mukunda, approaches Four faced Brahma. ।।11।।

मुकुंदविद्वेषिभराभिनुन्ना
बभूव सा क्षान्तियुता$पि खिन्ना
तथा हि लोके पतिनिन्दकेभ्यः 
पतिव्रतानामपरः क्व भारः ।। 12।।

ಅತ್ಯಂತ ಸಹನಶೀಲಳಾದರೂ ಕೂಡ ಮುಕುಂದನ ದ್ವೇಷಿಗಳ ಭಾರದಿಂದ ಮನಸ್ಸಿನಲ್ಲಿ ಖೇದಪಟ್ಟು ಕುಗ್ಗಿದಳು. ಲೋಕದಲ್ಲೂ ಕೂಡ ಪತಿವ್ರತೆಯರು ತಮ್ಮ ಗಂಡನನ್ನು ತೆಗಳುವವರನ್ನು ಸಹಿಸುವದಿಲ್ಲ ತಾನೇ।।12।।

Even though Bhudevi is known for Her endurance and forbearance, she couldn't tolerate these Evil haters of Mukunda. It is natural that a devoted wife shuns the enemies of husband! ।।12।।

निशम्य गोब्राह्माणमुख्यबंधुं
ध्रुवं मुकुंदं शरणं व्रजंती
बभूव गोरूपधरा धरा सा 
तमार्तभारापहरं दीना ।।13।।

ಕಷ್ಟಬಂದಾಗ ಎಂದೂ ಕೈಬಿಡದೇ ಕಾಯ್ವ, ಗೋಬ್ರಾಹ್ಮಣ ಸಜ್ಜನರ ನಿಜಬಂಧು ಮುಕುಂದನಿಗೆ ಶರಣು ಬಂದು ಧರಣೀದೇವಿಯು ಗೋರೂಪಧರಿಸಿ ದೀನಳಾಗಿ ಹೊರಟಳು.।।13।।

When the noble are in trouble, Lord Mukunda is the unfailing protector. Knowing this, Bhudevi takes on the form of a cow and starts, giving Herself up to SriHari.।।13।।

विरिंचिवैरिंचिमुखामारेशा:
स्वपारतंत्र्यं भुवि दर्शयन्तः
हरिं धराकार्यकृते गृणंतः 
पुरान्निरीयुर्हृदि तं स्मरन्तः।।14।।

ತಾವೆಲ್ಲರೂ ಹರಿಗಧೀನರು ಎನ್ನುವದನ್ನು ತೋರಿಸುತ್ತ, ತಮ್ಮ ಪಾರತಂತ್ರ್ಯವನ್ನು ಜಗಕ್ಕೇ ಬಯಲುಪಡಿಸುತ್ತ, ಚತುರ್ಮುಖ ಬ್ರಹ್ಮ, ರುದ್ರ, ಇಂದ್ರಾದಿ ದೇವತಾ ವೃಂದವು ಭೂದೇವಿಯನ್ನು ಕಾಯುವವನೊಬ್ಬನೇ ಎನ್ನುತ್ತ ಹೃದಯದಲ್ಲಿ ಹರಿಯನ್ನು ನೆನೆಸುತ್ತ ತಮ್ಮ ತಮ್ಮ ಲೋಕಗಳಿಂದ ಹೊರಹೊರಟರು.।।14।।

Making it apparent to the world that they are all dependent upon Sri Hari , remembering Him deeply in their hearts, four faced Brahma, Rudra, Indra alongwith other Gods start from their places ( towards the ocean of milk) ।।14।।

सुरावली सा श्रुतिवर्ण्यवेषा 
नभस्थले नष्टतमिस्रजाले
ययौ यतींद्रैरपि यत्नगम्याम् 
पयोब्धिवेलां पतदूर्मीमालाम् ।।15।।

ತಮಸ್ಸಿನ ಲವಲೇಶ ಸ್ಪರ್ಶವೂ ಇಲ್ಲದ ಶುಭ್ರವಾದ ನಭದಲ್ಲಿ , ಕೇವಲ ವೇದಗಳಿಂದ ಮಾತ್ರ ತಿಳಿದುಕೊಳ್ಳಲು ಶಕ್ಯವಿರುವ ರೂಪಸಿರಿಯುಳ್ಳ ಮಹಾನ್ ದೇವತಾವೃಂದವು, ಯತಿವರೇಣ್ಯರಿಂದಲೂ ಮಹತ್ಯತ್ನದಿಂದ ಮಾತ್ರ ಹೋಗಲು ಸಾಧ್ಯವಾದ, ರಮಣೀಯವಾಗಿ ಉಕ್ಕೇರಿಬರುವ ಅಲೆಗಳಿಂದ ಸುಂದರವಾಗಿ ಕಾಣುವ ಕ್ಷೀರಸಾಗರದ ತೀರವನ್ನು ತಲುಪಿತು.।।15।।

These Gods, whose very nature and appearance can only be known though Veda, reach the shore of the ocean of milk situated in the pure space untouched by the darkness of tamas. This place is beautiful with the divine waves of the milky ocean and is achievable only with difficult tapas by the great ascetics.।।15।।

ततो$ब्जभू: क्षीरपयोब्धितीरे
समाधिमास्थाय सुसंयताक्षः
स्थिरासनः प्राणगणान्नियम्य 
प्रचक्रमे प्रांजलिरात्मदीक्षाम् ।।16।।

ಕ್ಷೀರಸಾಗರದ ತೀರದಲ್ಲಿ ಕಮಲಸಂಭವನಾದ ಬ್ರಹ್ಮದೇವರು ಮನಸ್ಸನ್ನು ಏಕಾಗ್ರಗೊಳಿಸಿ, ಸಕಲ ಇಂದ್ರಿಯಗಳನ್ನು ನಿಯಂತ್ರಿಸಿ ಸ್ಥಿರವಾದ ಪದ್ಮಾಸನದಲ್ಲಿ ಕುಳಿತು ತಮ್ಮೊಡೆಯನನ್ನು ಧ್ಯಾನರೂಪ ಪೂಜೆಮಾಡಲು ಪ್ರಾರಂಭಿಸಿದರು. ।।16।।

On reaching there, the great God Chaturmukha born from Lotus sits there in padmaasana. He controls all His senses and concentrates His mind on Lord worshipping Him. ।।16।।

यदा पद्मासनसंस्थितो$लं
जजाप विद्यामितरैरवेद्याम्
तदा प्रभृत्येव जगत्सु नूनं 
बभूव पद्मासन शब्दितो$सौ ।।1711

ಹೀಗೆ ಚತುರ್ಮುಖ ಬ್ರಹ್ಮದೇವರು ಪದ್ಮಾಸನದಲ್ಲಿ ಕುಳಿತು ಯಾರಿಗೂ ಅರ್ಥವಾಗಲು ಅಶಕ್ಯವಾದ ಅನೇಕಾರ್ಥಗಳನ್ನು ಅನುಸಂಧಾನ ಮಾಡುತ್ತಾ (ಪುರುಷ ಸೂಕ್ತದ ಪ್ರತಿ ಅಕ್ಷರಕ್ಕೂ ಶ್ರೀಹರಿಯ ಮಹಿಮೆಯ ಬಗ್ಗೆ ಸಾವಿರಾರು ಅರ್ಥಗಳನ್ನು ತಿಳಿಯುತ್ತ) ಯಾವಾಗ ಶ್ರೀಮನ್ನಾರಾಯಣನ ಬಗ್ಗೆ ತಪಸ್ಸನ್ನು ಮಾಡಲು ಪ್ರಾರಂಭಿಸಿದರೋ ಹೊತ್ತಿನಿಂದಲೇ ಚತುರ್ಮುಖ ಬ್ರಹ್ಮದೇವರಿಗೆ *ಪದ್ಮಾಸನ* ಎಂಬ ಹೆಸರು ಪ್ರಸಿದ್ಧಿ ಪಡೆಯಿತು ।।17।।

Sitting with folded feet in the lotus position (known as padmAsana) Four faced Brahma meditates with the deepest of meanings of Vedic Purusha sukta, extolling Lord, which are secret and unknown to anyone else. 
As Chaturmukha sits in the lotus position and worships Lord through Purusha Sukta, He becomes famous with the name Padmaasana from that time onwards. ।।17।।

तदा तदन्यान्यपहाय हेया-
न्यारक्तचित्तः विरिंचिपुत्रः।
स्तुवन् गिरिशो$पि गिरा मुरारि
मनंगजिद्दिग्वसनो बभूव ।।18।।

ಚತುರ್ಮುಖ ಬ್ರಹ್ಮದೇವರ ಪುತ್ರನಾದ ರುದ್ರದೇವರು ಶ್ರೀಹರಿಯನ್ನು ಬಿಟ್ಟು ಬೇರೆ ಎಲ್ಲವೂ ಸಾರವಿಲ್ಲವೆಂದು ತಿಳಿದು, ಎಲ್ಲದ್ದರ ಕಾಮನೆಗಳನ್ನು ತ್ಯಜಿಸಿ, ವೇದವಾಕ್ಯಗಳಿಂದ ಹರಿಯನ್ನು ಏಕಾಗ್ರಮನಸ್ಸಿನಿಂದ ಕೊಂಡಾಡುತ್ತ ಉಟ್ಟಬಟ್ಟೆಯನ್ನೂ ಉಪೇಕ್ಷೆ ಮಾಡಿದುದರಿಂದ ಅಂದಿನಿಂದ ಕಾಮನನ್ನು ಜಯಿಸಿದವನು ಮತ್ತು ದಿಗಂಬರನು ಎಂದೇ ಪ್ರಸಿದ್ಧನಾದನು ।।18।।

Rudra, son of Four faced Brahma, realizing that everything apart from Sri Hari is without any importance, left attachment to all sense objects, started meditating on Narayana with Vedic hymns with such a deep concentration that he neglected his clothes. Since then he became famous as one who won the Lord of desires (anangajit) and digambara।।18।।

तदैव शेषो$जनि वायुभक्षः 
सहस्र नेत्रो$पि तदैव नूनम्
शतक्रतुः सुप्तिविदूरभावा
बभूवुरस्वप्नपदाश्च देवाः ।।19।।

ಕೇವಲ ಗಾಳಿಯನ್ನು ಮಾತ್ರ ಸ್ವೀಕರಿಸಿ ಶ್ರೀಹರಿಯನ್ನು ಕುರಿತು ಶೇಷದೇವರು ತಪಸ್ಸು ಮಾಡಿದ ಕಾರಣದಿಂದ ವಾಯುಭಕ್ಷ ಎಂದೆನಿಸಿದನು. ಇಂದ್ರನು ತನ್ನ ಸಾವಿರಕಣ್ಣುಗಳನ್ನು ಶ್ರೀಹರಿಯ ಮೇಲೆಯೇ ಕೇಂದ್ರೀಕೃತ ಮಾಡಿ ತಪಸ್ಸುಗೈದನು. ಅದರಿಂದ ಶತಕೃತು ಎಂದೆನಿಸಿದನು. ನಿದ್ರಾಲಸ್ಯಗಳಿಲ್ಲದೇ ಜಾಗೃತರಾಗಿ ಶ್ರೀಹರಿಯನ್ನು ಭಜಿಸಿದುದರಿಂದ ದೇವತೆಗಳೆಲ್ಲರೂ ಅಸ್ವಪ್ನರೆಂದು ಖ್ಯಾತಿಪಡೆದರು ।।19।।

Sustaining only on air Shesha performed austerity towards Sri Hari and came to be known as Vayu bhaksha Indra concentrated his thousand eyes on SriHari and performed austerity and came to be known as shatakratu All other Gods meditated on Vishnu without sleep and with care. So Gods came to be known as aswapna (one without dreams) ।।19।।

रसा पिपासोग्रभराशानाया
विषह्य विष्णुम् मनसा$चलेन
तदा$नुधावंत्यचलेति सर्वं
सहेति नूनं जगदे जगत्याम् ।।20।।
.
ಧರಣೀದೇವಿ ಕೂಡ ತನ್ನ ಮೇಲಿರುವ ಭಾರವನ್ನೂ, ಅಸಹ್ಯ ಹಸಿವು ನೀರಡಿಕೆಗಳನ್ನೂ ಲೆಕ್ಕಿಸದೇ ಎಲ್ಲವನ್ನೂ ಧೃಡಮನಸ್ಸಿನಿಂದ ಸಹಿಸುತ್ತ ಏಕಾಗ್ರವಾಗಿ ಶ್ರೀಹರಿಯನ್ನು ನೆನೆಯುತ್ತಲಿದ್ದಳು. ಅದರಿಂದಲೇ ಮುಂದೆ ಅವಳು ಅಚಲಾ, ಸರ್ವಂಸಹಾ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದಳು. ।।20।।

Bhudevi, tolerating the extreme weight, hunger and thirst, kept her mind steady on Lord Vishnu without wavering. Thus she came to be known as achalaa and sarvam sahaa ।।20।।

सहस्रकार्येषु भवान् समर्थः
सहस्रनेत्राननपाणिपादः
इतीव विज्ञापयितुं विरिंचः
स्तुतिं पुंसूक्तगतां ततान ।।21।।

ಶ್ರೀಹರಿಯೇ ಅನಂತ ಕಣ್ಣು,ಮುಖ, ಕೈಕಾಲುಗಳುಳ್ಳವನಾಗಿ ಅನಂತಾನಂತ ಕಾರ್ಯಗಳನ್ನು ಮಾಡಲು ಸಮರ್ಥನೆಂದು ತೋರಿಸಲೇ ಚತುರ್ಮುಖ ಬ್ರಹ್ಮದೇವರು ಪುರುಷಸೂಕ್ತದಲ್ಲಿರುವ ಗುಣಗಣಗಳಿಂದಲೇ ಶ್ರೀಹರಿಯನ್ನು ಸ್ತುತಿಸಿದರು. ।।21।।

To show that Sri Hari alone is capable of the innumerable actions, Four faced Brahma eulogised through Purusha Sukta which says Sri Hari is endowed with countless eyes, faces, hands and legs. ।।21।।

तच्चित्ते$oकुरित: सुभक्तिलतया श्लिष्टः प्रमोदाश्रुभिः 
सिक्तः सत्पुलकालिमूलविततः कायप्रभापल्लवः
इशन्मीलितनेत्र कुडमलयुतः शाखासहस्रोर्जितः 
प्राप्तः श्रीरमणद्विजेन फलितस्तद्ध्यान कल्पद्रुमः ।।22।।
.
( ಶ್ಲೋಕವು ಅತ್ಯದ್ಭುತ ಉಪಮಾಲಂಕಾರದಿಂದ ಕೂಡಿದ್ದು  ಸರಳಾನುವಾದದಿಂದ ಅರ್ಥವಾಗುವದಿಲ್ಲ. ಆದುದರಿಂದ ಬಿಡಿಸಿ ಬಿಡಿಸಿ ಬರೆಯಲಾಗಿದೆ. ಗ್ರಂಥದಲ್ಲಿ ಇದೇ ತರಹದ ಹಲವಾರು ಶ್ಲೋಕಗಳಿರುವದರಿಂದ ಶ್ಲೋಕಾರ್ಥ ಬರೆದ ಪದ್ಧತಿಯನ್ನೇ ಅನುಸರಿಸಲಾಗುವದು)
ಇಲ್ಲಿ ಹಿಂದೆ ವರ್ಣಿಸಿದ ಚತುರ್ಮುಖಾದಿ ದೇವತಾಗಣಗಳ ಧ್ಯಾನವನ್ನು ಕಲ್ಪವೃಕ್ಷಕ್ಕೆ ಹೋಲಿಸಲಾಗಿದೆ. ಅಂತಹ ಕಲ್ಪವೃಕ್ಷವು ದೇವತೆಗಳ ಚಿತ್ತವೆಂಬ ಭೂಮಿಯಲ್ಲಿ ಹುಟ್ಟಿ, ಅವರು ಆನಂದದಿಂದ ಸುರಿದ ಕಣ್ಣೀರಿನಿಂದ ಬೆಳೆಯಿತು. ನಾರಾಯಣನ ಗುಣಗಳ ಸ್ಮರಣೆಯಿಂದ ನಿಮಿರಿನಿಂತ (ರೋಮಾಂಚನಗೊಂಡ) ದೇಹದ ರೋಮಗಳೇ ಅದರ ಬೇರುಗಳು. ದೇವತೆಗಳಿಂದ ಉಕ್ಕಿಹರಿವ ಭಕ್ತಿರಸವೇ ಧ್ಯಾನಕಲ್ಪವೃಕ್ಷವನ್ನು ಸುತ್ತಿ ನಿಂತ ಲತೆ. ಧ್ಯಾನದ ಸಮಾಧಿಕಾಲದಲ್ಲಿ ಹೊಳೆಯುವ ಅವರ ದೇಹದ ಕಾಂತಿಯೇ ವೃಕ್ಷದ ಚಿಗುರೆಲೆಗಳೂ, ಅರೆತೆರೆದ ಕಣ್ಣುಗಳೇ ಹೂವಿನ ಮೊಗ್ಗೆಗಳು. ಸಮಸ್ತವೇದದ ಸಹಸ್ರಾರು ಶಾಖೋಪಶಾಖೆ ಗಳಿಂದ ಎತ್ತರವಾಗಿ ಕಾಣುವ, ಸುರಶ್ರೇಷ್ಠರ ಧ್ಯಾನದ ಪಕ್ವತೆಯೇ ಕಲ್ಪವೃಕ್ಷದ ಮಾಗಿದ ರಸಭರಿತ ಹಣ್ಣುಗಳು.
ದೇವಶ್ರೇಷ್ಠರ ಶ್ರೀಹರಿಯ ಧ್ಯಾನವೆಂಬ  ಇಂತಹ ಕಲ್ಪವೃಕ್ಷದ ತುದಿಯಲ್ಲಿ  ಲಕ್ಶ್ಮೀರಮಣನೆಂಬ ಪಕ್ಷಿ ಬಂದು ಕುಳಿತನು
(ದೇವತೆಗಳ ಉತ್ಕೃಷ್ಟಭಕ್ತಿಗೆ ವಶನಾಗಿ ಅವರ ಧ್ಯಾನದಲ್ಲಿ ದರ್ಶನವಿತ್ತನು ಎಂದು ರಾಜರು ಸುಂದರವಾದ ವರ್ಣನೆಯಿಂದ ಹೇಳುತ್ತಾರೆ.) ।।22।।

(This verse contains numerous similes and a simple word to word translation will not be able to carry the intent. Therefore a longer description is given. As this composition has many verses of the same type, this method will be followed in such verses in future also.)
The meditation on Sri Hari by the Highest echelons of Godheads described in earlier verses is compared to the divine tree, kalpavriksha, which gives everything you wish for. That divine tree was planted on the fertile soil of the mind of the Gods. It was watered with the tears of joy from remembering the greatness of Sri Hari by the Gods. And the hairs of the bodies of Gods risen with goosebumps are the roots of the tree. The vine encircling the tree was the flow of devotion from the Gods. The shining aura of the bodies of the devoted Gods during the deep meditation were the tender leaves. The half-closed eyes of Gods in deep contemplation were the flower buds. The tree was looking full and tall with thousands of branches of vedic hymns. The sweet richness of the maturity of the meditation by the Gods were the tasty fruits.  
AND THEN...
The Bird called Sri Hari came and rested on top of that tree.

( With these breathtakingly beautiful similes Sri Vadiraja teertha swamiji describes that Sri Hari appears in the mind of the Gods, pleased with their devotion and austerities) ।।22।।

ततः प्रसन्न: करुणाम्बुराशिः 
सुरान् समास्वास्य विरिंचपूर्वान्।
धरां गतक्लेशभरां विधाय
स्वकीयमायां हरिरित्य वोचत् ।।23।।

ಕರುಣಾಸಮುದ್ರನಾದ ಶ್ರೀಹರಿ (ಚತುರ್ಮುಖನ ಮನೋಗೋಚರನಾಗಿಯೇ) ಭೂದೇವಿಯ ಕಷ್ಟವನ್ನು ಪರಿಹರಿಸುವ ಆಶ್ವಾಸನೆಯಿತ್ತು ತನ್ನವಳೇ ಆದ ಪ್ರಕೃತ್ಯಭಿಮಾನಿ ಮಾಯಾದೇವಿ ಶ್ರೀಲಕ್ಷ್ಮೀದೇವಿಗೆ ಹೀಗೆ ಹೇಳಿದನು. ।।23।।

Sri Hari, the kindest of all, ( in the mind of)  Four faced Brahma promised to get Bhudevi rid of her sufferings told Sri Lakshmidevi, governed by His wish and controller of the insentient prakRiti thus.. ।।23।।

देवेषु धाता प्रभुरस्य लक्ष्मी:
तस्याः प्रभु: सो$हमितीव शंसन्।
आज्ञामजस्यैव ददावदृश्यों
विज्ञेयमूर्ति: स्फुटमिन्दिरायाः।।24।।

( ಮೇಲಿನ ಪ್ರಸಂಗ ತಾರತಮ್ಯವನ್ನು ಸ್ಪಷ್ಟವಾಗಿ ತಿಳಿಸುತ್ತದೆ)
"ದೇವತೆಗಳಿಗೆ ಒಡೆಯ ಚತುರ್ಮುಖ, ಲಕ್ಷ್ಮೀದೇವಿ ಚತುರ್ಮುಖನಿಗೆ ಮತ್ತು ಅವರೆಲ್ಲವರಿಗೆ ನಾನೇ ಪ್ರಭು" ಹೀಗೆಂದು ತಿಳಿಸಲೋಸುಗವೋ ಎಂಬಂತೆ ಶ್ರೀಹರಿ ಚತುರ್ಮುಖನಿಗೆ ಅದೃಶ್ಯನಾಗಿ ಮತ್ತು ಲಕ್ಷ್ಮೀದೇವಿಗೆ ಸಾಕ್ಷಾತ್ ಆಜ್ಞಾಪಿಸಿದನು.।।24।।

As if declaring that "Four faced Brahma is Lord of all devatas, Lakshmidevi rules Him and I am the Lord of all" Sri Hari gives order to Chaturmukha in his mind and orders Lakshmidevi, being visible to Her.।।24।।

त्वमेत्य देवक्युदरस्थगर्भम् 
निधेहि रोहिन्युदरे स्वशक्त्या
इतीरिता तं रमणं रमा सा
प्रदक्षिणीकृत्य तथा$करोत्तत् ।।25।।

(ಲಕ್ಷ್ಮೀದೇವಿಗೆ ಏನೆಂದು ಆಜ್ಞೆ ಮಾಡುತ್ತಾನೆ ಎಂದರೆ ಹೇಳುತ್ತಾರೆ
ಈಗ ಭೂಮಿಗೆ ಹೋಗಿ ದೇವಕಿಯ ಗರ್ಭದಲ್ಲಿ ಬೆಳೆಯುತ್ತಿರುವವನನ್ನು ನಿನ್ನ ಶಕ್ತಿಯಿಂದ ಸೆಳೆದುಕೊಂಡು ಹೋಗಿ ರೋಹಿಣೀದೇವಿಯ ಉದಾರದಲ್ಲಿಡು" ಅವಳಾಗ  ತನ್ನ ಪತಿಯ ಆಜ್ಞೆಯಂತೆ ಹಾಗೆಯೇ ಮಾಡಿದಳು. ।।25।।

(Shri Hari orders Lakshmidevi) 
“Go to earth and with your power carry the foetus growing in Devaki's womb and place it in Rohini devi's womb" She quickly carries out Her Lord's wish.  ।।25।।

आज्ञापयामास पूरा शेषं 
जज्ञे रोहिण्युदरोदयाद्रे:
संप्रेषयन्ति स्म नरैर्नरेंद्रा:
शय्यां स्वकीयां पुरतः प्रयाणे ।।26।।

ಶ್ರೀಹರಿಯು ತಾನು ಅವತರಿಸುವ ಮೊದಲೇ ಅವತರಿಸುವಂತೆ ಶೇಷದೇವರಿಗೆ ಆಜ್ಞೆಯನ್ನಿತ್ತಿದ್ದ. ಅದರಂತೆ ಶೇಷದೇವರು ರೋಹಿಣಿದೇವಿಯ ಉದರವೆಂಬ ಉದಯಾಚಲದಿಂದ ಭೂಮಿಯ ಮೇಲೆ ಉದಯಿಸಿದರು. ಚಕ್ರವರ್ತಿಗಳು ತಾವು ಪಯಣಿಸುವ ಮುಂಚೆಯೇ ತಮ್ಮ ಮಂಚವನ್ನು ಕಳುಹಿಸುತ್ತಾರೆ ತಾನೇ! ।।26।।

Sri Hari had ordered Shesha to descend to earth before He Himself came down. So Shesha took birth from Rohini devi as the sun rises from the mountain udayachala. It is but natural for a King to send his seat and bed before he sets on journey ।।26।।

केशात्मना सन्निहितः तस्मिन् 
श्रीशो$ग्रजत्वं स्वयमेव नूनम्
धत्ते विधत्ते बलभद्र मातु-
र्नित्यं स्वमातृत्वसुखं सुखात्मा ।।27।।

ಶೇಷಾವತಾರಿ ಬಲರಾಮನಲ್ಲಿ ತನ್ನ ಶುಕ್ಲಕೇಶ ರೂಪದಿಂದ ಇದ್ದು ತನಗೆ ತಾನೇ ಅಣ್ಣನೆನೆಸಿಕೊಂಡನು. ಮತ್ತು ರೋಹಿಣೀದೇವಿಗೆ ತನ್ನ ಮಾತೆಯಿಂದೆನಿಸಿಕೊಳ್ಳುವ ಸುಖಪ್ರದ ಸನ್ನಿವೇಶವನ್ನು ನೀಡಿದನು. ।।27।।

Sri Hari resides in Balarama with His white hair form and therefore is both as an elder brother to Himself. And blesses Rohini devi to enjoy the fortune of being His mother ।।27।।

बलात्  प्रगृह्य स्वकवाटपालौ 
निशाचरौ भूतलमेत्य दृप्तौ
नृतस्करौ तौ विनिहत्य विष्णु 
र्निजौ निनीषन्निन गां गतो$भूत् ।।28।।

ಇಬ್ಬರು ದೈತ್ಯರು ಬಲಾತ್ಕಾರದಿಂದ ತನ್ನ ದ್ವಾರಪಾಲಕರಿಬ್ಬರನ್ನು ಭೂಮಿಗೆ ಎಳೆದೊಯ್ದು ಗರ್ವಿತರಾಗಿದ್ದಾರೆ. ನರಚೋರರನ್ನು ಕೊಂದು ತನ್ನವರಾದ ದ್ವಾರಪಾಲಕರನ್ನು ತಿರುಗಿ ಒಯ್ಯುವ ಇಚ್ಛೆಯುಳ್ಳವನೋ ಎಂಬಂತೆ ಶ್ರೀಹರಿಯು ಭೂಮಿಗೆ ಬಂದನು. ।।28।।

Two Demons have abducted two of my door keepers and have taken them to earth. Sri Hari came down to earth, looking as if to kill those two arrogant devils and take back His servants. ।।28।।

गर्भवासो मम निर्मलस्ये-
त्यदो बुधान् बोधयितुं हृदेव
फणीश्वरं गर्भगतं विधाय 
पुनः स्वयं सन्निहितो बभूव ।। 29 ।।

ಗರ್ಭವಾಸಾದಿ ದುಃಖಗಳು ದೋಷದೂರನಾದ ತನಗಿಲ್ಲ ಎನ್ನುವದನ್ನು ಸಜ್ಜನರಿಗೆ ತಿಳಿಸುವದಕ್ಕೋಸ್ಕರವೇ ಮೊದಲು ಫಣಿರಾಜನಾದ ಶೇಷನನ್ನು ಗರ್ಭದಲ್ಲಿರಿಸಿ ಅವನನ್ನು ಸೆಳೆದೊಯ್ದು ಬೇರೆಡೆ ಇಟ್ಟು ಆನಂತರ ತಾನು ಬಂದು ಅಲ್ಲಿ ಸನ್ನಿಹಿತನಾದನು. ।।29।।

As if to demonstrate that He is untouched by any kind of suffering like growing in the womb, Sri Hari compelled Shesha to enter the womb first. Then He replaced Shesha with Himself. ।।29।।

गर्भे$प्यादभ्रात्मसुखैकमूर्ति-
मभ्येत्य पद्मासनमुख्यदेवाः
गीर्भिर्भवद्गर्भनिवासजार्ति-
निर्भङ्गसिद्ध्यर्थमिवास्तुवंस्तम् ।।30।।

ಗರ್ಭದಲ್ಲಿದ್ದರೂ ಕೂಡ ಯಾವುದೇ ತರದ ದುಃಖಲೇಪಗಳಿಲ್ಲದೇ ಸದಾ ಆನಂದದ ಮೂರ್ತಿಯೇ ಆದ ಶ್ರೀಹರಿಯನ್ನು ಚತುರ್ಮುಖ ಬ್ರಹ್ಮಾದಿ ದೇವತಾ ಶ್ರೇಷ್ಠರು ಸ್ತುತಿಸುತ್ತಾರೆ. ಇದರಿಂದ ತಮಗೂ ಕೂಡ ಗರ್ಭವಾಸಾದಿ ದುಃಖಗಳಿಂದ ಶ್ರೀಹರಿಯು ಮುಕ್ತಿಯನ್ನೀಯಲಿ ಎಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ।।30।।

The great Gods Chaturmukha and others pray to Sri Hari in the womb, knowing that He is untouched by any kind of such sufferings and remains blissful.They pray Sri Hari as if to get released from the suffering of being born by the Grace of Lord. ।।30।।
.
अथो जयंत्यामुदभून्निशीथे 
शशीव देवक्युदरोदयाद्रे:
दिगष्टके रात्रिचरान् जिगीषो-
स्तिथिर्निशा सा गुणोचितैव ।।31।।

(ಮಂಗಲಮಯವಾದ ಚರಿತ್ರೆಯ ಪ್ರಾರಂಭವೆಂದು ಸೂಚಿಸಲು ರಾಜರು *ಅಥ* ಶಬ್ದದಿಂದ ಪ್ರಾರಂಭಿಸುತ್ತಾರೆ) ಆನಂತರ ಶ್ರೀಹರಿಯು ಜಯಂತೀ ಮುಹೂರ್ತದಲ್ಲಿ (ಸಿಂಹಮಾಸ ಶ್ರಾವಣ ಕೃಷ್ಣಪಕ್ಷ ಅಷ್ಟಮಿಯಂದು ರೋಹಿಣೀ ನಕ್ಷತ್ರವಿರಲು) ಅರ್ಧರಾತ್ರಿಯಲ್ಲಿ ದೇವಕೀದೇವಿಯ ಉದರವೆಂಬ ಉದಯಪರ್ವತದಿಂದ ಚಂದ್ರನಂತೆ ಉದಯಿಸಿದನು. ಎಂಟೂ ದಿಕ್ಕುಗಳಲ್ಲಿರುವ ನಿಶಾಚರರಾದ ರಕ್ಕಸರನ್ನು ಜಯಿಸಲು ಅವತರಿಸಿದ ಶ್ರೀಹರಿಗೆ ಅಷ್ಟಮಿಯೂ, ರಾತ್ರಿಯೂ, ಮುಹೂರ್ತವೂ ಇದನ್ನೇ ಘೋಷಿಸುವಂತಿತ್ತು.
(ಅಷ್ಟಮಿಯು ಎಂಟು ದಿಕ್ಕುಗಳನ್ನು ಸೂಚಿಸಿದರೆ, ರಾತ್ರಿ ನಿಶಾಚರರಾದ ರಾಕ್ಷಸರನ್ನೂ, ಜಯಂತೀ ಮುಹೂರ್ತವು ಶ್ರೀಹರಿಯು ಅಜೆಯನೆಂದೂ ಸೂಚಿಸುತ್ತದೆ) ।।31।।

(Indicating that the avatara of SriHari is start of the auspicious period, Sri Vadiraja teertha begins the verse with the word atha).
So, therefore Sri Hari appears on the eighth day of dark half of Shravan masa when Sun was in Leo at midnight from the womb of Devaki devi, as if the moon appears from the mountain udayachala. This combination is famous as jayanti. The time of His appearance does indeed signify the purpose for His avatara. The night and eighth day signifying, the demons in all eight directions who are active in the night time the jayanti muhurta signifies that Lord always wins. ।।31।।

प्रथां यशोदासुत इत्युदारां 
करिष्यमाणो जननीमिवान्याम्
देवकीगर्भभवो$नुगृह्णन्
ततान रोहिण्युदयप्रसिद्धिम् ।।32।।

ದೇವಕೀದೇವಿಯಲ್ಲಿ ಜನಿಸಿದರೂ ಯಶೋದೆಯ ಮಗನೆಂದು ಹೆಸರುವಾಸಿಯಾದನು. ಆದರೆ ರೋಹಿಣೀ ನಕ್ಷತ್ರದಲ್ಲಿ ಅವತರಿಸಿ ಬಲರಾಮನ ತಾಯಿ ರೋಹಿಣೀದೇವಿಯನ್ನೂ ಅನುಗ್ರಹಿಸಿದನು.( ಇಲ್ಲಿ ರಾಜರು ಶ್ರೀಹರಿಯ ಜನ್ಮ ನಕ್ಷತ್ರ ರೋಹಿಣಿಯಾದುದರಿಂದ ಬಲರಾಮನ ತಾಯಿ ರೋಹಿಣಿಯೂ ಅನುಗ್ರಹಿಸಲ್ಪಟ್ಟಳು ಎನ್ನುತ್ತಾರೆ) ।।32।।

Though born in Devaki, He becomes known as son of Yashoda devi. And being born in the star Rohini He graces Rohini, mother of Balarama. (Sri Vadiraja teertha poetically describes that as the name of the star and mother of Balarama is same, it is as if Lord has graced her) ।।32।।

यदा हरि: प्रादुरभूत्कलाभिः 
तदा समायव्ययवांश्च चंद्रः
प्रियाप्रियाप्त्येव निजान्वयोत्थ
मुकुंद वक्त्रेन्दुकलावलोकात् ।।33।।

( ಶ್ಲೋಕವು ರಾಜರ ಬಹುಸುಂದರವಾದ ಕಲ್ಪನೆಯನ್ನು ತೋರಿಸುತ್ತದೆ)
ಶ್ರೀಹರಿ ಅವತರಿಸಿದ್ದು ಚಂದ್ರವಂಶದಲ್ಲಿ. ತನ್ನ ಕುಲದಲ್ಲಿ ಅವತರಿಸಿ ತನ್ನ ಕೀರ್ತಿಯನ್ನು ಹರಡಿದನೆಂದು ಚಂದ್ರನು ಅರ್ಧ ಹಾರುಷಗೊಂಡನಂತೆ! ಆದರೆ ಶ್ರೀಕೃಷ್ಣನ ಮುಖಚಂದ್ರದ ಅಪ್ರತಿಮಕಲೆಯಿಂದ ತನ್ನ ಕಲೆಯು ಹಿಂದುಬಿತ್ತೆಂದು ಅರ್ಧ ದುಃಖವಾಯಿತಂತೆ. ಅದಕ್ಕಾಗಿ ಚಂದ್ರನು (ಅಷ್ಟಮಿ ತಿಥಿಯಲ್ಲಿ) ಅರ್ಧಕಲೆ ಉಳ್ಳವನಾದನಂತೆ! ( ಅಷ್ಟಮಿ ತಿಥಿಯಲ್ಲಿ ಚಂದ್ರನು ಅರ್ಧಪ್ರಕಾಶವುಳ್ಳವನು) ।।33।।

(In this verse Sri Vadiraja teertha gives a run for His imagination.)
Moon is half pleased as Lord has taken birth in hi kula. At the same time he is half sad that his pleasantness is overridden by the most pleasing countenance of Sri Krishna's face! (The reason for Moon being half bright on the eighth day of the dark half of the month is because he is pleased as well as sad!) ।।33।।

तदैव गन्धर्व गणा जगुस्तं 
तिलोत्तमाद्या ननृतुस्तदैव
स्वगीतनाट्येन विजेष्यमाणं
तमात्मसात्कर्तुमिवाशु बाल्ये ।।34।।

ಮುಂದೆ  ತನ್ನ ಮೋಹಕಸಂಗೀತ ಮತ್ತು ನರ್ತನಕಲೆಯಿಂದ ಜಗದ ಜನರನ್ನೆಲ್ಲ ವಶಪಡಿಸಿಕೊಳ್ಳುವವನನ್ನು ಈಗಲೇ ತಾವು ವಶಪಡಿಸಿಕೊಳ್ಳೋಣ ಎಂಬಂತೆ ಗಂಧರ್ವರು ಶ್ರೀಕೃಷ್ಣನು ಹುಟ್ಟುತ್ತಲೇ ಹಾಡಿದರು. ತಿಲೋತ್ತಮೆಯೇ ಮುಂತಾದ ಅಪ್ಸರೆಯರು ಕುಣಿದಾಡಿದರು. ।।34।।

Knowing that Lord will win the hearts of people with His singing and dancing prowess, the divine singers, Gandharvas sing melodiously and the divine beautiful dancers like Tilottama dance at the birth of Sri Krishna as if to win Him over now only. ।।34।।

दिशो यशोभिः परिपूरयिष्य-
त्युदग्रचेष्टः इति प्रहृष्टा:
रसा प्रसन्ना किल रंजितां मां 
करिष्यति स्वांघ्रितलश्रियेति ।।35।।
.
ತನ್ನ ಯಶೋಗಾಥೆಗಳಿಂದ ದಿಕ್ಕುಗಳೆಲ್ಲವನ್ನು ತುಂಬಿ ಬಿಡುತ್ತಾನೆ ಎಂದು ದಿಕ್ಕುಗಳು ಆನಂದಪಡುತ್ತವೆ. ತನ್ನ ಕಾಲಿನ ಕಾಂತಿಯಿಂದ ತನ್ನನ್ನು ರಂಜಿಸುತ್ತಾನೆ ಎಂದು ಭೂದೇವಿಯ ಮನಸ್ಸು ಪ್ರಸನ್ನವಾಗುತ್ತದೆ. ।।35।।

The Directions were full of happiness knowing that Lord will fill them with His fame. Bhudevi feels very pleasant knowing that she will be decorated with His footmarks. ।।35।।

तदैव देवा ववृषु प्रसूनैः
हृदि स्मरन्तो वचसा स्तुवन्तः
नगेंद्रमैन्द्रम् भुवि नेश्यतो$स्य
मनः समुद्बोधयितुं पुरैव ।।36।।

ಇಂದ್ರನ ನಗರಿಯಲ್ಲಿರುವ ಪಾರಿಜಾತ ವೃಕ್ಷವನ್ನು ಭೂಮಿಗೆ ನೀನು ಮುಂದೆ ಒಯ್ಯಬೇಕೆಂದು ಈಗಲೇ ನೆನಪಿಸಬೇಕೆಂಬಂತೆ ದೇವತಾವೃಂದವು ಹೃದಯದಲ್ಲಿ ಶ್ರೀಕೃಷ್ಣನನ್ನು ನೆನೆಸುತ್ತ, ಬಾಯಿಯಿಂದ ಕೊಂಡಾಡುತ್ತ ಅವನು ಹುಟ್ಟುತ್ತಲೇ ಹೂಮಳೆ ಗೈದಿತು.।।36।।

As if to remind Sri Krishna that He has to carry the divine parijata flower tree from the Heavens, Kingdom of Indra to earth the Gods rain flowers on little Krishna, remembering His virtues and praying His greatness.।।36।।

Friday, May 26, 2017

Gurucharitra - Shri Purnaprajna Thirtha Sripad Vader Swamiji


Today is Punyatithi of Srimad Purnaprajna Theerth Shripad Vader Swamiji, who was the 18th Mathadipathi of Gokarna Parthagali Jeevotham Matha.


ब्रह्मांता गुरवः साक्षादिष्टम् दैवं श्रियःपतिः।
आचार्या श्रीमदाचार्या संतु में जन्मजन्मनि ।।
पीत्वा सम्यक्सुधासारं चरित्वा वसुधातलम्।
वादिवाराजिता येन पूर्णप्रज्ञगुरुं भजे ।

Birth : Srisaka 1731, Bhadrapad shukla chaturthi. Sunday.
Birth place : Mudageri, near Karwar.
Janma naam: Ganesh.
Sanyasa deeksha : Tarana samvatsara 1746 (1824 A.D.) Chaitra purnima at Partagali
Guru peetharohana : Sarvadhari samvatsara 1750 , shravan krishna shashthi.(1828 A.D.)
Moksha: Pramathi samvatsara 1809, jyeshtha shukla dviteeya.at Partagali. (1879A.D.) 
Shishya : Srimad Padmanabh teerth shripad vader swamiji.


श्रीमत पूर्णप्रज्ञ तीर्थ श्रीपाद वडेर स्वामीजी

18 पीठाधिपति संस्थान गोकर्ण पर्तगाळी जीवोत्तम मठ

ಆನಂದ ತೀರ್ಥಾರ್ಯ ಪದಾಬ್ಜ ಭಕ್ತ:
ಸ್ವಾನಂದಮಗ್ನೋ ವಿಷಯೇಸ್ವಸಕ್ತ: ।
‌‌ಜ್ಞಾನಂ ದದದ್ಯೋಗ್ಯಜನೇಷು ಪೂರ್ಣ-
ಪ್ರಜ್ಞಾಭಿಧಃ ಶ್ರೀ ಯತಿರಾಟ್ ವಿಭಾತಿ ।।1।।
आनंद तीर्थार्य पदाब्ज भक्तः
स्वानंदमग्नो विषयेस्वसक्त:।  
ज्ञानं ददद्योग्य जनेषु 
पूर्णप्रज्ञाभिदः श्री यतिराट विभाति।।1।।

ಶ್ರೀಮದಾನಂದ ತೀರ್ಥಗುರುಗಳ ಪದಗಳಲ್ಲಿ ಅನನ್ಯ ಭಕ್ತರೂ , ತಮ್ಮ ಸ್ವರೂಪಾನಂದದಲ್ಲಿ ಮಗ್ನರೂ (ಸ್ವ ಅಂದರೆ ನಾರಾಯಣನೂ ಆದುದರಿಂದ , ನಾರಾಯಣನು ಆನಂದ ಪೂರ್ಣನು ಎಂಬ ಜ್ಞಾನದಲ್ಲಿ ಮಗ್ನರೂ), ಬಾಹ್ಯ ಇಂದ್ರಿಯವಿಷಯವಸ್ತುಗಳಲ್ಲಿ ಸಂಪೂರ್ಣ ವಿರಕ್ತರೂ, ಯೋಗ್ಯಜನರಿಗೆ ಯಥಾರ್ಥ ಜ್ಞಾನವನ್ನು ಉಪದೇಶಿಸುತ್ತಲೂ ಶ್ರೀ ಪೂರ್ಣಪ್ರಜ್ಞ ತೀರ್ಥರು ಪ್ರಖರ ಸೂರ್ಯನಂತೆ ಪ್ರಕಾಶಮಾನರಾಗಿ (ನನ್ನ ಹೃದಯದಲ್ಲಿ) ವಿರಾಜಮಾನರಾಗಿದ್ದಾರೆ.
(ಇಲ್ಲಿ ಆನಂದ ತೀರ್ಥರೆಂದರೆ ಮೂಲಗುರು ಮುಖ್ಯಪ್ರಾಣಾವತಾರರಾದ ಮಧ್ವಾಚಾರ್ಯರೂ ಹೌದು. ಮತ್ತು ತಮಗೆ ಸಂನ್ಯಾಸ ದೀಕ್ಷೆಯಿತ್ತ 17ನೇ ಪೀಠಾಧಿಪತಿಗಳಾದ ಆನಂದ ತೀರ್ಥ ಗುರುಗಳೂ ಹೌದು)

Completely engrossed with devotion in the lotus feet of Sri Ananda teertha (mula guru, pranaavataara shri Madhwacharya. And 17th guru Ananda teertha who gave sanyasa deeksha and is guru) , immersed in enjoying the svarupananda. Or as sva=Narayana, worshipping Narayana as Ananda purna) , withdrawn from the attractions of the sense organs, teaching the right knowledge only to the fit satvika people , the sun named Purnaprajna is shining with all the glory (in my heart)

 स्वछात्र संस्थापित शंखचक्र: सत् शास्त्र संतोषित लोकचक्र:।
स्वछेन्दुवक्त्र:प्रतिभाति पूर्णप्रज्ञाह्वयो भूमितले यतीन्द्र:।।2।।

ಸ್ವಛಾತ್ರ ಸಂಸ್ಥಾಪಿತ ಶಂಖಚಕ್ರ: ಸಚ್ಚಾಸ್ತ್ರ ಸಂತೋಷಿತ ಲೋಕಚಕ್ರ:।
ಸ್ವಚ್ಚೇoದುವಕ್ತ್ರ: ಪ್ರತಿಭಾತಿ ಪೂರ್ಣಪ್ರಜ್ಞಾಹ್ವಯೋ ಭೂಮಿತಲೇ ಯತೀಂದ್ರ:।।2।।

To His disciples He gave tapta chakra shankha mudras (so that His disciples received vaishnava deeksha and were blessed by prANa and Lord to make their learning of shastra effective) He narrated the divine vaishnava shastra wherever He went. Such a king among the sanyasis, Sri Purnaprajna teerth spreads joy and peace like a clear full moon on the earth.

ತಮ್ಮ ಶಿಷ್ಯರಿಗೆ ತಪ್ತ ಚಕ್ರ ಶಂಖ ಮುದ್ರೆಗಳ ನ್ನೀಯುತ್ತ   (ಅವರಿಗೆ ವೈಷ್ಣವ ದೀಕ್ಷೆಯಿತ್ತು ಪಾಲಿಸುತ್ತ , ಪ್ರಾಣದೇವರು ಮತ್ತು ಚಕ್ರಿಯ ಅನುಗ್ರಹದಿಂದ ತಾವು ಕಲಿತ ವೇದವಿದ್ಯೆ ಫಲಿಸುವಂತೆ ಮಾಡುತ್ತಿದ್ದರು. ಆಯಾ ಕಾಲದಲ್ಲಿ ಗುರುಗಳಿಂದ ತಪ್ತಮುದ್ರಾಧಾರಣವನ್ನು ಮಾಡಿಕೊಳ್ಳದಿದ್ದಲ್ಲಿ ಕಲಿತ ವೇದವಿದ್ಯೆ, ವರ್ಷವಿಡೀ ಮಾಡಿದ ಜಪತಪಾನುಷ್ಠಾನಗಳು ಫಲದಾಯಕವಾಗುವದಿಲ್ಲ. ಉಟ್ಟ ಜನಿವಾರದ ಪವಿತ್ರತೆಯೂ ಇರುವದಿಲ್ಲ. ಆದುದರಿಂದ ಆಯಾ ಕಾಲದಲ್ಲಿ ,ತಪ್ಪಿದರೆ ಗುರುಗಳು ಲಭ್ಯವಿದ್ದಾಗ ತಪ್ತಮುದ್ರೆಗಳನ್ನು ಸ್ವೀಕರಿಸುತ್ತಿರಬೇಕು)
ತಾವು ಸಂಚಾರಮಾಡುತ್ತಿರುವೆಡೆಯಲ್ಲಿ ಸಚ್ಚಾಸ್ತ್ರಗಳನ್ನು ಪ್ರವಚನ ಮಾಡುತ್ತ, ಹುಣ್ಣಿಮೆಯ ಚಂದ್ರನಂತೆ ಲೋಕದ ಜನರಲ್ಲಿ ವಿಷ್ಣುಸರ್ವೋತ್ತಮತ್ತ್ವದ ಆಹ್ಲಾದಕರ ಬೆಳದಿಂಗಳನ್ನು ಬೀರುತ್ತ, ಶ್ರೀ ಪೂರ್ಣಪ್ರಜ್ಞ ತೀರ್ಥರು ಪ್ರತಿಭಾಯುತರಾಗಿದ್ದಾರೆ.।।2।।
.
 अद्वैतवादप्रशमैकनिष्ठ: सद्वैष्णवानां प्रियकृद्वरिष्ट:।
सद्वैभवः साधुसभासु पूर्णप्रज्ञाख्ययोगी भुवने विभाति।।3।।

ಅದ್ವೈತವಾದಪ್ರಶಮೈಕನಿಷ್ಠ: ಸದ್ವೈಷ್ಣವಾನಾಂ ಪ್ರಿಯಕೃದ್ವರಿಷ್ಠ:।
ಸದ್ವೈಭವ: ಸಾಧುಸಭಾಸು ಪೂರ್ಣಪ್ರಜ್ಞಾಖ್ಯಯೋಗೀ ಭುವನೇ ವಿಭಾತಿ।।3।।

ಜೀವಬ್ರಹ್ಮಐಕ್ಯವಾದವನ್ನು ಸಪ್ರಮಾಣವಾಗಿ ಹತ್ತಿಕ್ಕಿ ತಮ್ಮ ಶಿಷ್ಟರ ಮನದಿಂದ ದೂರ ಒಗೆಯಲು ಸದಾ ನಿಷ್ಠರಾಗಿದ್ದು ವಿಷ್ಣು ಸರ್ವೋತ್ತಮತ್ತ್ವ ವಾಯುಜೀವೋತ್ತಮತ್ತ್ವವನ್ನು ಬೋಧಿಸಿ ಶಿಷ್ಯರನ್ನು ವೈಷ್ಣವಸನ್ಮಾರ್ಗದಲ್ಲಿ ನಡೆಸಿ ವೈಭವಪೂರ್ಣವಾದ ಸಜ್ಜನರ ಸಭೆಯಲ್ಲಿ ಶ್ರೀ ಪೂರ್ಣಪ್ರಜ್ಞ ಯೋಗಿಗಳು ಶೋಭಾಯಮಾನರಾಗಿದ್ದಾರೆ।।3।।

Sri Purnaprajna teerth was very serious and expert in showing the defects in advaita philosophy and in teaching the right vedic principles of vaishnava shastra , thereby leading the good devotees in the highest path of securing Lord's grace. Swamiji was thus striking in His ways in the congregation of jnanis and foremost among them.
.
वेदान्तशास्त्रार्थ्विचारदक्षः मॊदप्रदॊ वारितदुष्टपक्षः ।
देदीप्यतॆ॓॓$सौ भुवनेषु पूर्णप्रज्ञाभिदः श्री यतिराजवर्यः॥ ४॥

ವೇದಾಂತಶಾಸ್ತ್ರಾರ್ಥವಿಚಾರ ದಕ್ಷಃ ಮೋದಪ್ರದೋ ವಾರಿತದುಷ್ಟಪಕ್ಷಃ|
ದೇದೀಪ್ಯತೇ$ಸೌ ಭುವನೇಷು ಪೂರ್ಣಪ್ರಜ್ನಾಭಿದಃ ಶ್ರೀ ಯತಿರಾಜವರ್ಯಃ||೪||

Shri Purnaprajna teertha swamiji was foremost in showing the insights in the shaastra of the vedic corpus which was always pleasing to the disciples as it made available the secrets of  path of attaining bliss (moda pradah- moda is the everlasting bliss, moksha which can only be given by moda- blissfull vishnu, modapradah meaning swamiji was giving the ways to attain such modaprada, vishnu). This needed to show the shortcomings of other misleading paths which had arisen in the course of time, my misinterpreting the vedas and related texts, by ignorance and many times intentionally.

ವೇದಾಂತಶಾಸ್ತ್ರಗಳಲ್ಲಿ ಆಳವಾದ ಪಾಂಡಿತ್ಯದಿಂದ ತಾವು ಹೋದ ಕಡೆಗಳಲ್ಲಿ
ತಮ್ಮ ಪಾಠಪ್ರವಚನಗಳಿಂದ ಅವೈದಿಕ ಮತ್ತು ವೈದಿಕಮುಖವಾಡದ ಕಷ್ಟಪ್ರದ(ಅದ್ವೈತ)
ಶಾಸ್ತ್ರಗಳ ದುಷ್ಟವಿಚಾರಧಾರೆಯನ್ನು ಎತ್ತಿತೋರಿಸುತ್ತಾ ಮೋದಪ್ರದವಾದ ಶಾಸ್ತ್ರವನ್ನು
ತಿಳಿಯಾಗಿ ಹೇಳುತ್ತಾ ಶ್ರೀ ಪೂರ್ಣಪ್ರಜ್ನ ತೀರ್ಥರು ದೇದೀಪ್ಯಮಾನರಾಗಿದ್ದರು.( ಮೋದಪ್ರದ-
 ಇಲ್ಲಿ ಮೋದ ಎಂದರೆ ಆನಂದಪೂರ್ಣನಾದವಿಷ್ಣು. ಇಂತಹ ಆನಂದಪ್ರದನಾದ ವಿಷ್ಣುವಿನ
 ನೈಜಚಿತ್ರಣದ ಜ್ನಾನವೂ ಮೋದ. ಇದನ್ನು ಪ್ರದ- ಅಂದರೆ ಲೋಕಕ್ಕೆ ತೋರಿಸಿದವರು
 ಶ್ರೀಮದಾನಂದ ತೀರ್ಥರು. ಆದುದರಿಂದ ಮೋದ ಎಂದರೆ ಮಧ್ವರೂ ಹೌದು
. ಇಂತಹ ಮೋದಪ್ರದ, ಶಾಶ್ವತ ಸುಖಾನುಭವ ಪ್ರಾಪ್ತಿಗೆ ಕಾರಣವಾದ ಸಮೀಚೀನ
 ಜ್ನಾನವನ್ನು ಶ್ರೀ ಪೂರ್ಣಪ್ರಜ್ನರು ತಿಳಿಸಿಕೊಡುತ್ತಿದ್ದರು ಎಂದು ಒಟ್ಟೂ ಮೋದಪ್ರದ ಎಂಬ ಶಬ್ದಕ್ಕೆ ಅರ್ಥ)

विख्यात राजोचित चिह्नजालैः सितातपत्रोत्तम शंखतालैः ।
जितारिवेगे भुवनेषु पूर्णप्रज्ञाभिदः यतिराट् विभाति।।५॥

ವಿಖ್ಯಾತ ರಾಜೋಚಿತ ಚಿಹ್ನಜಾಲೈಃ ಸಿತಾತಪತ್ರೋತ್ತಮ ಶಂಖತಾಲೈಃ|
ಜಿತಾರಿವೇಗೇ ಭುವನೇಷು ಪೂರ್ಣಪ್ರಜ್ನಾಭಿಧಃ ಯತಿರಾಟ್ ವಿಭಾತಿ||೫||

Being a paarivraajya paramahamsa sanyasi, Sri Purnaprajna teerth was travelling fast along the places of His disciples like a King, with the various symbols fit for a king like the blowing of conches, daylight torches, dhwaja, chatra , chaamaras etc., conquering enemies of the divine ways.

ಪಾರಿವ್ರಾಜ್ಯ ಪರಮಹಂಸ ಸನ್ಯಾಸಿಗಳಾಗಿ ಪೀಠಾಧಿಪತಿಗಳೆಂದು ಅಧಿಕಾರಿಗಳಾದುದರಿಂದ ಆ ಪದವಿಗೆ ಶೋಭಿಸುವ ರಾಜವೈಭವದ ಚಿಹ್ನೆಗಳಾದ ಶಂಖದ್ವನಿ, ಛತ್ರ, ಚಾಮರ, ಧ್ವಜಾದಿಗಳಿಂದ ರಾಜೋಚಿತಮಾರ್ಗದಲ್ಲಿ ತಮ್ಮ ಶಿಷ್ಯವರ್ಗರಿರುವ ಊರುಗಳಲ್ಲಿ ಸಂಚರಿಸುತ್ತಾ ಸನ್ಮಾರ್ಗದಿಂದ ಜೀವನಕ್ಕೆ ಅಡ್ಡಿಪಡಿಸುವ ಸಮಾಜದಲ್ಲಿರುವ ಪಾಶವೀವಿಚಾರ ಧಾರೆಗಳನ್ನು ಹತ್ತಿಕ್ಕುತ್ತ ಪ್ರಕಾಶಿಸುತ್ತಿದ್ದರು.

श्रीविठ्ठलध्यान विधूतमॊहॊ देवेशमध्वार्चन पूत देहः।
जीवोत्तमार्याभिजनोत्ठ पूर्णप्रज्ञाख्ययॊगी भुवने विभाति॥६॥

Sri Purnaprajna teerth swamiji was a true yogi having conquered the wordly attachments and a pure mind with constant meditation in the lotus feet of Veera Vitthala, with a pure physical and mental existence through the divine worship of Supreme being, the Lord of Madhva. Being in the lineage of
the great Jeevottam teerth, He was a reknown for His wisdom.

ಶ್ರೀ ವೀರ ವಿಠ್ಠಲದೇವರ ಪದದಲ್ಲಿ ನಿತ್ಯ ಧ್ಯಾನಸಕ್ತರಾಗಿದ್ದು ಅರಿಷಡ್ವರ್ಗಗಳನ್ನು ಜಯಿಸಿ ಸಂಪೂರ್ಣ ವೈರಾಗ್ಯದಿಂದಿದ್ದು ದೇವೋತ್ತಮ ಮಧ್ವೇಶನ ನಿತ್ಯ ಅರ್ಚನೆಯಿಂದ ಕಾಯಾ ವಾಚಾ ಮನಸಾ ಅತ್ಯಂತ ಶುದ್ಧಗಾತ್ರರಾಗಿ ದೇಶದಲ್ಲಿ ಕಂಗೊಳಿಸುತ್ತಿದ್ದರು.

गोकर्णसंस्थान वराधिराजः लोकार्चितो सार्वनिवार्य तेजः।
शोकापह: साधुसभासु पूर्णप्रज्ञाभिदो भाति यतीन्द्रवर्यः ॥७॥

Sri Purnaprajna teerth swamiji , a reknown King in the kingdom of the great yati rajas of the Gokarna Partagali Jevottam math parampara was respected and honoured by the whole society. He was sparkling in the congregations of devotees, by getting rid of their suffering in this mundane life ..as well as leading them to get rid of the suffering bond of samsaara.

********
These seven verses of Sri Purnaprajna swamiji's stotra are available in the math. Reciting these will get the blessings of Sri Hari vAyu gurus. Shri Vishnu Shanbhag, Kumta

ಗೋಕರ್ಣ ಪರ್ತಗಾಳೀ ಜೀವೋತ್ತಮ ಮಠದ ಪರಂಪರೆಯ ಯತಿರಾಜರಲ್ಲೇ ಹಿರಿದಾದ ರಾಜರಾಗಿ ಸಮಾಜದ ಸಭೆಗಳಲ್ಲಿ ದಿವ್ಯ ತೇಜಸ್ಸಿನಿಂದ ಕಣ್ಗೊಳಿಸುತ್ತಾ ಜನರ ಐಹಿಕ ಕಷ್ಟಪರಂಪರೆಯನ್ನು ನೀಗಲು ಸಹಾಯ ಮಾಡುತ್ತ, ಅನಾದಿಕಾಲೀನ
ಸಂಸಾರಬಂದನವೆಂಬ ಘೋರಕಷ್ಟವನ್ನು ದೂರಪಡಿಸಲು ಸನ್ಮಾರ್ಗದರ್ಶನ ಮಾಡುತ್ತ ದಾರಿದೀಪವಾಗಿದ್ದರು.
ಈ ಏಳು ಶ್ಲೋಕಗಳು ಶ್ರೀ ಪೂರ್ಣಪ್ರಜ್ನತೀರ್ಥ ಸ್ವಾಮೀಜಿಯವರ ಬಗ್ಗೆ ಮಠದಲ್ಲಿ ಉಪಸ್ಥಿತವಿದ್ದು ಇದನ್ನು ಪಠಿಸಿದವರಿಗೆ ಶ್ರೀ ಹರಿ ಗುರುಗಳ ಕೃಪೆ ದೊರೆತು ಸಕಲ ಸನ್ಮಂಗಳವಾಗುವದರಲ್ಲಿ ಸಂಶಯವಿಲ್ಲ ಎಂದು ಪ್ರಾರ್ಥಿಸುವ ವಿಷ್ಣು ವೆಂಕಟದಾಸ್ ಶ್ಯಾನಭಾಗ, ಕುಮಟಾ.
|| श्री मध्वेशार्पणमस्तु ||

Wednesday, May 17, 2017

श्री वादिराजथीर्थ कृत रुग्मिणीश विजयः Rugminisha Vijaya by Sri Vadiraja Thirtha - Part 1




।। हरि: ॐ श्री गुरुभ्यो नमः ।। 
।। रुग्मिणीश विजयः ।। 

प्रथमः सर्ग: 
श्रीवेदान्तमहाचलं हि परितः संयोज्य सूत्राहिपं 
सद्वातागमपोषितात्महृदयं तत्पूर्वपक्षासुरै:।
सिद्धान्तोक्तिसुरेश्वरैश्च मथितो यः कृष्ण दुग्धाम्बुधिः 
स्वीयानाममृतं प्रयच्छति स मां पायाद्गुणोद्यन्मणि: ।। 1 ।।

 Here SriKrishna is compared to the ocean of milk, Gods and Demons to purva paksha and siddhAnta ( objections and conclusive  answers),  serpent Vasuki to brahmasutras ,Mandara mountain to Vedanta, Moksha to the amrita.
Using the rope which are brahma sutras invigorated by Srimadacharya's sadAgamas curled round the mountain of Vedanta ,the ocean full of unsullied bliss and auspiciousness ,Sri Krishna was churned by the Demons and Gods of pUrvapaksha and siddhAnta to give the nectar of moksha , an eternal state of bliss to the followers of Acharya Madhva. May such ksheerasAgara Sri Krishna protect us.

ಶ್ರೀಮದಾನಂದ ತೀರ್ಥರ ಸದಾಗಮಗಳಿಂದ ಪೋಷಿತವಾದ ವೇದಾತಾತ್ಪರ್ಯ ನಿರ್ಣಾಯಕಗಳಾದ ಬ್ರಹ್ಮಸೂತ್ರಗಳೆಂಬ ವಾಸುಕೀ ಎಂಬ ಹಗ್ಗದಿಂದ ವೇದಾಂತವೆಂಬ ಮಂದರ ಪರ್ವತವನ್ನು ಸುತ್ತಿಸಿ , ಪೂರ್ವಪಕ್ಷ-ಸಿದ್ಧಾಂತಗಳೆಂಬ ದೈತ್ಯ-ದೇವತೆಗಳು ಸಕಲಸದ್ಗುಣ, ಜ್ಞಾನಾನಂದಪೂರ್ಣ ಶ್ರೀಕೃಷ್ಣನೆಂಬ ಕ್ಷೀರಸಾಗರವನ್ನು ಕಡೆಯಲು , ಶ್ರೀಮದಾನಂದತೀರ್ಥರ ಪಕ್ಷದ ಸಜ್ಜನರಿಗೆ ಮೋಕ್ಷವೆಂಬ ಅಮೃತವನ್ನು ಕೊಡುವ ಶ್ರೀಕೃಷ್ಣನು ರಕ್ಷಿಸಲಿ.

सच्छास्त्रोदितवर्त्मना पदमिदं ध्यायन्मदंकांकितो 
मन्मंत्रं जप शास्त्रसंपदमथो दास्यामि भाग्ये: सह।
तत्तत्त्वान्यपि बोधयामि तदानुप्राप्यो मदंघ्रिर्भवे- 
दित्याघोषयतीव यः करचयैस्तं वाजिवक्त्रं भजे ।।2।।

Lord Hayagreeva seems to be indicating these from the position of His four hands.
Guided by sat-shAstra meditate on me with full devotion. Wear my lAnChanas-(shankha cakra) and be immersed in repeating my name (savouring the meaning of those).  I will fulfill you with the incomparable wealth of knowledge that leads to eternal bliss together with mundane wealth to live comfortably in this world. I will also make you understand the deep secrets of tenets of shAstras and grant release from the eternal bonds.
( The hand holding the book with jnAna mudra indicating bestowal of jnAna and wealth , the hand holding shankha (indicating wearing of His lAnChanas), the hand holding aksha mAla indicating reciting of His names, the three fingers- middle finger ,forefinger and little finger pointing to His legs)

ತಮ್ಮ ಆರಾಧ್ಯ ಹಯಗ್ರೀವ ಮೂರ್ತಿಯನ್ನು ಭಜಿಸುತ್ತಾ ಹೇಳುತ್ತಾರೆ. 
"ಸದಾಗಮಗಳಿಂದ ಪಡೆದ ಜ್ಞಾನದಿಂದ ನನ್ನ ಪದವನ್ನೇ ಧ್ಯಾನಿಸುತ್ತ, ನನ್ನ ಚಕ್ರಶಂಖಾದಿ ಲಾಂಛನಗಳನ್ನು ಧರಿಸಿಕೊಂಡು (ಪವಿತ್ರವಾದ ತನುವಿನಿಂದಲೂ , ಮನಸ್ಸಿನಿಂದಲೂ) ನನ್ನ ನಾಮಮಹಿಮೆಯನ್ನು ಮನನಮಾಡುತ್ತ ಜಪಿಸಿ. ಐಹಿಕಸಂಪತ್ತನ್ನೂ ,ಶಾಸ್ತ್ರಸಂಪತ್ತಿನೊಂದಿಗೆ ಅದರ ತಿರುಳಾದ ತತ್ತ್ವಸಂಪತ್ತನ್ನೂ ನಿಮಗೆ ಮನದಟ್ಟುಮಾಡಿಸಿಕೊಡುತ್ತೇನೆ. ಆ ಭಾಗ್ಯವನ್ನು ಪಡೆದುಕೊಂಡು ನೀವು ನನ್ನ ಪಾದಸಾನ್ನಿಧ್ಯದ ಮೋಕ್ಷರೂಪಿ ಫಲವನ್ನು ಪಡೆಯುವಿರಿ."
ಹೀಗೆಂದು ಶಂಖ, ಅಕ್ಷಮಾಲೆ, ಪುಸ್ತಕ, ಜ್ಞಾನಮುದ್ರಾ ಹಸ್ತಗಳಿಂದ ತಿಳಿಸುತ್ತಿರುವ ಹಯಮುಖನನ್ನು ಭಜಿಸುತ್ತೇನೆ ।।2।।

श्रये हयमुखं श्राव्यकाव्यमार्ग समाप्तये ।
सरागयोगिपूगोक्त स्तोत्रतोत्रवशं महः ।।3।।

I take refuge in the kindness of Hayamukha for completion of this poetical work (which describes the auspicious nature of Lord and therefore bestows auspiciousness on the devotee who listens to this) , who is always pleased with descriptions of His wondrous ways.

ಯೋಗಿಗಳಿಂದ ಮಾಡಲ್ಪಟ್ಟ ಗುಣಮಹಿಮಾವರ್ಣನೆಗೆ ವಶನಾಗುವ ಹಯಮುಖನನ್ನು , ಅವನ ಗುಣಾಮಹಿಮಾವರ್ಣನರೂಪವಾದ ,ಕೇಳಲು ಅತ್ಯಂತ ಮಂಗಳಕರವಾದ , ಈ ಕಾವ್ಯದ ಪೂರ್ಣತೆಗಾಗಿ ಆಶ್ರಯಿಸುತ್ತೇನೆ

शिंजन्नूपुरशोभिपादयुगलां मंदस्मितोद्यन्मुखीम् ।
कंजाक्षीम् कुचभारभीरुविलसन्मध्यां क्वणत् कंकणाम् ।
शंभ्वाद्मै: परिसेवितां सुवसनां जाम्बूनदालंकृताम् 
अम्बाम् तां प्रणतोस्मि कृष्णरमणीं लंबालकां रुक्मिणीम् ।।4।।

Soft feet adorned with musical anklets and the with lotus eyed beautiful  smiling face, the  heaviness of the top emphasizing the thin waist , the bangles making sweet sound, wearing a pure glowing dress, surrounded in the middle by decorated golden belt, full of curly hairs , worshipped by Brahma, Rudra and others, fit as a blessed companion to Lord Krishna , I prostrate to such a Rukmini devi.

ಝಣಝಣನಾದಗೈವ ನೂಪುರಗಳಿಂದ ಶೋಭಿಸುವ ಕೋಮಲವಾದ ಪದದ್ವಂದ್ವಗಳುಳ್ಳವಳು , ಮಂದಹಾಸದಿಂದ ಉಲ್ಲಸಿತವಾದ ಮುಖಕಮಲವುಳ್ಳವಳು,   ಕಮಲದೆಸಳಿನಂತೆ ವಿಕಸಿತವಾದ ಕಣ್ಣುಗಳುಳ್ಳವಳು , ಸ್ತನಭಾರಗಳಿಗೆ ಹೆದರಿ ಕುಗ್ಗಿತೋ ಎಂಬಂತಿರುವ ಕೃಶವಾದ ನಡುವುಳ್ಳವಳು, ಕಿಣಿಕಿಣಿ ಮಂಜುಳನಾದಗೈವ ಕಂಕಣಗಳಿಂದ , ಹೊಳೆವ ಶುಭ್ರ ವಸನವನ್ನುಟ್ಟಿರುವವಳು, ಸೊಂಟದಲ್ಲಿ ಬಹುರತ್ನಗಳಿಂದ ಖಚಿತವಾದ ಬಂಗಾರದ ಪಟ್ಟೆಯುಳ್ಳವಳು, ಗುಂಗುರಾದ ಕೇಶರಾಶಿಯಿಂದ ಶೋಭಿಸುತ್ತಿರುವವಳು, ಬ್ರಹ್ಮ ರುದ್ರಾದಿ ದೇವತಾವೃಂದಾಗಳಿಂದ ಸದಾ ಪೂಜಿತಳು, ಶ್ರೀ ಕೃಷ್ಣನ ಮನೋರಮಣಿಯು , ಜಗನ್ಮಾತೆಯೂ ಆದ ರುಕ್ಮಿಣೀ ದೇವಿಗೆ ನಮಿಸುತ್ತೇನೆ. ।।4।।

सत्संघमानससरोवरमध्यवर्ती
कृष्णाङ्घ्रिचारुकमलार्पितचित्त वृत्ति:।
शास्त्रातिमंजुपदरंजितरम्यसंस-
दास्माकहृत्सरासिजे$स्तु स मध्वहंसः ।।5।।

Sriman Madhva , the great pure white swan- paramahamsa pakshi- swimming in the  middle of manasa sarovara of divine persons, who has fixed His mind forever firmly in the incomparably beautiful lotus feet of Sri Krishna, the one who captures the attention of the congress of divine minded with His words of wisdom in line with proper sources of knowledge, may come and settle in my heart. 

ಸಜ್ಜನರ ಸಂಘದ ಮಾನಸಸರೋವರದಲ್ಲಿ ವಿಹರಿಸುತ್ತಿರುವ, ತದೇಕಚಿತ್ತದಿಂದ ಪರಮಮಂಗಳಕರವಾದ ಶ್ರೀಕೃಷ್ಣನ ಸುಂದರ ಪದಕಮಲದಲ್ಲೇ ತಮ್ಮ ಮನವನ್ನು ನೆಟ್ಟಿರುವ, ಸಜ್ಜನರ ಸಭೆಯನ್ನು  ಸದ್ಗತಿಪ್ರದವಾದ ಸಚ್ಚಾಸ್ತ್ರಗಳಿಗನುಕೂಲ ತಮ್ಮ ಮಾತುಗಳಿಂದ ರಮಿಸುತ್ತಿರುವ ಶ್ರೀಮನ್ ಮಧ್ವಹಂಸವು ನಮ್ಮ ಹೃದಯಕಮಲದಲ್ಲಿ ಬಂದು ನೆಲೆಸಲಿ.

ताटंकद्वय शोभि कर्ण युगलं भ्राजद्दयावीक्षणं
पूर्णेन्दुद्युति विद्रुमाधररुचा व्यामिश्रमंदस्मितम् ।
ईशत्कुंचितकुंतलं सतिलकं नासोल्लसन्मौक्तिकं ।
भूयात्कूर्मसदृक्षकर्णयुगलं वाणीमुखं श्रेयसे ।।6।।

May the mere glance from Saraswati devi bless us with the knowledge that takes us toward the final grace of Lord. 
(Sri Vadiraja teerth swamin describes the exquisite beauty of the face ) Vani devi's ears have rings which are shining brightly. Her  glance is full of  kindness. Fresh and enlivening like a full moon with a smile from coral like lips, the nose studded with pearl ring, cheeks full and rounded like the back of a tortoise, and curly hairs adjoining Her face is auspicious with the vermilion mark on the forehead.

ಶೋಭಾಯಮಾನವಾದ ಕರ್ಣಾಭರಣಗಳು ಜೋಲಾಡುತ್ತಿರುವ, ದಯಾಪೂರ್ಣವಾದ ದೃಷ್ಟಿಯಿಂದ ನೋಡುತ್ತಿರುವ,, ಹುಣ್ಣಿಮೆಯ ಚಂದ್ರನಂತೆ ಆಹ್ಲಾದಕರವಾಗಿರುವ, ಹವಳದಂತಿರುವ ಕೆಂದುಟಿಗಳಿಂದ ಮಂದಹಾಸ ಬೀರುತ್ತಿರುವ, ಮುತ್ತಿನ ಮೂಗುತಿಯಿಂದ ಶೋಭಿಸುತ್ತಿರುವ, ಆಮೆಯ ಬೆನ್ನಿನಂತೆ ದುಂಡಗೆ ತುಂಬಿಕೊಂಡ ಕೆನ್ನೆಗಳಿರುವ, ಸುತ್ತಲೂ ಗುಂಗುರವಾದ ಕೂದಲುಗಳಿಂದ, ಒಪ್ಪುವ ತಿಲಕದಿಂದ ಮಂಗಲಮಯವಾದ ವಾಣೀದೇವಿಯ ಮುಖಕಮಲವು ನಮ್ಮ ಶ್ರೇಯಸ್ಸಿಗೆ ಕಾರಣವಾಗಲಿ || 6 || 

श्रीनाथकीर्त्यम्बुजसेव्यगंधं 
प्राणः स संगृह्य विहर्तुमीष्टे।
सो$हं तदीयागमविस्तृतं तद् 
वाणी मुखं वासयितुं वृणोमि ।।7।।


Only Jeevottama Mukhyaprana is fit and capable to collect and enjoy in the fragrance of Greatness of Lord of Lakshmidevi. From the same blissful fragrance, which is a distilled essence of sadAgamas I will spread it for our vAkshuddhi. ।।7।।

ಶ್ರೀದೇವಿಯ ಮನೋರಮಣನ ಕೀರ್ತಿಯೆಂಬ ಕಮಲದ ಸುಗಂಧವನ್ನು ಸಂಗ್ರಹಿಸಿ ವಿಸ್ತರಿಸಲು ಶಕ್ತನಾದ ಅಧಿಕಾರಿಯು ಪ್ರಾಣನೇ ಸರಿ. ಸದಾಗಮದ ಸಾರಭೂತವಾದ ಮಧ್ವಮುನಿಗಳ ಶಾಸ್ತ್ರಸುಗಂಧದಿಂದ ನಮ್ಮ ವಾಕ್ ಶುದ್ಧಿಯನ್ನು ಮಾಡಲಿಚ್ಛಿಸುತ್ತೇನೆ. (ಇದರ ಅಂತರಂಗವೇನೆಂದರೆ ಶ್ರೀಮದಾನಂದತೀರ್ಥರ ಶಾಸ್ತ್ರವನ್ನು ತಿಳಿಯದೇ ಶ್ರೀಕೃಷ್ಣಭಗವಂತನ ಮಹಿಮೆಯ ಜ್ಞಾನವಾಗಲು ಅಶಕ್ಯವಾದುದರಿಂದ ಅದರ ಮೂಲಕವೇ ಜನ್ಮಸಾರ್ಥಕ್ಯ ಮಾಡಿಕೊಳ್ಳುತ್ತೇವೆ. ಅರ್ಥಾತ್ ಈ ಗ್ರಂಥವು ಮಧ್ವಾಶಾಸ್ತಕ್ಕನುಸಾರವಾಗಿ ರಚಿಸಲ್ಪಟ್ಟಿದೆ ಎನ್ನುತ್ತಾರೆ) ।।7।।

हयास्यनासापुटजातवात-
विघातधूताघपलालजातः ।
मुनीशवागीशसुतः सुरम्यां 
हरे: कथां शंसति वादिराजः ।।8।।

Sri Vadiraja , disciple of king of ascetics Sri Vageesha teertha, pure with the sins blown off with the air from the nose of Lord Hayavadana as piles of dust is blown off with wind, writes down the auspicious biography of Srihari. ( With the use of third person *writes down* instead of *I write* Sri Vadiraja teertha indicates that the real composer is Lord Himself)

ಶ್ರೀ ಹಯವದನದೇವರ ಮೂಗಿನ ಹೊರಳುಗಳಿಂದ ಹೊರಟ ಗಾಳಿಯ ವೇಗಕ್ಕೆ ಪಾಪರಾಶಿಯೆಂಬ ಧೂಳಿನ ರಾಶಿಯು ಹಾರಿಹೋಗಿ ಶುದ್ಧವಾದ , ಮುನಿಪುಂಗವರಾದ ಶ್ರೀವಾಗೀಶ ತೀರ್ಥರ ಶಿಷ್ಯರಾದ ವಾದಿರಾಜರು ಶ್ರೀಹರಿಯ ರಮ್ಯವಾದ ಚರಿತ್ರೆಯನ್ನು ವರ್ಣಿಸುತ್ತಾರೆ. ( ವರ್ಣಿಸುತ್ತೇನೆ ಎನ್ನುವ ಬದಲು ವರ್ಣಿಸುತ್ತಾರೆ ಎಂದು ಹೇಳಿ ಈ ಗ್ರಂಥದ ಕರ್ತೃ ಮುಖ್ಯವಾಗಿ ಶ್ರೀಹರಿಯೇ ಎನ್ನುವದನ್ನು ಸೂಚಿಸಿದ್ದಾರೆ)

अपण्डितेनापि मयार्जितेयं 
मुकुंदलीला कविकंठमाला ।
अकौशलेन ग्रथितेति जाति-
प्रसूनमालां किमु संत्यजन्ति ।।9।।

(To point out that one should be humble, Sri Vadiraja writes) 

Though not an expert in poetry, the biography of the Supreme, bestower of moksha , written by me is worthy enough to be valued by the poets. Does anyone discard the garland of fragrant jasmine flowers just because it has been tied unevenly by rough hands?

(ಲೋಕಶಿಕ್ಷಣಕ್ಕಾಗಿ ರಾಜರು ಹೇಳುತ್ತಾರೆ) 
ಪಂಡಿತನಲ್ಲವಾದರೂ ನನ್ನಿಂದ ರಚಿತವಾದ ಮುಕ್ತಿದಾಯಕನ ಈ ಚರಿತ್ರೆ ಕವಿಗಳೆಲ್ಲರಿಗೂ ಕಂಠಕ್ಕೆ ಆಭೂಷಣವೇ ಆಗಿದೆ. ಅಕುಶಲನಿಂದ ಕಟ್ಟಲ್ಪಟ್ಟ ಸುವಾಸನೆಯ ಜಾಜೀ ಮಾಲೆಯು ಅಡ್ಡತಿಡ್ಡವಾಗಿದೆಯೆಂದು ಯಾರಾದರೂ ಅದನ್ನು ಬಿಸುಡುತ್ತಾರೇನು?

अपि प्रमादागतदोषलेशा -
मिमां कवित्वश्रियमाद्रियध्वम् ।
बुधा विदग्धै: किमुपेक्षणीया 
पयोब्धिजा चंचलताख्यदोषात् ।।10।।

If any shortcomings are seen in this poetical composition, they should not be considered. No one ignores and discards Shreedevi because some see Her as whimsical (fickle). 

( In this verse Rajaru has noted in His inimitable style that the composition is free from shortcomings. It is an established fact that Lakshmidevi has no faults. The way some describe Her as unstable stems from their wrong understanding . No such faults are present in Sri devi. Similarly no faults can be present in the kAvya Sri that has come forth from Rajaru )

ಈ ಕಾವ್ಯಶ್ರೀಯಲ್ಲಿ  ಕಿಂಚಿತ್ ನ್ಯೂನತೆಗಳಿದ್ದರೂ ( ಪ್ರಮಾದವಶಾತ್ ಎಂದಿದ್ದರೂ ಅದು ಹೇಗೆ ಕೂಡುವದಿಲ್ಲ ಎನ್ನುವದನ್ನು ಮುಂದೆ ವಿವರಿಸಿದ್ದೇನೆ) ಅವನ್ನು ಪರಿಗಣಿಸಬಾರದು. ಯಾವ ರೀತಿ ಚಂಚಲತೆ ಎನ್ನುವ ದೋಷದಿಂದ ಕ್ಷೀರಾಬ್ಧಿಸಂಭವಳಾದ ಶ್ರೀಲಕ್ಷ್ಮೀ ದೇವಿಯನ್ನು ಉಪೇಕ್ಷಿಸುವದಿಲ್ಲವೋ ಅದರಂತೆ ಈ ಕಾವ್ಯವು ಉಪೇಕ್ಷಣೆಗೆ ತಕ್ಕುದಲ್ಲ. ಇದನ್ನು ಆದರದಿಂದ ಸ್ವೀಕರಿಸಿ !

( ಲಕ್ಷ್ಮೀ ದೇವಿ ದೋಷರಹಿತಳು. ಆದರೆ ಅವಳಲ್ಲಿ ಚಾಂಚಲ್ಯದೋಷವಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ. ಆದರೆ ಈ ದೋಷವು ನೋಡುವವರ ಕಣ್ಣಲ್ಲಿ ಮಾತ್ರ ಹೊರತು ಲಕ್ಷ್ಮೀ ದೇವಿಯಲ್ಲಿ ಇಲ್ಲ. ಅದೇ ರೀತಿ ರಾಜರು ಬರೆದ ಕಾವ್ಯದಲ್ಲಿ ಪ್ರಮಾದದಿಂದಾಗಲೀ ಇತರ ಕಾರಣಗಳಿಂದಾಗಲೀ ದೋಷಗಳಿರಲು ಅಶಕ್ಯ ಅದಕ್ಕೇ ಇದನ್ನು ರಾಜರು ಕಾವ್ಯಶ್ರೀ ಎಂದು ಕರೆದಿದ್ದಾರೆ. ಅದರಿಂದ ಹೇಗೆ ಶ್ರೀದೇವಿಯಲ್ಲಿ ದೋಷಗಳಿಗೆ ಅವಕಾಶವಿಲ್ಲವೋ ಹಾಗೆಯೇ ಈ ಕಾವ್ಯಶ್ರೀಯಲ್ಲೂ ದೋಷಗಳಿರಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜರು)
...

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...